Site icon Vistara News

Sreeleela | ನಟಿ ಶ್ರೀಲೀಲಾ ತಾಯಿ ವಿರುದ್ಧ ದಾಖಲಾಯ್ತು ಎಫ್‌ಐಆರ್‌: ಡೀಲ್ ಮಾಡಲು ಹೋಗಿ ಕೇಸಲ್ಲಿ ಫಿಟ್!

Sreeleela

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ಶ್ರೀಲೀಲಾ (Sreeleela) ತಾಯಿ ಸ್ವರ್ಣಲತಾ ಯುನಿವರ್ಸಿಟಿ ಮಾರಾಟ ಡೀಲ್‌ಗೆ ಕೈ ಹಾಕಿದ ಪರಿಣಾಮ ಅವರ ವಿರುದ್ಧ ಎಫ್ಐಆರ್‌ ಗುರುವಾರ (ಸೆ.15) ದಾಖಲುಗೊಂಡಿದೆ. ಇದರಿಂದಾಗಿ ಶ್ರೀಲೀಲಾ ತಾಯಿ ಸ್ವರ್ಣಲತಾ ಪರಾರಿಯಾಗಿದ್ದಾರೆ. ಪೊಲೀಸರು ಸ್ವರ್ಣಲತಾಗೆ ತೀವ್ರ ಹುಡುಕಾಟ ನಡೆಸಿದ್ದಾರೆ.

ಕೋಟಿ ಡೀಲ್‌ ಮಾಡಲು ಹೋಗಿ ಕೇಸ್‌ನಲ್ಲಿ ಫಿಟ್‌!
ನೂರಾರು ಕೋಟಿ ಡೀಲ್‌ ಮಾಡಲು ಹೋಗಿ ಸ್ವರ್ಣಲತಾ ಕೇಸ್‌ನಲ್ಲಿ ಫಿಟ್‌ ಆಗಿದ್ದಾರೆ. ಖ್ಯಾತ ರಾಜಕಾರಣಿಗೆ ಅಲೆಯನ್ಸ್ ವಿವಿ ಮಾರಲು ಸ್ವರ್ಣಲತಾ ಮುಂದಾಗಿದ್ದರು. ಮಧುಕರ್ ಅಂಗೂರ್‌ನಿಂದ ಯುನಿವರ್ಸಿಟಿ ಮಾರಾಟಕ್ಕೆ ಸ್ವರ್ಣಲತಾ ಕುದುರಿಸಿದ್ದರು. ಆದರೆ ಯುನಿವರ್ಸಿಟಿಯಿಂದ ಈಗಾಗಲೇ ಮಧುಕರ್ ಹೊರಗೆ ಬಿದ್ದಿದ್ದ. ಸೆಷನ್ಸ್‌ ಕೋರ್ಟ್‌ ಹಾಗೂ ಹೈಕೋರ್ಟ್ ಆದೇಶದ ಮೇರೆಗೆ ಮಧುಕರ್‌ನನ್ನು ಹೊರಗೆ ಹಾಕಲಾಗಿತ್ತು. ಮಧುಕರ್ ಅಂಗೂರ್‌ನಿಂದ ರಾಜಕಾರಣಿಗೆ ವಿವಿ ಮಾರಾಟದ ಡೀಲ್ ಕುದುರಿತ್ತು. ಆದರೆ ಅಲೆಯನ್ಸ್ ಯುನಿವರ್ಸಿಟಿ ಮಾತ್ರ ಮಧುಕರ್ ಅಂಗೂರ್ ವಶದಲ್ಲಿ ಇರಲಿಲ್ಲ.

ಗೂಂಡಾಗಳ ಜತೆ ಬಂದೂಕು ಹಿಡಿದುಕೊಂಡು ಗಲಾಟೆ
ಕೆಲ ಗೂಂಡಾಗಳನ್ನು ಕರೆದುಕೊಂಡು ಮಧುಕರ್ ಹಾಗೂ ಸ್ವರ್ಣಲತಾ ಸೆ.10ರಂದು ಬೆಳಗ್ಗೆ 11 ಗಂಟೆಗೆ ಯುನಿವರ್ಸಿಟಿ ಅಡ್ಮಿನ್ ಬ್ಲಾಕ್ ಒಳಗೆ ಬಂದು ಗಲಾಟೆ ಮಾಡಿದ್ದಾರೆ. ಯುನಿವರ್ಸಿಟಿ ಒಳಗೆ ಇದ್ದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಎಲ್ಲರ ಮೇಲೆ ಬಂದೂಕಿನಿಂದ ಶೂಟ್ ಮಾಡುವುದಾಗಿ ಹೆದರಿಸಿ ಪ್ರಕ್ಷುಬ್ದ ವಾತಾವರಣ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ. ಗುಂಪು ಕಟ್ಟಿಕೊಂಡು ಬಂದಿದ್ದ ಎಲ್ಲರ ಮೇಲೆ ಕ್ರಮಕ್ಕೆ ಯುನಿರ್ವಸಿಟಿ ರಿಜಿಸ್ಟ್ರಾರ್ ಡಾ. ನಿವೇದಿತಾ ಮಿಶ್ರಾ ಅವರಿಂದ ಆನೇಕಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ ಆಗಿದೆ.

ಇದನ್ನೂ ಓದಿ | Air India | ಏರ್‌ ಇಂಡಿಯಾಗೆ 200 ಹೊಸ ವಿಮಾನ ಖರೀದಿಸುವ ಅತಿ ದೊಡ್ಡ ಡೀಲ್‌ಗೆ ಟಾಟಾ ಮಾತುಕತೆ

ಸ್ವರ್ಣಲತಾ ನಾಪತ್ತೆ!
ಎಫ್ಐಆರ್ ದಾಖಲಾಗುತ್ತಿದ್ದಂತೆ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಪರಾರಿಯಾಗಿದ್ದಾರೆ. ಅವರಿಗಾಗಿ ಆನೇಕಲ್ ಪೊಲೀಸರಿಂದ ತೀವ್ರ ಹುಡುಕಾಟ ನಡೆಸುತ್ತಿದೆ. ನಟಿ ಶ್ರೀಲೀಲಾ ತಾಯಿ ಡಾ.ಸ್ವರ್ಣಲತಾ ಖ್ಯಾತ ಗೈನಕಾಲಜಿಸ್ಟ್ ಕೂಡ ಆಗಿದ್ದಾರೆ. ಆದರೆ, ರಾಜಕಾರಣಿಯೊಬ್ಬರಿಗೆ ಯುನಿವರ್ಸಿಟಿಯ ವಿವಾದಿತ ಆಸ್ತಿ ಮಾರಾಟಕ್ಕೆ ಯತ್ನಿಸಿದ್ದು, ಬಂದೂಕು ಹಿಡಿದ ಗೂಂಡಾಗಳ ಜತೆ ಯುನಿವರ್ಸಿಟಿಗೆ ನುಗ್ಗಿ ಸ್ವರ್ಣಲತಾ ಸಿಕ್ಕಿಬಿದ್ದಿದ್ದಾರೆ.

ಎಫ್ಐಆರ್‌ ದಾಖಲಿಸಿರುವ ಆನೇಕಲ್ ಪೊಲೀಸರಿಂದ ಮಧುಕರ್ ಅಂಗೂರ್ ಬಂಧನವಾಗಿದೆ. ಮಧುಕರ್ ಅಂಗೂರ್ ಜತೆ ಗೂಂಡಾಗಿರಿ ಮಾಡಿದ ಕೆಲವರನ್ನೂ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಆರೋಪಿ ನಂಬರ್ 2 ಆಗಿರುವ ಡಾ.ಸ್ವರ್ಣಲತಾ ಮಾತ್ರ ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ | ಕರಕುಶಲ ಮಂಡಳಿ ಅಧ್ಯಕ್ಷರಿಂದ ₹ 5 ಕೋಟಿ ಡೀಲ್‌: ರೂಪಾ ಮೌದ್ಗಿಲ್‌ ಆರೋಪ

Exit mobile version