ಬೆಂಗಳೂರು: ಬೆಂಗಳೂರಿನಲ್ಲಿ ಕೆಂಗೇರಿಯ ನಾಡಕಚೇರಿಯಲ್ಲಿ ಶನಿವಾರ ಬೆಂಕಿ ಅವಘಡ ಸಂಭವಿಸಿದೆ. ಕೆಂಗೇರಿಯ ಕದಂಬ ಹೋಟೇಲ್ ಕೆಳಭಾಗದಲ್ಲಿರುವ ನಾಡಕಚೇರಿಯಲ್ಲಿ ಘಟನೆ ನಡೆದಿದ್ದು, (Fire accident) ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿದರು. ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದ್ದಾರೆ. ಕಚೇರಿ ಆವರಣ ಪ್ರವೇಶ ದ್ವಾರದ ಬಳಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಇಡೀ ಕಚೇರಿಗೆ ಬೆಂಕಿ ಆವರಿಸಿತ್ತು.
ಅವಘಡದಲ್ಲಿ ಕಚೇರಿಯ ದಾಖಲೆಗಳು ಸುಟ್ಟು ಕರಕಲಾಗಿದೆ. ಕಂಪ್ಯೂಟರ್ ರೂಂ ನಲ್ಲಿ ಕೂಡ ಬೆಂಕಿ ಕಾಣಿಸಿತ್ತು. ಸದ್ಯ ಘಟನೆಗೆ ಸಂಬಂಧಿಸಿದಂತೆ ನಾಡಕಚೇರಿ ಸಿಬ್ಬಂದಿಯಿಂದ ದೂರು ದಾಖಲಾಗಿದೆ. ಕೆಂಗೇರಿ ಪೊಲೀಸ್ ಠಾಣೆಗೆ ಅಧಿಕಾರಿಗಳು ದೂರು ನೀಡಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕೊಪ್ಪಳದಲ್ಲಿ ಮಳೆ: ಬಿಸಿಲಿನಿಂದ ಕಂಗೆಟ್ಟಿದ್ದ ಕೊಪ್ಪಳದಲ್ಲಿ ಮಳೆಯಾಗಿದೆ. ಕೊಪ್ಪಳದಲ್ಲಿ ಶನಿವಾರ ರಾತ್ರಿ ಮಳೆಯಾಗಿದೆ. ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದೆ.
ಕಲಬುರಗಿಯಲ್ಲಿ ಹಂದಿ ದಾಳಿಗೆ ರೈತ ಬಲಿ: ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಕಾಡು ಹಂದಿ ದಾಳಿಗೆ ರೈತ ಸಾವಿಗೀಡಾದ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ತೆಗಲತಿಪ್ಪಿ ಗ್ರಾಮದಲ್ಲಿ ಘಟನೆ ನಡೆದಿದೆ. ಗುರುನಾಥ್‌ರೆಡ್ಡಿ (46) ಮೃತ ರೈತರಾಗಿದ್ದಾರೆ. ಜಮೀನಿನಲ್ಲಿ ತೊಗರಿ ಕೊಯಿಲು ಸುಡಲು ಹೋದಾಗ ಕಾಡು ಹಂದಿ ದಾಳಿ ನಡೆಸಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಗುರುನಾಥ್ ಸಾವಿಗೀಡಾದರು. ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.