ಬೆಂಗಳೂರು: ರಾಜಧಾನಿಯಲ್ಲಿ ಹಾಡಹಗಲೇ ಗುಂಡಿನ ಸದ್ದು (Firing in Bangalore) ಮೊರೆದಿದೆ. ದರೋಡೆಗೆಂದು ಜುವೆಲ್ಲರಿಗೆ (Attack on Jewellery) ನುಗ್ಗಿದ ಇಬ್ಬರು ದುಷ್ಕರ್ಮಿಗಳು ಹಣ ಕೊಡಲು ಒಪ್ಪದ ಮಾಲೀಕನ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಬೆಂಗಳೂರಿನ ಕೊಡಿಗೆಹಳ್ಳಿ ಬಳಿಯ ದೇವಿ ನಗರದಲ್ಲಿರುವ ಲಕ್ಷ್ಮೀ ಜುವೆಲ್ಲರ್ಸ್‌ನಲ್ಲಿ (Lakshmi Jewellery) ಗುರುವಾರ ಹಾಡಹಗಲೇ ಈ ಘಟನೆ ನಡೆದಿದ್ದು, ಪರಿಸರದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಇಬ್ಬರಿಗೆ ಗುಂಡಿನ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂದಾ ರಾಮ್ ಹಾಗು ಆಪುರಾಮ್ ಎಂಬವರಿಗೆ ಸೇರಿದ ಲಕ್ಷ್ಮೀ ಜುವೆಲ್ಲರಿಗೆ ಇಬ್ಬರು ದರೋಡೆಕೋರರು ನುಗ್ಗಿದ್ದರು. ಬೈಕ್‌ನಲ್ಲಿ ಬಂದಿದ್ದ ಅವರು ಬೈಕ್ ನಿಲ್ಲಿಸಿ ನೇರವಾಗಿ ಅಂಗಡಿಗೆ ನುಗ್ಗಿದ್ದಾರೆ. ಚಿನ್ನದ ಅಂಗಡಿ ಮಾಲೀಕರ ಬಳಿ ತಮಗೆ ಹಣ ನೀಡುವಂತೆ ಕೇಳಿದ್ದಾರೆ. ಪಿಸ್ತೂಲು ತೋರಿಸಿಯೇ ಹಣ ಕೇಳಿದ್ದಾರೆ. ಆದರೆ, ಮಾಲೀಕರು ಹಣ ಕೊಡಲು ಒಪ್ಪದೆ ಇದ್ದಾಗ ಹಲ್ಲೆ ನಡೆಸಿದ್ದಲ್ಲದೆ ಗುಂಡು ಹಾರಿಸಿದ್ದಾರೆ.
ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ಆ ಪರಿಸರದಲ್ಲಿದ್ದ ಜನರು ಓಡಿಬಂದಿದ್ದಾರೆ. ಆಗ ಈ ದರೋಡೆಕೋರರು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ಗುಂಡಿನ ದಾಳಿ ನಡೆಸಿ ಎಸ್ಕೇಪ್ ಆಗುವ ಭರದಲ್ಲಿ ಪಿಸ್ತೂಲನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕೊಡಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜುವೆಲ್ಲರಿಯ ಸಿಸಿ ಟಿವಿ ಫೂಟೇಜ್ ಮತ್ತು ಅಕ್ಕಪಕ್ಕದ ಅಂಗಡಿಗಳ ಸಿಸಿ ಟಿವಿ ಫೂಜೇಜ್‌ನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳನ್ನು ಹಿಡಿಯುವ ಭರವಸೆ ಇದೆ.
ಗುಂಡಿನ ದಾಳಿಯಲ್ಲಿ ಇಬ್ಬರಿಗೆ ಗಾಯ
ಜುವೆಲ್ಲರಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ಪನ್ನುನ್ ಕೊಲೆ ಸಂಚು: ಭಾರತದ ಸುಪ್ರೀಂ ಕೋರ್ಟ್ ಬಗ್ಗೆ ಝೆಕ್ ಸರ್ಕಾರ ಹೇಳಿದ್ದೇನು?