Site icon Vistara News

Firing in Jewellery : ಕೊಡಿಗೇಹಳ್ಳಿ ಜುವೆಲ್ಲರಿ ಫೈರಿಂಗ್‌ ಕೇಸಿಗೆ ಟ್ವಿಸ್ಟ್‌; ದರೋಡೆಕೋರನೇ ಗುಂಡಿಗೆ ಬಲಿ!

Firing in JewelleryFiring in Jewellery

ಬೆಂಗಳೂರು: ಬೆಂಗಳೂರು : ಮಾರ್ಚ್‌ 14ರಂದು ಬೆಂಗಳೂರಿನ (Bangalore News) ಕೊಡಿಗೇ ಹಳ್ಳಿಯ ದೇವಿ ನಗರದಲ್ಲಿರುವ ಲಕ್ಷ್ಮೀ ಬ್ಯಾಂಕರ್ಸ್‌ ಎಂಡ್‌ ಜುವೆಲ್ಲರ್ಸ್‌ಗೆ (Lakshmi Bankers and Jewellers) ನುಗ್ಗಿ ದರೋಡೆಗೆ ಯತ್ನಿಸಿದ ಪ್ರಕರಣ ಆರೋಪಿಗಳಿಗೇ ತಿರುಮಂತ್ರವಾಗಿದೆ. ಆವತ್ತು ಜುವೆಲ್ಲರಿ ಮಾಲೀಕನನ್ನು ಗುಂಡು ಹಾರಿಸಿ ಕೊಲ್ಲಲು (Firing in Jewellery) ಪ್ರಯತ್ನಿಸಿದ ದುಷ್ಕರ್ಮಿಗಳಲ್ಲಿ ಒಬ್ಬಾತ ಗುಂಡೇಟಿಗೆ ಬಲಿಯಾಗಿದ್ದಾನೆ (One miscreant died of firing). ಅಂದರೆ ಆವತ್ತು ಜುವೆಲ್ಲರಿಯಲ್ಲಿ ಮಾಲೀಕನಿಗೆ ಹಾರಿಸಿದ (Attack on Jewellery) ಗುಂಡೇ ಅವನಿಗೆ ತಾಗಿತ್ತು. ಇದೀಗ ಅವನು ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ!

ದೇವಿ ನಗರದಲ್ಲಿ ದರೋಡೆಗೆ ಯತ್ನಿಸಿದ ಆರೋಪಿಗಳನ್ನು ಬೆಂಗಳೂರು ಪೊಲೀಸರು ಮಾರ್ಚ್‌ 18ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬಂಧಿಸಿದ್ದರು. ಸಣ್ಣ ಸಣ್ಣ ಜ್ಯುವೆಲರಿಗಳನ್ನು ಟಾರ್ಗೆಟ್ ಮಾಡಿ ರಾಬರಿ ಮಾಡುತ್ತಿದ್ದ ಖಾನಾ ಪಂಡಿತ್, ಆಶು ಪಂಡಿತ್, ಮೋಸೆ ಅಲಿಯಾಸ್ ಬಂಟಿ ಮತ್ತು ಸೂರಜ್‌ ಸೂರಜ್‌ ಆರೋಪಿಗಳಾಗಿದ್ದು, ಮೂವರನ್ನು ವಶಕ್ಕೆ ಪಡೆದಿದ್ದರು. ಅವರಲ್ಲಿ ಸೂರಜ್‌ ಎಂಬಾತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

Firing in Bangalore1

ಮಾರ್ಚ್‌ 14ರಂದು ಅಂದಾ ರಾಮ್‌ ಹಾಗು ಆಪುರಾಮ್ ಎಂಬವರಿಗೆ ಸೇರಿದ ಲಕ್ಷ್ಮೀ ಜುವೆಲ್ಲರಿಗೆ ನಾಲ್ವರು ದರೋಡೆಕೋರರು ಬಂದಿದ್ದರು. ಬೈಕ್‌ನಲ್ಲಿ ಬಂದಿದ್ದ ಅವರು ಬೈಕ್‌ ನಿಲ್ಲಿಸಿ ನೇರವಾಗಿ ಅಂಗಡಿಗೆ ನುಗ್ಗಿದ್ದಾರೆ. ಚಿನ್ನದ ಅಂಗಡಿ ಮಾಲೀಕರ ಬಳಿ ತಮಗೆ ಹಣ ನೀಡುವಂತೆ ಕೇಳಿದಾಗ ಕೊಟ್ಟಿರಲಿಲ್ಲ. ಆಗ ಮೊದಲು ಮಚ್ಚಿನಿಂದ ಕೊಚ್ಚಲು ಮುಂದಾಗಿದ್ದಾರೆ. ಆದರೆ ಮಾಲೀಕ ಹೆದರದೆ ಇದ್ದಾಗ ಪಿಸ್ತೂಲು ತೋರಿಸಿದ್ದಾರೆ. ಆಗಲೂ ಜಗ್ಗದಿದ್ದಾಗ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾರೆ. ಯೇ ಹಣ ಕೇಳಿದ್ದಾರೆ. ಆದರೆ, ಮಾಲೀಕರು ಹಣ ಕೊಡಲು ಒಪ್ಪದೆ ಇದ್ದಾಗ ಹಲ್ಲೆ ನಡೆಸಿದ್ದಲ್ಲದೆ ಗುಂಡು ಹಾರಿಸಿದ್ದಾರೆ.

ಆಗ ಅಂದಾರಾಮ್‌ ಮತ್ತು ಆಪುರಾಮ್‌ ಎಂಬವರಿಗೆ ಗಾಯಗಳಾಗಿವೆ. ಈ ನಡುವೆ, ದುಷ್ಕರ್ಮಿಗಳು ಪಿಸ್ತೂಲನ್ನು ಅಲ್ಲೇ ಬಿಟ್ಟು ತಾವು ಬಂದಿದ್ದ ಎರಡು ಬೈಕ್‌ಗಳಲ್ಲಿ ಅಲ್ಲಿಂದ ಪರಾರಿಯಾಗಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರು ಈಗ ಚೇತರಿಸಿಕೊಳ್ಳುತಿದ್ದಾರೆ.

ಗ್ವಾಲಿಯರ್‌ನಲ್ಲಿ ಸಿಕ್ಕಿಬಿದ್ದ ದುಷ್ಕರ್ಮಿಗಳು

ಬೆಂಗಳೂರಿನಲ್ಲಿ ನಡೆದ ಈ ಭಯಾನಕ ದರೋಡೆ ಯತ್ನ ಪ್ರಕರಣದ ಬೆನ್ನು ಹತ್ತಿದ ಕೊಡಿಗೇಹಳ್ಳಿ ಪೊಲೀಸರು ತಮ್ಮ ಎಲ್ಲ ಚಾಣಾಕ್ಷತೆಯನ್ನು ಧಾರೆ ಎರೆದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೂ ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ!

ಆರೋಪಿಗಳ ಓಡಾಟ, ಪ್ರಯಾಣದ ಎಲ್ಲ ವಿವರಗಳನ್ನು ಚಾಣಾಕ್ಷತೆಯಿಂದ ಕಲೆ ಹಾಕಿದ ಪೊಲೀಸರು ಆಶು ಪಂಡಿತ್, ಮೋಸೆ ಅಲಿಯಾಸ್ ಬಂಟಿ, ಸೂರಜ್ ಎಂಬವರನ್ನು ಬಂಧಿಸಿದರು. ಅವರು ಸಣ್ಣ ಸಣ್ಣ ಜ್ಯುವೆಲರಿಗಳನ್ನೇ ಟಾರ್ಗೆಟ್ ಮಾಡಿ ರಾಬರಿ ಮಾಡುತ್ತಿದ್ದ ವಿಷಯ ಬಯಲಿಗೆ ಬಂತು.

ಇದನ್ನೂ ಓದಿ: Firing in Bangalore : ಹಾಡಹಗಲೇ ಜುವೆಲ್ಲರಿಗೆ ನುಗ್ಗಿ ಫೈರಿಂಗ್‌ ಮಾಡಿದ ದುಷ್ಕರ್ಮಿಗಳು; ಇಬ್ಬರು ಗಂಭೀರ

ಶೂಟೌಟ್‌ನಲ್ಲಿ ಗಾಯಗೊಂಡಿದ್ದ ಸೂರಜ್‌

ಈ ನಡುವೆ, ಇನ್ನೊಂದು ಅಚ್ಚರಿಯ ಸಂಗತಿ ಆಗ ಬೆಳಕಿಗೆ ಬಂದಿತ್ತು. ಅದೇನೆಂದರೆ ಅಂದು ನಡೆದ ಶೂಟೌಟ್‌ನಲ್ಲಿ ನಿಜಕ್ಕೂ ಸರಿಯಾಗಿ ಗಾಯವಾಗಿದ್ದು ಅಲ್ಲಿನ ಮಾಲೀಕರಿಗಲ್ಲ. ಬದಲಾಗಿ ದುಷ್ಕರ್ಮಿಗಳ ತಂಡಕ್ಕೆ ಸೇರಿದ ಸೂರಜ್‌ ಎಂಬಾತನಿಗೆ. ಹಾಗಾಗಿಯೇ ಅವರು ಪಿಸ್ತೂಲನ್ನು ಅಲ್ಲೇ ಬಿಟ್ಟು ಓಡಿ ಪರಾರಿಯಾಗಿದ್ದರು.

ಆವತ್ತು ಹಾರಿದ ಗುಂಡು ಸೂರಜ್‌ನ ಕುತ್ತಿಗೆಗೆ ಗುಂಡು ತಗುಲಿತ್ತು. ಆಶು ಪಂಡಿತ್‌ ಹಾರಿಸಿದ ಗುಂಡಿನಿಂದ ಸೂರಜ್‌ನಿಗೆ ಗುಂಡು ತಗುಲುತ್ತಿದ್ದಂತೆಯೇ ಅವರೆಲ್ಲ ಓಡಿ ಹೋಗಿ ತಪ್ಪಿಸಿಕೊಂಡಿದ್ದರು. ಆದರೆ, ಗುಂಡನ್ನು ತೆಗೆಯುವ ಪ್ರಯತ್ನ ಫಲಿಸಿರಲಿಲ್ಲ. ಅವರು ಬೆಂಗಳೂರಿನಿಂದ ಅನಂತಪುರಕ್ಕೆ ತೆರಳಿ ಅಲ್ಲಿಂದ ಗ್ವಾಲಿಯರ್‌ಗೆ ಹೋಗಿದ್ದರು.

ಈ ನಡುವೆ ಪೊಲೀಸರು ಬೆನ್ನಟ್ಟಿ ಅವರನ್ನು ಹಿಡಿದು ಹಾಕಿದ್ದರು. ಆಗ ಸೂರಜ್‌ನ ಕುತ್ತಿಗೆಗೆ ಗುಂಡೇಟು ಬಿದ್ದು ನರಳುತ್ತಿದ್ದುದು ಕಂಡುಬಂತು. ಕೂಡಲೇ ಪೊಲೀಸರು ಆತನನ್ನು ಗ್ವಾಲಿಯರ್‌ನ ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಆತ ಅಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.

ಈ ತಂಡ ಕಳೆದ ವಾರವಷ್ಟೇ ಮುಂಬಯಿಯಲ್ಲಿ ದರೋಡೆ ಮಾಡಿ ಬೆಂಗಳೂರಿಗೆ ಬಂದಿತ್ತು. ಆದರೆ, ಬೆಂಗಳೂರಿನ ದರೋಡೆ ಅವರ ಪಾಲಿಗೇ ಕಂಟಕವಾಯಿತು.

Exit mobile version