ರಾಯಚೂರು: ಹಾಸ್ಟೆಲ್‌ನಲ್ಲಿ ತಯಾರಿಸಲಾದ ಊಟ ಸೇವಿಸಿ 24ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ (Food poisoningw) ಘಟನೆ ರಾಯಚೂರು (Raichur news) ಜಿಲ್ಲೆಯ ಸಿಂಧನೂರು ಬಿಸಿಎಂ ಹಾಸ್ಟೆಲ್‌ನಲ್ಲಿ ನಡೆದಿದೆ.
ನಿನ್ನೆ ಮಧ್ಯಾಹ್ನದ ಊಟವನ್ನು ಸೇವಿಸಿದ ಬಳಿಕ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ. ನಿನ್ನೆ ಮಧ್ಯಾಹ್ನದ ಊಟಕ್ಕೆ ಹಾಸ್ಟೆಲ್ ಸಿಬ್ಬಂದಿ ಚಪಾತಿ, ಅನ್ನ ಮತ್ತು ಸಾಂಬಾರು ವಿತರಿಸಿದ್ದರು. ಊಟವಾದ ನಂತರ ಹೊಟ್ಟೆ ನೋವು, ತಲೆ ಸುತ್ತುವಿಕೆಯಿಂದ ವಿದ್ಯಾರ್ಥಿನಿಯರು ಬಳಲುತ್ತಿದ್ದಾರೆ. ಅಸ್ವಸ್ಥ ವಿದ್ಯಾರ್ಥಿನಿಯರನ್ನು ತಡರಾತ್ರಿಯೇ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.
ಆದರೆ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ವೈದ್ಯರು ಇಲ್ಲದ ಕಾರಣ ಅಸ್ವಸ್ಥ ವಿದ್ಯಾರ್ಥಿನಿಯರು ಪರದಾಟ ಅನುಭವಿಸಬೇಕಾಯಿತು. ಬಳಿಕ ಟಿಎಚ್‌ಓಗೆ ಕರೆ ಮಾಡಿ ಹಾಸ್ಟೆಲ್ ಸಿಬ್ಬಂದಿ ಮಾಹಿತಿ ತಿಳಿಸಿದ್ದರು. ಒಂದು ಗಂಟೆ ತಡವಾಗಿ ವಿದ್ಯಾರ್ಥಿನಿಯರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 240ಕ್ಕೂ ಹೆಚ್ಚು ಪದವಿಧರ ವಿದ್ಯಾರ್ಥಿನಿಯರು ಇರುವ ವಿದ್ಯಾರ್ಥಿನಿಯರ ಬಿಸಿಎಂ ಹಾಸ್ಟೆಲ್ ಇದಾಗಿದೆ.
ಮತದಾನ ಮುಗಿಸಿ ತೆರಳುತ್ತಿದ್ದಾಗ ಅಪಘಾತ, ಇಬ್ಬರು ಸಾವು
ಮೈಸೂರು: ಮತದಾನ ಮಾಡಿ ತೆರಳುತ್ತಿದ್ದ ವೇಳೆ ಅಪಘಾತ (Bike Accident) ನಡೆದು ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ನಂಜನಗೂಡು ತಾಲೂಕಿನ ತಾಂಡವಪುರ ಬಳಿ ನಡೆದಿದೆ. ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಪಾದಚಾರಿ ಮತ್ತು ಬೈಕ್ ಸವಾರ ಮೃತಪಟ್ಟಿದ್ದು, ಮತ್ತೊಬ್ಬ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
ಶಿವಣ್ಣ (40) ಹಾಗೂ ಬೈಕ್ ಸವಾರ ಮಿಥುನ್(19) ಮೃತ ದುರ್ದೈವಿಗಳು. ಮತ್ತೊಬ್ಬ ಸವಾರ ಅನಿಲ್ ಪಟೇಲ್ ಗಾಯಾಳು. ಶಿವಣ್ಣ ಮತ ಚಲಾಯಿಸಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ವೇಗವಾಗಿ ಬಂದ ಯುವಕರು, ನಡೆದು ತೆರಳುತ್ತಿದ್ದ ಶಿವಣ್ಣಗೆ ಡಿಕ್ಕಿ ಹೊಡೆದಿದ್ದರಿಂದ ಶಿವಣ್ಣ ಹಾಗೂ ಮಿಥುನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Road Accident: ಕಾರು ಟಯರ್ ಬ್ಲಾಸ್ಟ್ ಆಗಿ ಬೈಕ್‌ಗೆ ಡಿಕ್ಕಿ; ಇಬ್ಬರು ಸವಾರರ ದುರ್ಮರಣ
ಚುನಾವಣೆ ಗಲಾಟೆ, ವಾಟರ್ ಮ್ಯಾನ್ ಅನುಮಾನಾಸ್ಪದ ಸಾವು
ತುಮಕೂರು: ಚುನಾವಣೆ (Lok sabha Election 2024) ಸಂಬಂಧಿತ ಗಲಾಟೆ ಸಂಭವಿಸಿದ ಬಳಿಕ ವಾಟರ್ ಮ್ಯಾನ್ (Water man) ಒಬ್ಬರು ಅನುಮಾನಾಸ್ಪದವಾಗಿ (UDR Case, unnatural death) ಸಾವಿಗೀಡಾಗಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಕಿಚ್ಚೇವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ.
ಚಂದ್ರಪ್ಪ (56) ಮೃತ ವಾಟರ್ ಮ್ಯಾನ್. ಹುಲಿಯೂರುದುರ್ಗ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿನ್ನೆ ರಾತ್ರಿ ಕಾಂಗ್ರೆಸ್ ಕಾರ್ಯಕರ್ತರು “ನೀನು ಬಿಜೆಪಿ ಪರವಾಗಿ ಕೆಲಸ ಮಾಡ್ತಿಯಾ?” ಎಂದು ಈತನ ಮೇಲೆ ಹಲ್ಲೆ (Assault case) ಮಾಡಿದ್ದರು ಎನ್ನಲಾಗಿದೆ. ಇಂದು ಬೆಳಗ್ಗೆ ನೇಣು ಬಿಗಿದ (Self Harming) ಸ್ಥಿತಿಯಲ್ಲಿ ಚಂದ್ರಪ್ಪ ಶವ ಪತ್ತೆಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರಾದ ನಟೇಶ್, ರವೀಶ್, ವೆಂಕಟೇಶ, ಸಂತೋಷ ನಿನ್ನೆ ಗಲಾಟೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಮುಸ್ಲಿಮ್ ಯುವಕರಿಂದ ಬಸ್ ಚಾಲಕನ ಮೇಲೆ ಹಲ್ಲೆ, ನೌಕರರಿಂದ ಧರಣಿ
ಬೈಲಹೊಂಗಲ: ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಮುಸ್ಲಿಂ ಯುವಕರು ಹಲ್ಲೆ ಮಾಡಿದ ಘಟನೆ (Bus driver Attacked) ನಡೆದಿದೆ. ಆಕ್ರೋಶಗೊಂಡ ಸಾರಿಗೆ ನೌಕರರು ಬೈಲಹೊಂಗಲ ಪೊಲೀಸ್ ಠಾಣೆಯ ಮುಂದೆ ಧರಣಿ ಕುಳಿತರು. ಚಾಲಕ ಬಸ್ ನಿಲ್ಲಿಸಲಿಲ್ಲ ಎಂದು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.
ಧಾರವಾಡದಿಂದ ಬೈಲಹೊಂಗಕ್ಕೆ ಮುಸ್ಲಿಂ ಯುವಕರು ಬಂದಿದ್ದರು. ಬಸ್ ಬೈಲಹೊಂಗಲದಿಂದ ಧಾರವಾಡಕ್ಕೆ ಹೊರಟಿತ್ತು. ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಗುಂಪುಕಟ್ಟಿ ಹಲ್ಲೆ ನಡೆಸಿದ್ದರು. ಬೇಸತ್ತ ಚಾಲಕರು ವೃತ್ತಿಯ ವೇಳೆ ಸುರಕ್ಷತೆ ನೀಡಿ ಧರಣಿ ಮಾಡಿದ್ದರು. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿರುವ ಸಾರಿಗೆ ಮೇಲಧಿಕಾರಿಗಳು ಬಂದು ಮಾತು ನಡೆಸಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ಇದನ್ನೂ ಓದಿ: Drunken Driving: ಎರ‍್ರಾಬಿರ‍್ರಿ ಟಿಪ್ಪರ್ ಚಲಾಯಿಸಿ ಪಾದಚಾರಿಯನ್ನು ಕೊಂದ ಪಾನಮತ್ತ