ಮುಂಬಯಿ: ಮಾದಕವಸ್ತು ನಿಯಂತ್ರಣ ಬ್ಯುರೋ (ಎನ್‌ಸಿಬಿ) ಮಾಜಿ ವಲಯ ನಿರ್ದೇಶಕ, ಮುಂಬೈನಲ್ಲಿ ಕಳೆದ ವರ್ಷ ಐಷಾರಾಮಿ ಹಡಗಿನಲ್ಲಿ ಪಾರ್ಟಿ ನಡೆಯುವ ವೇಳೆ ದಾಳಿ ನಡೆಸಿ ದೇಶಾದ್ಯಂತ ಸುದ್ದಿಯಾದ ಸಮೀರ್ ವಾಂಖೆಡೆ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ (Death Threat) ಹಾಕಲಾಗಿದೆ.
ಅಮನ್ (Aman) ಎಂಬ ಹೆಸರಿನ ಟ್ವಿಟರ್ ಖಾತೆಯಿಂದ ಆಗಸ್ಟ್ ೧೪ರಂದು ವಾಂಖೆಡೆ ಅವರಿಗೆ ಮೆಸೇಜ್ ಮಾಡಲಾಗಿದೆ. “ನೀನು ಏನು ಮಾಡಿದ್ದೀಯಾ ಎಂಬುದು ನಿನಗೆ ಗೊತ್ತು. ನೀನು ಇದರ ಪ್ರತಿಫಲ ಅನುಭವಿಸುತ್ತೀಯಾ. ನಿನ್ನ ಕತೆಯನ್ನು ಮುಗಿಸಲಾಗುತ್ತದೆ” ಎಂದು ಬೆದರಿಕೆ ಹಾಕಲಾಗಿದೆ.
ಬೆದರಿಕೆ ಸಂದೇಶ ಬರುತ್ತಲೇ ಸಮೀರ್ ವಾಂಖೆಡೆ ಅವರು ಗೋರೆಗಾಂವ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳೆದ ವರ್ಷ ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿದ ಬಳಿಕ ಸಮೀರ್ ವಾಂಖೆಡೆ ಸುದ್ದಿಯಾಗಿದ್ದರು. ಪಾರ್ಟಿ ವೇಳೆ ಡ್ರಗ್ಸ್ ಸೇವಿಸಲಾಗಿದೆ ಎಂಬ ಆರೋಪ ಕೇಳಿಬಂದ ಕಾರಣ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನಕ್ಕೀಡಾಗಿದ್ದು ದೇಶದ ಗಮನ ಸೆಳೆದಿತ್ತು. ಬಳಿಕ ಸಮೀರ್ ವಾಂಖೆಡೆ ಅವರ ಧರ್ಮದ ಕುರಿತು ಪ್ರಶ್ನಿಸಿದ್ದಲ್ಲದೆ, ನಕಲಿ ದಾಖಲೆ ಸಲ್ಲಿಸಿ ಸರಕಾರದ ಉದ್ಯೋಗ ಪಡೆದಿದ್ದಾರೆ ಎಂದು ದೂರು ನೀಡಲಾಗಿತ್ತು. ಇದರಲ್ಲಿ ವಾಂಖೆಡೆ ಅವರಿಗೆ ಕ್ಲೀನ್‌ಚಿಟ್ ಸಹ ಸಿಕ್ಕಿದೆ.
ಇದನ್ನೂ ಓದಿ | Sameer Wankhede | ಹುಟ್ಟಿನಿಂದಲೇ ಮುಸ್ಲಿಮನಲ್ಲ; ಸಮೀರ್ ವಾಂಖೆಡೆಗೆ ಕ್ಲೀನ್ ಚಿಟ್