Site icon Vistara News

Honey Trap : ಆಕೆ ಟೆಲಿಗ್ರಾಂನಲ್ಲೇ ಬಾ ಅನ್ನುತ್ತಿದ್ದಳು; ಬಾಗಿಲಲ್ಲೇ ಸಿಗುತ್ತಿತ್ತು ಬಿಕಿನಿ ಸುಂದರಿ ಅಪ್ಪುಗೆ! ಮುಂದೇನಾಯ್ತು?

Neha Honey trap beauty

ಬೆಂಗಳೂರು: ಆಕೆ ಟೆಲಿಗ್ರಾಂನಲ್ಲಿ ಕನೆಕ್ಟ್‌ (Woman connecting throgh Telegram) ಆಗುತ್ತಿದ್ದಳು. ಮೊದಲು ಸೀದಾಸಾದಾ ಮಾತು, ಬಳಿಕ ಸಲುಗೆ ಮಾತು. ಬಳಿಕ ರಂಗಿನಾಟಕ್ಕೆ ತಿರುಗುತ್ತಿದ್ದಂತೆಯೇ ಬಾ ಅನ್ನುತ್ತಿದ್ದಳು! ಅಲ್ಲಿ ಹೋದಾಗ ಅವಳು ತೋರಿಸುತ್ತಿದ್ದುದು ಮಾತ್ರ ಹೊಸ ಲೋಕ (Honey trap)!

ಇದು ಮುಂಬಯಿಯ ಮಾಡೆಲ್‌ ನೇಹಾ @ ಮೆಹರ್‌ ಎಂಬ ಚಾಲಾಕಿ ಹೆಣ್ಮಗಳು ಆಸೆ ಮನಸುಗಳ ಪುರುಷರನ್ನು ತನ್ನ ಬಲೆಗೆ ಬೀಳಿಸುತ್ತಿದ್ದ ರೀತಿ. ಪುಟ್ಟೇನ ಹಳ್ಳಿಯ ವ್ಯಕ್ತಿಯೊಬ್ಬರು ಈಕೆಯ ಜಾಲದೊಳಗೆ ಸಿಲುಕಿ ಸುಮಾರು 50 ಸಾವಿರ ರೂ. ಕಳೆದುಕೊಂಡಿದ್ದಾರಂತೆ. ಕೂಡಲೇ ಎಚ್ಚೆತ್ತ ಅವರು ಕೊಟ್ಟ ದೂರಿನಂತೆ ಈ ಬಿಕಿನಿ ಸುಂದರಿಯನ್ನು ಪೊಲೀಸರು ಮುಂಬಯಿಯಲ್ಲಿ ಬಂಧಿಸಿ ಕರೆತಂದಿದ್ದಾರೆ. ಬೆಂಗಳೂರಿನ ಸುಮಾರು 12 ಮಂದಿ ಯುವಕರು ಈಕೆಯ ಟ್ರ್ಯಾಪ್‌ನಲ್ಲಿ ಬಿದ್ದು ಒದ್ದಾಡಿ ಹಣ ಕಳೆದುಕೊಂಡಿರುವುದು ಈಗ ಬೆಳಕಿಗೆ ಬಂದಿದೆ.

ಬಾಗಿಲಲ್ಲೇ ಸಿಗುತ್ತಿತ್ತು ಬಿಕಿನಿ ಅಪ್ಪುಗೆಯ ಸ್ವಾಗತ!

ಮೊದಲು ಟೆಲಿಗ್ರಾಂನಲ್ಲಿ ಯುವಕರನ್ನು ಕನೆಕ್ಟ್‌ ಆಗುತ್ತಿದ್ದ ಆಕೆ ತೀರಾ ಸಭ್ಯ ನಡವಳಿಕೆ ತೋರುತ್ತಿದ್ದಳಂತೆ. ಬಳಿಕ ನಿಧಾನಕ್ಕೆ ಅವರನ್ನು ಕೆರಳಿಸಿ ಆಸೆ ಹುಟ್ಟಿಸುತ್ತಿದ್ದಳಂತೆ. ಮೊಬೈಲ್‌ ಮೂಲಕವೇ ಸಾಕಷ್ಟು ಖುಷಿಯ ಕ್ಷಣಗಳನ್ನು ಅನುಭವಿಸಿದ ಹುಡುಗರನ್ನು ಜೆಪಿ ನಗರ ಐದನೇ ಹಂತದ ವಿನಾಯಕ ನಗರದಲ್ಲಿರುವ ಮನೆಗೆ ಬರಲು ಹೇಳುತ್ತಿದ್ದಳು.

ಹಾಗೆ ಸಲುಗೆಯಿಂದ ಹೋಗುತ್ತಿದ್ದ ಹುಡುಗರನ್ನು ಈ ಸುಂದರಿ ಎದುರುಗೊಳ್ಳುತ್ತಿದ್ದುದೇ ಅರೆಬೆತ್ತಲೆ ಬಿಕಿನಿ ಡ್ರೆಸ್‌ನಲ್ಲಿ. ಡೋಲ್‌ ಬೆಲ್‌ ಆಗುತ್ತಿದ್ದಂತೆಯೇ ಹುಡುಗರನ್ನು ಬರ ಸೆಳೆದು ರಂಗಿನಾಟಕ್ಕೆ ಆಹ್ವಾನಿಸುತ್ತಿದ್ದ ಆಕೆ ಬಾಗಿಲನ್ನೂ ಹಾಕುತ್ತಿರಲಿಲ್ಲ. ಹುಡುಗರು ಖುಷಿಯಲ್ಲಿ ಸಂಭ್ರಮಿಸೋ ಹೊತ್ತಿನಲ್ಲೇ ನಡೆಯುತ್ತಿದ್ದುದು ಬೇರೆ ಕಥೆ.

ಪುಟ್ಟೇನಹಳ್ಳಿಯ ಈ ಯುವಕ ಆಕೆಯ ಆಹ್ವಾನದ ಮೇರೆಗೆ ಮನೆಗೆ ಹೋಗಿ ಆಕೆಯ ತೋಳ ತೆಕ್ಕೆಯಲ್ಲಿ ಇರುವಂತೆಯೇ ನಾಲ್ವರು ದಾಂಡಿಗರ ಪ್ರವೇಶವಾಗಿದೆ. ಒಳಗೆ ಬಂದ ಅವರಿಬ್ಬರ ಖುಷಿಯ ದೃಶ್ಯಗಳನ್ನು ಸೆರೆ ಹಿಡಿದಿದ್ದರು. ಆತನ ಮೊಬೈಲನ್ನು ಕಿತ್ತುಕೊಂಡು ಅದರಲ್ಲಿರುವ ಕಾಂಟಾಕ್ಟ್‌ ನಂಬರ್‌ಗಳನ್ನು ನೋಟ್‌ ಮಾಡಿಕೊಂಡಿದ್ದರು. ಅಷ್ಟು ಹೊತ್ತಿಗೆ ಈ ಯುವತಿ ಬೆದರಿದ ಹರಿಣಿಯಂತೆ ಬಚ್ಚಿಟ್ಟುಕೊಂಡಿದ್ದಳು.

ಇದಾದ ಕೂಡಲೇ ನಾಲ್ವರು ದಾಂಡಿಗರಿಂದ ಬೆದರಿಕೆ ಶುರುವಾಗಿತ್ತು.. ಹಣ ಕೊಡಬೇಕು, ಇಲ್ಲದಿದ್ದರೆ ಇದರಲ್ಲಿರುವ ದೃಶ್ಯಗಳನ್ನು ಕಾಂಟ್ಯಾಕ್ಟ್‌ ಲಿಸ್ಟ್‌ನ ಎಲ್ಲರಿಗೂ ಸೆಂಡ್‌ ಮಾಡುವುದಾಗಿ, ಕುಟುಂಬಿಕರಿಗೆ ಕಳುಹಿಸಿ ಮಾನ ಮರ್ಯಾದೆ ಹರಾಜು ಮಾಡಲಾಗುವುದು ಎಂದು ಬೆದರಿಕೆ ಹಾಕಿದರು. ಈ ಮೂಲಕ ಹಣ ಸುಲಿಗೆ ಶುರುವಾದ ಸುಲಿಗೆ ಮುಗಿಯಲೇ ಇಲ್ಲ.

ಆಕೆಯೊಂದಿಗೆ ಸಂಬಂಧ ಹೊಂದಿರುವ ನೀನು ಅವಳನ್ನೇ ಮದುವೆಯಾಗಬೇಕು ಎಂದು ಬೆದರಿಕೆ ಹಾಕಲಾಗಿತ್ತು. ಆಕೆ ಮುಸ್ಲಿಂ ಆಗಿರುವುದರಿಂದ ನೀನು ಮದುವೆಗೆ ಮೊದಲು ಖತ್ನಾ ಮಾಡಿಸಿಕೊಳ್ಳಬೇಕು ಎನ್ನುವುದು ಇನ್ನೊಂದು ಬೇಡಿಕೆ. ಒಮ್ಮೆ ಬಾಗಿಲು ಬಡಿದ ತಪ್ಪಿಗೆ ಸಾಲು ಸಾಲು ಸಾಲು ಬೆದರಿಕೆಗಳು! ಸಾಕಷ್ಟು ಜನ ಹುಡುಗರು ಮರ್ಯಾದೆಗೆ ಅಂಜಿ ಲಕ್ಷಾಂತರ ರೂ. ಕೊಟ್ಟಿದ್ದರು.

ಇದನ್ನೂ ಓದಿ: Girls Hostel : ರಾತ್ರಿ ಹೊತ್ತು ಬಾಲಕಿಯರ ಹಾಸ್ಟೆಲ್‌ಗೆ ನುಗ್ಗಿದ ಅನಾಮಿಕ ಯುವಕ; ಪಕ್ಕದ ಮನೆಗಳಿಗೆ ಓಡಿಹೋದ ಮಕ್ಕಳು

ಆದರೆ, ಪುಟ್ಟೇನಹಳ್ಳಿಯ ಈ ಯುವಕ 50 ಸಾವಿರ ರೂ. ಕೊಟ್ಟರೂ ಸುಲಿಗೆ ನಿಲ್ಲದೆ ಇದ್ದುದನ್ನು ಕಂಡು ಏನಾದರಾಗಲೀ ಎಂದು ಪುಟ್ಟೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದ. ಆಕೆಯ ಟೆಲಿಗ್ರಾಂ ಕಾಂಟ್ಯಾಕ್ಟ್‌ ಇದ್ದಿದ್ದರಿಂದ ಪೊಲೀಸರಿಗೆ ಆಕೆಯನ್ನು ಹಿಡಿಯಲು ಸುಲಭವಾಯಿತು.

ಇದೀಗ ಮಾಡೆಲ್‌ ನೇಹಾ ಮತ್ತು ಆಕೆಯ ಸಹವರ್ತಿಗಳಾದ ಶರಣ ಪ್ರಕಾಶ್‌ ಬಳಿಗೇರ್‌, ಅಬ್ದುಲ್‌ ಖಾದರ್‌, ಯಾಸಿನ್‌ನನ್ನು ಬಂಧಿಸಲಾಗಿದೆ. ಯಾರಾದರೂ ಈ ರೀತಿ ಸರಸಕ್ಕೆ ಕರೆದರೆ ಎಚ್ಚರಿಕೆಯಿಂದ ಇರಿ ಎಂದು ಯುವಕರಿಗೆ ಸೂಚನೆ ನೀಡಿದ್ದಾರೆ ಡಿಸಿಪಿ ಕೃಷ್ಣಕಾಂತ್‌.

Exit mobile version