ಚಂಡೀಗಢ: ಪುರುಷ ಕಾಮಾಂಧರು ಹೆಣ್ಣುಮಕ್ಕಳ ಮೇಲೆ ಎರಗಿದಾಗ, ಅವರಿಗೆ ಲೈಂಗಿಕ ಕಿರುಕುಳ ನೀಡಿದಾಗ, ಅತ್ಯಾಚಾರ ಎಸಗಿದಾಗ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುತ್ತದೆ. ಕಾನೂನು-ಕಟ್ಟಳೆಗಳ ಹೊರತಾಗಿಯೂ ಇಂತಹ ದೌರ್ಜನ್ಯ ನಡೆಯಿತಲ್ಲ ಎಂದು ಪುರುಷರೂ ಹೋರಾಟಕ್ಕೆ ಇಳಿಯುತ್ತಾರೆ. ಆ ಮೂಲಕ ಹೆಣ್ಣುಮಕ್ಕಳಿಗೆ ಅನ್ಯಾಯವಾಗಬಾರದು ಎಂಬ ಮನೋಭಾವ ಪ್ರದರ್ಶಿಸುತ್ತಾರೆ. ಆದರೆ, ಹೆಣ್ಣುಮಕ್ಕಳೇ ಪುರುಷನ ಮೇಲೆ ಅತ್ಯಾಚಾರ (Women Rape Man) ಎಸಗಿದರೆ ಏನು ಮಾಡುವುದು? ಇದಕ್ಕೆ ಎಂತಹ ಕಾಮದಾಹ ಎನ್ನಬೇಕು? ಇದಕ್ಕೆ ನಿದರ್ಶನ ಎಂಬಂತೆ ಪಂಜಾಬ್‌ನಲ್ಲಿ ಹೆಣ್ಣುಮಕ್ಕಳೇ ಪುರುಷನ ಮೇಲೆ ಅತ್ಯಾಚಾರ ಎಸಗಿರುವ ಸಂಗತಿ ಅಚ್ಚರಿ ಮೂಡಿಸಿದೆ.
ಹೌದು, ಕಳೆದ ಭಾನುವಾರ ಕಾರ್ಮಿಕನೊಬ್ಬ ಜಲಂಧರ್‌ನ ಲೆದರ್ ಕಾಂಪ್ಲೆಕ್ಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕಾರಿನಲ್ಲಿ ಬಂದ ನಾಲ್ವರು ಹೆಣ್ಣುಮಕ್ಕಳು ವಿಳಾಸ ಕೇಳುವ ನೆಪದಲ್ಲಿ ಆತನನ್ನು ಅಪಹರಣ ಮಾಡಿದ್ದಾರೆ. ಇದಾದ ಬಳಿಕ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಈ ಕುರಿತು ಅತ್ಯಾಚಾರಕ್ಕೀಡಾದ ವ್ಯಕ್ತಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
“ಕಾರಿನಲ್ಲಿ ಬಂದು ಅಪಹರಣ ಮಾಡಿದ ಮಹಿಳೆಯರು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಸುಮಾರು 11-12 ತಾಸು ನನ್ನನ್ನು ಒತ್ತೆಯಾಳಾಗಿ ಇಟ್ಟುಕೊಂಡು ಅತ್ಯಾಚಾರ ಎಸಗಿದ್ದಾರೆ. ಬಳಿಕ ಕಣ್ಣಿಗೆ ಬಟ್ಟೆ ಕಟ್ಟಿ ರಸ್ತೆಯಲ್ಲಿ ಬಿಸಾಡಿ ಹೋಗಿದ್ದಾರೆ” ಎಂಬುದಾಗಿ ಪೊಲೀಸರಿಗೆ ವ್ಯಕ್ತಿಯು ಮಾಹಿತಿ ನೀಡಿದ್ದಾನೆ. ಆದಾಗ್ಯೂ, ಅತ್ಯಾಚಾರ ನಡೆದಿರುವ ಕುರಿತು ಪ್ರಕರಣ ದಾಖಲಾಗಿಲ್ಲ. ಕೇಸ್ ದಾಖಲಾಗುತ್ತಲೇ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ | POCSO Case | ಬಾಲಕಿ ಮೇಲೆ ಅತ್ಯಾಚಾರ; ಅಪರಾಧಿಗೆ 43 ವರ್ಷ ಶಿಕ್ಷೆ, ಸಂತ್ರಸ್ತೆಗೆ ₹7 ಲಕ್ಷ ಪರಿಹಾರ ನೀಡಲು ಆದೇಶ