Site icon Vistara News

ರಾಕ್ಷಸೀ ಕೃತ್ಯ; ಚಲಿಸುತ್ತಿದ್ದ ಕಾರಿನಲ್ಲಿ ತಾಯಿ-ಪುಟ್ಟ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ

Haridwar

ಹರಿದ್ವಾರ: ದಿನ ಬೆಳಗಾದರೆ ಒಂದಲ್ಲ ಒಂದು ಕಡೆಯಿಂದ ಅತ್ಯಾಚಾರ ಕೇಸ್‌ಗಳು ವರದಿಯಾಗುತ್ತವೆ. ಈ ಕ್ರೂರ ಕೃತ್ಯಕ್ಕೆ ಕೊನೆಯೇ ಇಲ್ಲವೆಂಬಂತಾಗಿದೆ. ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ಅಪ್ರಾಪ್ತೆಯೊಬ್ಬಳನ್ನು ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಈಗ ಅಂಥದ್ದೇ ಒಂದು ಘಟನೆ ಉತ್ತರಾಖಂಡ್‌ನ ಹರಿದ್ವಾರ ಜಿಲ್ಲೆಯ ರೂರ್ಕಿ ಎಂಬಲ್ಲಿ ನಡೆದಿದೆ. ಇಲ್ಲಿ ಮಹಿಳೆ ಮತ್ತು ಆಕೆಯ ಆರು ವರ್ಷದ ಮಗಳನ್ನು ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ.

ಈ ಮಹಿಳೆ ತನ್ನ ಅಪ್ರಾಪ್ತ ಮಗಳೊಂದಿಗೆ ಮುಸ್ಲಿಂ ಧಾರ್ಮಿಕ ಕ್ಷೇತ್ರವಾದ ಪಿರಾನ್ ಕಲಿಯಾರ್‌ಗೆ ಹೋಗಿ, ರಾತ್ರಿ ವಾಪಸ್‌ ಮನೆಗೆ ತೆರಳುತ್ತಿದ್ದರು. ಅದೇ ಮಾರ್ಗದಲ್ಲಿ ಕಾರಿನಲ್ಲಿ ಬಂದ ಸೋನು ಎಂಬ ವ್ಯಕ್ತಿ ಹಾಗೂ ಆತನ ಸ್ನೇಹಿತರು, ಮಹಿಳೆಯ ಬಳಿ ಮನೆಗೆ ಬಿಡುವುದಾಗಿ ಹೇಳಿದ್ದಾರೆ. ಇವರೂ ಕೂಡ ಒಪ್ಪಿ ಕಾರು ಹತ್ತಿದ್ದಾರೆ. ಆದರೆ ಕೆಲವೇ ಹೊತ್ತಲ್ಲಿ ಅವರು ರಾಕ್ಷಸೀ ಕೃತ್ಯ ಎಸಗಿದ್ದಾರೆ. ಕಾರು ಚಲಿಸುತ್ತಿರುವಾಗಲೇ ತಾಯಿ ಮತ್ತು ಪುಟ್ಟ ಮಗು ಇಬ್ಬರ ಮೇಲೆಯೂ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಇಬ್ಬರನ್ನೂ ಕಾಲುವೆಯೊಂದರ ಬಳಿ ವಾಹನದಿಂದ ನೂಕಿ ಹೋಗಿದ್ದಾರೆ. ಅಲ್ಲಿಂದ ಹೇಗೋ ಎದ್ದು ಬಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭ ಮಾಡಿದ್ದಾರೆ. ಆ ಕಾರಿನಲ್ಲಿ ಎಷ್ಟು ಜನ ಇದ್ದರು ಎಂದು ಮಹಿಳೆ ನಿಖರವಾಗಿ ಹೇಳಿಲ್ಲ. ಆದರೆ ಅದನ್ನು ಡ್ರೈವ್‌ ಮಾಡುತ್ತಿದ್ದವನನ್ನು ಎಲ್ಲರೂ ಸೋನು ಎಂದು ಕರೆಯುತ್ತಿದ್ದರು ಎಂಬ ಮಾಹಿತಿಯನ್ನು ಕೊಟ್ಟಿದ್ದಾರೆ. ನಾವು ಇನ್ನಷ್ಟು ವಿಚಾರಣೆ ನಡೆಸಿ, ತನಿಖೆ ನಡೆಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ತಾಯಿ-ಮಗಳನ್ನು ರೂರ್ಕಿ ಸಿವಿಲ್ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಸಾಲದ ವಿವಾದ: 75ರ ವೃದ್ಧನಿಂದ 35ರ ಮಹಿಳೆಯ ಅತ್ಯಾಚಾರ, ಗ್ಯಾಂಗ್‌ಸ್ಟರ್‌ಗಳಿಂದ ಬೆದರಿಕೆ

Exit mobile version