Site icon Vistara News

Girl death : ನೀರು ತುಂಬಲು ಕೆರೆಗೆ ಹೋಗಿದ್ದ ಬಾಲಕಿ ಕಾಲು ಜಾರಿ ಬಿದ್ದು ಸಾವು, ಸಿಡಿದ ಜನರು

Girl death while bringing water from pond

ಗದಗ: ಕೆರೆಗೆ ನೀರು ತುಂಬಲು ಹೋಗಿದ್ದ ಬಾಲಕಿಯೊಬ್ಬಳು ಕಾಲು ಜಾರಿ ಮುಳುಗಿ ಸಾವನ್ನಪ್ಪಿದ ಘಟನೆ (Girl death) ಗದಗ ತಾಲೂಕಿನ (Gadaga News) ಬಳಗಾನೂರು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಕುಟುಂಬವೊಂದಕ್ಕೆ ಸೇರಿದ ಭುವನೇಶ್ವರಿ ಛಟ್ರಿ (12) ಮೃತ ಬಾಲಕಿ.

ಆಕೆ ಮನೆಯಿಂದ ನೀರು ತರಲೆಂದು ಕೆರೆ ಬಳಿ ಹೋಗಿದ್ದಳು. ಆದರೆ ಅಲ್ಲಿ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ. ಇದೀಗ ಜನರ ಸಿಟ್ಟು ಸ್ಥಳೀಯ ಆಡಳಿತದ ಮೇಲೆ ತಿರುಗಿದೆ. ಅವರು ಗ್ರಾಮ ಪಂಚಾಯಿತಿ ಮುಂದೆ ಬಾಲಕಿ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

ಕೆರೆಗೆ ಯಾವುದೇ ರೀತಿಯ ಬೇಲಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಕಿಯ ಸಾವಿಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಯೇ ಕಾರಣ ಎನ್ನುವುದು ಜನರ ಆರೋಪ. ಈ ಕೆರೆಗೆ ಯಾವುದೇ ರೀತಿಯ ಭದ್ರತಾ ವ್ಯವಸ್ಥೆ ಮಾಡಲಾಗಿಲ್ಲ. ಕೆರೆ ಸುತ್ತ ಸಂಪೂರ್ಣವಾಗಿ ತಂತಿ ಬೇಲಿ ನಿರ್ಮಿಸಿಲ್ಲ, ಕೆರೆಗೆ ಇಳಿಲು ಮೆಟ್ಟಿಲು ನಿರ್ಮಾಣ ಮಾಡಿಲ್ಲ. ಇದರಿಂದಾಗಿಯೇ ಆಕೆಯ ಸಾವು ಸಂಭವಿಸಿದೆ. ಹೀಗಾಗಿ ದುರ್ಘಟನೆಗೆ ಪಂಚಾಯಿತಿ ಸಿಬ್ಬಂದಿ ನೇರ ಹೊಣೆ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.

ಮೃತಪಟ್ಟ ಬಾಲಕಿಯ ಬಂಧುಗಳ ಆಕ್ರಂದನ

ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ನ್ಯಾಯ ಒದಗಿಸಬೇಕು, ಮೃತ ಬಾಲಕಿ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಗದಗ ಗ್ರಾಮೀಣ‌ ಪೊಲೀಸ್ ಠಾಣೆ‌ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ದನದ ಕೊಟ್ಟಿಗೆಗೆ ಬೆಂಕಿ: ಐದು ಆಕಳು ಸಜೀವ ದಹನ

ವಿಜಯನಗರ: ದನದ ಕೊಟ್ಟಿಗೆಯ ಹುಲ್ಲಿನ ಶೆಡ್‌ಗೆ ಆಕಸ್ಮಿಕ ಬೆಂಕಿ ತಗುಲಿ ಬೆಂಕಿಯ ಕೆನ್ನಾಲಿಗೆಗೆ ಐದು ಆಕಳು ಸಜೀವ ದಹನಗೊಂಡಿರುವ ಭೀಕರ ಘಟನೆ ಹೂವಿನ ಹಡಗಲಿಯ ದಿ.ಎಂಪಿ.ಪ್ರಕಾಶ ತೋಟದ ಬಳಿ ನಡೆದಿದೆ.

Davanagere fire

ತಡರಾತ್ರಿ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಹಸುಗಳನ್ನು ಕಟ್ಟಿ ಹಾಕಿದ್ದರಿಂದ ಅವುಗಳು ತಪ್ಪಿಸಿಕೊಳ್ಳಲು ಆಗದೆ ಮೃತಪಟ್ಟಿವೆ. ಮೃತಪಟ್ಟ ಆಕಳುಗಳ ಮೌಲ್ಯ ಸುಮಾರು ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಅಧಿಕಾರಿಗಳು ಹಾನಿಗೆ ಒಳಗಾದ ರೈತರ ನೆರವಿಗೆ ಬರಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಬಟ್ಟೆ ಅಂಗಡಿ ಸಂಪೂರ್ಣ ಭಸ್ಮ

ದಾವಣಗೆರೆ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬಟ್ಟೆ ಅಂಗಡಿಯೊಂದು ಸಂಪೂರ್ಣ ಭಸ್ಮವಾಗಿರುವ ಘಟನೆ ಸಂತೆಬೆನ್ನೂರಿನ ಬಾಂಬೆ ಬಿಗ್ ಬಜಾರ್ ನಲ್ಲಿ ಸಂಭವಿಸಿದೆ.

Davanagere fire

ಈಲ್ಲಿನ ಅಂಗಡಿಯಲ್ಲಿ ಮುಂಜಾನೆ 5.30 ರ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಅಂಗಡಿಯನ್ನು ವ್ಯಾಪಿಸಿದೆ. ವಿದ್ಯುತ್ ಕಂಬಕ್ಕೆ ಹಕ್ಕಿಯೊಂದು ತಗುಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದರಿಂದ ಬೆಂಕಿ ತಗುಲಿದೆ ಎನ್ನಲಾಗಿದೆ.

ಈ ನಡುವೆ ಅಂಗಡಿಯಲ್ಲಿ ಮಲಗಿದ್ದ ನಾಲ್ಕೈದು ಕರ್ಮಿಕರು ಬೆಂಕಿಯ ಕೆನ್ನಾಲಿಗೆಗಳಿಂದ ಬಚಾವಾಗಿದ್ದಾರೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರ್ಮಿಕರು ಹೊರ ಬಂದ ಹಿನ್ನೆಲೆಯಲ್ಲಿ ಅವರು ಸುರಕ್ಷಿತವಾಗಿದ್ದಾರೆ.

ಇದನ್ನೂ ಓದಿ: Murder Case : ಕತ್ತು, ಎದೆಗೆ ಇರಿದು ಯುವಕನ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು!

ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಅಗ್ನಿಗಾಹುತಿಯಾಗಿವೆ. ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಪಕ್ಕದ ಹೊಟೆಲ್ ಗೂ ಸಣ್ಣಪುಟ್ಟ ಹಾನಿಯಾಗಿದೆ.

Exit mobile version