Site icon Vistara News

Poisonous Love | ಬ್ರೇಕಪ್‌ ಬೇಡ ಎಂದವನಿಗೆ ವಿಷವುಣಿಸಿದ ವಿಷಕನ್ಯೆ, ಯುವಕ ಪ್ರೀತಿಸಿದ್ದೇ ತಪ್ಪಾ?

Breakup

ತಿರುವನಂತಪುರಂ: ಸಾಮಾನ್ಯವಾಗಿ ಪ್ರೀತಿಸಿದವರಲ್ಲಿ ಯಾರಾದರೂ ಒಬ್ಬರು ಬ್ರೇಕಪ್‌ ಮಾಡಿಕೊಳ್ಳೋಣ ಎಂದಾಗ ಸಹಜವಾಗಿಯೇ ಎದುರಿನವರಿಗೆ ಕೋಪ ಹಾಗೂ ದುಃಖ ಒಮ್ಮೆಗೇ ಆವರಿಸುತ್ತದೆ. ಇಂತಹ ಸಂದರ್ಭದಲ್ಲಿ ಬ್ರೇಕಪ್‌ ಎಂದವರ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎನಿಸುವ, ಕೆಲವೊಮ್ಮೆ ಸೇಡು ತೀರಿಸಿಕೊಂಡ ಪ್ರಕರಣಗಳು ಕಾಣಸಿಗುತ್ತವೆ. ಆದರೆ, ಕೇರಳದಲ್ಲಿ ಬ್ರೇಕಪ್‌ ಮಾಡಿಕೊಳ್ಳುವುದು ಬೇಡ ಎಂದು ಹೇಳಿದ್ದಕ್ಕೇ ಯುವತಿಯು ಪ್ರಿಯತಮನಿಗೇ (Poisonous Love) ವಿಷವುಣಿಸಿದ್ದಾಳೆ.

ಶರೋನ್‌ ರಾಜ್‌ ಹಾಗೂ ಗ್ರೀಷ್ಮಾ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಾಲೇಜು ವಿದ್ಯಾರ್ಥಿಯಾಗಿರುವ ಶರೋನ್‌ಗೆ ಇತ್ತೀಚೆಗೆ ಗ್ರೀಷ್ಮಾ, ಬ್ರೇಕಪ್‌ ಮಾಡಿಕೊಳ್ಳೋಣ ಎಂದಿದ್ದಳು. ಆದರೆ, ಇದಕ್ಕೆ ಶರೋನ್‌ ರಾಜ್‌ ಒಪ್ಪಿಗೆ ಸೂಚಿಸಿರಲಿಲ್ಲ. ಇದರಿಂದ ಕುಪಿತಗೊಂಡ ಆಕೆ, ಶರೋನ್‌ನನ್ನು ಮನೆಗೆ ಕರೆಸಿ, ಪಾನೀಯದಲ್ಲಿ ವಿಷ ಬೆರೆಸಿ ಕೊಟ್ಟಿದ್ದಾಳೆ. ಪ್ರಿಯತಮೆ ಕೊಟ್ಟ ಪಾನೀಯ ಕುಡಿದು ಅಸ್ವಸ್ಥಗೊಂಡ ಶರೋನ್‌, ಅ.25ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಕುಟುಂಬಸ್ಥರು ನೀಡಿದ ದೂರಿನ ಅನ್ವಯ ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ.

ಕೃತ್ಯ ಒಪ್ಪಿಕೊಂಡ ಗ್ರೀಷ್ಮಾ

ಪೊಲೀಸರು ಯುವತಿಯನ್ನು ಬಂಧಿಸಿ ಸುಮಾರು ಎಂಟು ಗಂಟೆ ವಿಚಾರಣೆ ನಡೆಸಿದ್ದು, ಇದೇ ವೇಳೆ ಆಕೆ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. “ಬ್ರೇಕಪ್‌ ಮಾಡಿಕೊಳ್ಳೋಣ ಎಂದರೆ ಆತ ಅದಕ್ಕೆ ಒಪ್ಪಲಿಲ್ಲ. ಹಾಗಾಗಿ ವಿಷವುಣಿಸಿದೆ” ಎಂಬುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಆದರೆ, ಗ್ರೀಷ್ಮಾಳನ್ನು ಪ್ರೀತಿಸಿ, ನೂರಾರು ಕನಸು ಕಂಡಿದ್ದ ಶರೋನ್‌ ಮಾತ್ರ ಮಣ್ಣಾಗಿದ್ದಾನೆ. ಯುವತಿಗೆ ಬೇರೆಯೊಬ್ಬರ ಜತೆ ಮದುವೆ ಫಿಕ್ಸ್‌ ಆದ ಕಾರಣ ಬ್ರೇಕಪ್‌ ಮಾಡಿಕೊಳ್ಳಲು ತೀರ್ಮಾನಿಸಿದ್ದಳು ಎಂದು ತಿಳಿದುಬಂದಿದೆ.

ಇದನ್ನೂ ಓದಿ | Kidnap Case | ಡೇಟಿಂಗ್ ಆ್ಯಪ್ ತಂದ ಅವಾಂತರ: ಪ್ರಿಯತಮನ ಕಿಡ್ನಾಪ್ ಮಾಡಿ ಹಲ್ಲೆ ಎಸಗಿದ ಪ್ರಿಯತಮೆ

Exit mobile version