Site icon Vistara News

Gold Seized: ದುಬೈನಿಂದ ಬಂದ ಪ್ರಯಾಣಿಕನ ಗುದದ್ವಾರದಲ್ಲಿತ್ತು 70 ಲಕ್ಷ ಮೌಲ್ಯದ ಚಿನ್ನ!

Gold Seized

ತಿರುಚಿರಾಪಳ್ಳಿ: ದುಬೈ ನಿಂದ (dubai) ಆಗಮಿಸಿದ ಪ್ರಯಾಣಿಕನೊಬ್ಬ ಗುದನಾಳದಲ್ಲಿ (Rectum) ಬಚ್ಚಿಟ್ಟುಕೊಂಡು ತಂದಿದ್ದ 24 ಕ್ಯಾರೆಟ್ ನ ಒಟ್ಟು 997 ಗ್ರಾಂ ಚಿನ್ನವನ್ನು (Gold Seized) ಶನಿವಾರ ಏರ್ ಇಂಟೆಲಿಜೆನ್ಸ್ ಯೂನಿಟ್ (AIU) ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ 70.58 ಲಕ್ಷ ರೂ. ಗಳಾಗಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ (Air India Express) ದುಬೈನಿಂದ ತಿರುಚ್ಚಿಗೆ (Trichy) ಆಗಮಿಸಿದ ಪ್ರಯಾಣಿಕ ಗುದನಾಳದಲ್ಲಿ ಮೂರು ಪ್ಯಾಕೆಟ್‌ಗಳಲ್ಲಿ ಚಿನ್ನವನ್ನು 1081 ಗ್ರಾಂ ಪೇಸ್ಟ್‌ ಮಾಡಿ ಬಚ್ಚಿಟ್ಟು ತಂದಿದ್ದು, ಆತನನ್ನು ಏರ್ ಇಂಟೆಲಿಜೆನ್ಸ್ ಯೂನಿಟ್ ನ ಅಧಿಕಾರಿಗಳು ವಶಕ್ಕೆ ಪಡೆದಿದ್ದರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.


ಚೆನ್ನೈ ನಲ್ಲಿ 1.25 ಕೆಜಿ ಚಿನ್ನ ವಶ

ಮತ್ತೊಂದು ಘಟನೆಯಲ್ಲಿ ಚೆನ್ನೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಂತಾರಾಷ್ಟ್ರೀಯ ಟರ್ಮಿನಲ್‌ನ ಆಗಮನದ ಲಾಂಜ್‌ನಲ್ಲಿರುವ ಶೌಚಾಲಯದಲ್ಲಿ 85 ಲಕ್ಷ ರೂಪಾಯಿ ಮೌಲ್ಯದ 1.25 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Murder Case : ದೊಡ್ಡವರ ಹಣಕಾಸು ವಿಷ್ಯಕ್ಕೆ 3 ವರ್ಷದ ಮಗು ಬಲಿ; ಎದೆ ಮೇಲೆ ಕಾಲಿಟ್ಟು ಕೊಂದ ಪಾಪಿ

ರೆಸ್ಟ್ ರೂಂನಲ್ಲಿ ಕಸದ ತೊಟ್ಟಿಯಲ್ಲಿ ಪ್ಯಾಕೇಜ್ ಇರುವುದನ್ನು ಗಮನಿಸಿದ ಸ್ವಚ್ಛತಾ ಸಿಬ್ಬಂದಿ ಸಿಐಎಸ್ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಯಾವುದೇ ಸ್ಫೋಟಕ ವಸ್ತು ಇರಬಹುದೆಂದು ಪಾರ್ಸೆಲ್ ಅನ್ನು ಸ್ಕ್ಯಾನ್ ಮಾಡಲಾಗಿದೆ. ಸಿಐಎಸ್ಎಫ್ ಸಿಬ್ಬಂದಿ ಒಳಗೆ ಅಡಗಿಸಿಟ್ಟ ಚಿನ್ನವನ್ನು ಪತ್ತೆ ಹಚ್ಚಿ ಅನಂತರ ಹೆಚ್ಚುವರಿ ತನಿಖೆಗಾಗಿ ಕಸ್ಟಮ್ಸ್ ಅಧಿಕಾರಿಗಳಿಗೆ ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಪ್ರಯಾಣಿಕನೊಬ್ಬ ಮುಖ ಮುಚ್ಚಿಕೊಂಡು ಪಾರ್ಸೆಲ್ ಅನ್ನು ಡಸ್ಟ್‌ಬಿನ್‌ನಲ್ಲಿ ಹಾಕಿರುವುದನ್ನು ತೋರಿಸಿದೆ.

ಈ ವರ್ಷದ ಮಾರ್ಚ್‌ನಲ್ಲಿ ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ಎಐಯು ಅಧಿಕಾರಿಗಳು 410 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದರು.

ಸಿಂಗಾಪುರದಿಂದ ಬಂದಿದ್ದ ಪ್ರಯಾಣಿಕರೊಬ್ಬರಿಂದ 26.62 ಲಕ್ಷ ರೂ. ಮೌಲ್ಯದ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. 24 ಕ್ಯಾರೆಟ್ ನ ಈ ಚಿನ್ನವು 330 ಗ್ರಾಂ ಆಗಿತ್ತು. ಪೇಸ್ಟ್ ರೂಪದಲ್ಲಿ ತರಲಾಗಿತ್ತು. 22 ಸಾವಿರ ಮೌಲ್ಯದ 80 ಗ್ರಾಂ ಚಿನ್ನವನ್ನು ಸಿಂಗಾಪುರದಿಂದ ತಿರುಚ್ಚಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಬಟ್ಟೆಯೊಳಗೆ ಬಚ್ಚಿಟ್ಟುಕೊಂಡು ತಂದಿದ್ದ.

ತಮಿಳುನಾಡಿನ ವಾಹನದಲ್ಲಿ ಬರುತ್ತಿದ್ದ ಚಿನ್ನಾಭರಣ ವಶಕ್ಕೆ

ಇತ್ತೀಚೆಗಷ್ಟೇ ಬೆಂಗಳೂರು ನಗರದಲ್ಲಿ ಭಾರಿ ಮೊತ್ತದ ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. 7.999 ಕೆ.ಜಿ. ಚಿನ್ನಾಭರಣ ಹಾಗು 46.700 ಕೆಜಿ ಬೆಳ್ಳಿ ಸೇರಿ ಸುಮಾರು ಐದು ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ಬೆಂಗಳೂರಿನ ವಿವೇಕ್​ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸೀಝ್​ ಮಾಡಲಾಗಿತ್ತು.

ವಿವೇಕ್ ​ನಗರದ ಗಾಂಧಿ ಪ್ರತಿಮೆ ಬಳಿ ಇರುವ ಚೆಕ್​ ಪೋಸ್ಟ್​ ಬಳಿ ಚುನಾವಣಾ ಅಧಿಕಾರಿಗಳು ವಾಹನ ಪರಿಶೀಲನೆ ನಡೆಸುತ್ತಿದ್ದ ವೇಳೆ ತಮಿಳುನಾಡು ಮೂಲದ ಈಶರ್​ ವಾಹನದಲ್ಲಿ ಚಿನ್ನಾಭರಣ ಸಿಕ್ಕಿತ್ತು.

ಒಂದೇ ಒಂದು ಪತ್ರವನ್ನು ಹಿಡಿದಿದ್ದ ಮೂವರು ವ್ಯಕ್ತಿಗಳು, ಗಾಡಿಯಲ್ಲಿ ಚಿನ್ನಾಭರಣವಿದ್ದು ಅದನ್ನು ನಗರದ ವಿವಿಧೆಡೆ ವಿತರಿಸಲು ಹೋಗುತ್ತಿರುವುದಾಗಿ ವಿಚಾರಣೆ ವೇಳೆ ಹೇಳಿದ್ದರು.

ತಮಿಳುನಾಡಿನ ಉದ್ಯಮಿಯೊಬ್ಬನ ಸೂಚನೆಯ ಮೇರೆಗೆ ಹಾಗೂ ಆತ ಕೊಟ್ಟ ಫೋನ್​ ನಂಬರ್​ನಲ್ಲಿರುವ ವ್ಯಕ್ತಿಯನ್ನು ಸಂಪರ್ಕ​​ ಮಾಡಿ ಚಿನ್ನಾಭರಣ ತಲುಪಿಸಲು ಅವರು ಬಂದಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ವಿವೇಕ್ ​ನಗರ ಪೊಲೀಸರು ವಶಕ್ಕೆ ಪಡೆದಿದ್ದರು.

Exit mobile version