ಚಂಡೀಗಢ: ಹರಿಯಾಣದ ತೊಹಾನದಲ್ಲಿರುವ ಬಾಬಾ ಬಾಲಕನಾಥ್ ದೇವಾಲಯದ ಅರ್ಚಕ, ಜಿಲೇಬಿ ಬಾಬಾ (Jalebi Baba) ಎಂದೇ ಖ್ಯಾತಿಯಾದ ಅಮರ್‌ಪುರಿಯು 120 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಸೋಮವಾರ ಈತನಿಗೆ ಶಿಕ್ಷೆಯ ಪ್ರಮಾಣ ಘೋಷಿಸಲಿದೆ.
ಹೆಣ್ಣುಮಕ್ಕಳಿಗೆ ಮತ್ತು ಬರುವ ಔಷಧ ನೀಡಿ, ಬ್ಲ್ಯಾಕ್ ಮ್ಯಾಜಿಕ್ ಹೆಸರಿನಲ್ಲಿ ಅವರ ಮೇಲೆ ಅತ್ಯಾಚಾರ ಎಸಗುವ ಜತೆಗೆ ಅತ್ಯಾಚಾರದ ವಿಡಿಯೊ ರೆಕಾರ್ಡ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಸಂತ್ರಸ್ತ ಮಹಿಳೆಯರು ದೂರು ನೀಡಿದ ಕಾರಣ ಬಂಧಿಸಲಾಗಿತ್ತು. ಈಗ ಇವನನ್ನು ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದೆ.
ಜಿಲೇಬಿ ಅಂಗಡಿ ಇಟ್ಟಿದ್ದವ ಬಾಬಾ ಆಗಿ ಪರಿವರ್ತನೆ
ಪಂಜಾಬ್‌ನ ಮಾನ್ಸಾದಿಂದ ಹರಿಯಾಣದ ಫತೇಹಾಬಾದ್‌ಗೆ ಆಗಮಿಸಿದ್ದ ಅಮರ್‌ಪುರಿ, ಆರಂಭದಲ್ಲಿ ತೊಹಾನ ರೈಲ್ವೆ ರೋಡ್‌ನಲ್ಲಿ ಜಿಲೇಬಿ ಅಂಗಡಿ ಇಟ್ಟಿದ್ದ. ತನ್ನ ಹೆಂಡತಿ ತೀರಿಕೊಂಡ ಬಳಿಕ ತಾಂತ್ರಿಕನಾಗಿ ಬದಲಾಗಿದ್ದ. ಬ್ಲ್ಯಾಕ್ ಮ್ಯಾಜಿಕ್ ಹೆಸರಿನಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗುತ್ತಿದ್ದ ಈತನನ್ನು 2018ರಲ್ಲಿ ಫತೇಹಾಬಾದ್ ಡಿಎಸ್‌ಪಿ ಆಗಿದ್ದ ಕ್ರಿಕೆಟರ್ ಜೋಗಿಂದರ್ ಶರ್ಮಾ ಅವರು ಬಂಧಿಸಿದ್ದರು.
ಇದನ್ನೂ ಓದಿ | ತನ್ನ ಮೇಲೆ ಅತ್ಯಾಚಾರ ಮಾಡಿದ ಹುಡುಗನ ಅಮ್ಮನಿಗೆ ಗುಂಡು ಹಾರಿಸಿದ ಯುವತಿ; ಮಹಿಳೆ ಸ್ಥಿತಿ ಗಂಭೀರ