Site icon Vistara News

Hindu Girl Murder: ಯುವತಿ ಬರ್ಬರ ಕೊಲೆ ಪ್ರಕರಣ; ಹಂತಕ ದಾವೂದ್‌ ಶೇಖ್‌ ಹಿಂಬಾಲಿಸುತ್ತಿದ್ದ ಸಿಸಿಟಿವಿ ದೃಶ್ಯ ಪತ್ತೆ

Hindu Girl Murder

ನವಿ ಮುಂಬಯಿ: ಯಶಶ್ರೀ ಶಿಂಧೆ ಕೊಲೆ ಪ್ರಕರಣಕ್ಕೆ (Hindu Girl Murder) ಮಹತ್ವದ ಸಾಕ್ಷಿಯೊಂದು ಲಭ್ಯವಾಗಿದೆ. ಆರೋಪಿ ದಾವೂದ್‌ ಶೇಖ್ (Accused Daud Shaikh) ಯುವತಿಯನ್ನು ಹಿಂಬಾಲಿಸುತ್ತಿರುವ ಸಿಸಿಟಿವಿ ದೃಶ್ಯಗಳು (CCTV footage) ಪತ್ತೆಯಾಗಿದೆ. ದಾವುದ್‌ ಶೇಖ್‌ನನ್ನು ಈಗಾಗಲೇ ಕರ್ನಾಟಕದ ಗುಲ್ಬರ್ಗದಲ್ಲಿ ನವಿ ಮುಂಬೈ ಕ್ರೈಂ ಬ್ರಾಂಚ್ (Navi Mumbai Crime Branch) ಘಟಕದ ಪೊಲೀಸರು ಬಂಧಿಸಿದ್ದಾರೆ.

ಉರಾನ್‌ನ 20 ವರ್ಷದ ಯಶಶ್ರೀ ಶಿಂಧೆ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವಾಗ ಹೊಸ ಸಿಸಿಟಿವಿ ದೃಶ್ಯಾವಳಿಗಳು ಕಂಡು ಬಂದಿವೆ. ಇದರಲ್ಲಿ ಯಶಶ್ರೀಯನ್ನು ಆರೋಪಿ ಹಿಂಬಾಲಿಸುತ್ತಿರುವ ದೃಶ್ಯವಿದೆ. ಪ್ರಕರಣದ ಆರೋಪಿ ದಾವೂದ್‌ ಶೇಖ್‌ನನ್ನು ಬಂಧಿಸಿದ ಕೆಲವೇ ಗಂಟೆಗಳ ಅನಂತರ ಈ ವಿಡಿಯೋ ಸಿಕ್ಕಿದೆ.

Murder Case


ಜುಲೈ 25ರ ಸಿಸಿಟಿವಿ ದೃಶ್ಯಾವಳಿಯಲ್ಲಿ ಯಶಶ್ರೀ ಶಿಂಧೆ ಮುಂಬಯಿಯ ಉರಾನ್ ಮಾರುಕಟ್ಟೆಯ ಹಿಂದಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಕೆಲವೇ ನಿಮಿಷಗಳಲ್ಲಿ ಆರೋಪಿ ದಾವುದ್‌ ಶೇಖ್ ಆಕೆಯನ್ನು ಹಿಂಬಾಲಿಸಿಕೊಂಡು ಅದೇ ಸ್ಥಳದಿಂದ ಹಾದುಹೋಗುವುದನ್ನು ಕಾಣಬಹುದು. ಜುಲೈ 25ರಿಂದ ನಾಪತ್ತೆಯಾಗಿದ್ದ ಯಶಶ್ರೀ ಮೃತ ದೇಹ ಜುಲೈ 27ರ ಮುಂಜಾನೆ ಉರಾನ್ ರೈಲು ನಿಲ್ದಾಣದ ಬಳಿಯ ಪೊದೆಗಳಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಕರ್ನಾಟಕದಲ್ಲಿ ಆರೋಪಿಯ ಬಂಧನ

ಪ್ರಕರಣದ ತನಿಖೆ ನಡೆಸಿಕೊಂಡು ಕರ್ನಾಟಕಕ್ಕೆ ಬಂದ ನವಿ ಮುಂಬಯಿ ಅಪರಾಧ ವಿಭಾಗದ ಕೇಂದ್ರ ಘಟಕವು 24 ವರ್ಷದ ದಾವುದ್ ಶೇಖ್‌ನನ್ನು ಗುಲ್ಬರ್ಗ ಜಿಲ್ಲೆಯ ಶಾಹಪುರ್ ಬೆಟ್ಟದ ಪ್ರದೇಶದಿಂದ ಬಂಧಿಸಿದೆ.

2019ರಲ್ಲಿ ಯಶಶ್ರೀಯ ಬಗ್ಗೆ ತಿಳಿದಿದ್ದ ಶೇಖ್ ಆಕೆಯೊಂದಿಗೆ ಸ್ನೇಹ ನಡೆಸಲು ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಆತನ ವಿರುದ್ಧ ಸಂತ್ರಸ್ತೆಯ ತಂದೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಅನಂತರ ಬಂಧಿಸಲಾಗಿತ್ತು. ಸುಮಾರು ಆರು ತಿಂಗಳು ಜೈಲಿನಲ್ಲಿದ್ದ ಶೇಖ್ ಬಿಡುಗಡೆಯಾದ ಬಳಿಕ ತನ್ನ ತವರೂರು ಕರ್ನಾಟಕಕ್ಕೆ ಬಂದು ಡ್ರೈವರ್ ಕೆಲಸ ಮಾಡಿಕೊಂಡಿದ್ದ.

ತ್ರಿಕೋನ ಪ್ರೇಮ

ಪೊಲೀಸರ ಪ್ರಕಾರ ತ್ರಿಕೋನ ಪ್ರೇಮದಿಂದಾಗಿ ಶೇಖ್ ಮತ್ತು ಶಿಂಧೆ ನಡುವಿನ ಸಂಬಂಧವು ಹದಗೆಡಲು ಪ್ರಾರಂಭಿಸಿತು. ಸಂತ್ರಸ್ತೆ ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು ಎಂದು ಹೇಳಲಾಗಿದ್ದು, ಇದು ಶೇಖ್‌ನನ್ನು ಕೆರಳಿಸಿತು ಎನ್ನಲಾಗಿದೆ. ಜುಲೈ 22ರಂದು ಕರೆ ದಾಖಲೆಗಳ ಪ್ರಕಾರ ಶೇಖ್ ಉರಾನ್‌ಗೆ ಬಂದು ಜುಲೈ 25ರಿಂದ ಫೋನ್ ಸ್ವಿಚ್ ಆಫ್ ಮಾಡಿದ್ದ ಎಂದು ಅಪರಾಧ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಶೇಖ್ ಹತಾಶೆಗೊಂಡಿರುವುದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ಸ್ಪಷ್ಟವಾಗಿದೆ. ಜುಲೈ 25ರಂದು ಶಿಂಧೆಯನ್ನು ಇರಿದು ಕೊಲೆ ಮಾಡಲು ಕಾರಣವಾದ ನಿಖರವಾದ ಘಟನೆಗಳು ಇನ್ನೂ ತಿಳಿದು ಬರಬೇಕಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ನವಿ ಮುಂಬೈಗೆ ಕರೆದುಕೊಂಡು ಹೋಗಲಾಗಿದೆ.

ಇದನ್ನೂ ಓದಿ: Brutal Murder: ಮುಂಬಯಿ ಯುವತಿಯನ್ನು ಬರ್ಬರವಾಗಿ ಕೊಂದ ಪಾತಕಿ ದಾವೂದ್ ಯಾದಗಿರಿಯಲ್ಲಿ ಆರೆಸ್ಟ್‌

ಶಿಂಧೆಯ ಹತ್ಯೆಯನ್ನು ‘ಕ್ರೂರ’ ಎಂದು ವಿವರಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಸುಳ್ಳು ಎಂದು ವಲಯ I ರ ಉಪ ಪೊಲೀಸ್ ಆಯುಕ್ತ ವಿವೇಕ್ ಪನ್ಸಾರೆ ಸ್ಪಷ್ಟಪಡಿಸಿದ್ದಾರೆ. ಶಿಂಧೆಯವರನ್ನು ಇರಿದು ಸಾಯಿಸಲಾಗಿದೆ. ಆದರೆ ಆಕೆಯ ಖಾಸಗಿ ಅಂಗಗಳಿಗೆ ಗಾಯವಾಗಿದೆ. ಆಕೆಯ ತಲೆಯನ್ನು ಒಡೆದು ಹಾಕಲಾಗಿದೆ, ಆಕೆಯ ಸ್ತನಗಳು, ಕೈಗಳನ್ನು ಕತ್ತರಿಸಲಾಗಿದೆ ಎಂಬ ಹೇಳಿಕೆಗಳು ತಪ್ಪುದಾರಿಗೆಳೆಯುವ ಮತ್ತು ಸುಳ್ಳು ಮಾಹಿತಿ. ಕೊಲೆಯ ಹಿಂದಿನ ಉದ್ದೇಶ ತ್ರಿಕೋನ ಪ್ರೇಮವೇ ಹೊರತು ಲವ್ ಜಿಹಾದ್ ಅಲ್ಲ ಎನ್ನುವುದು ಪೊಲೀಸರ ಹೇಳಿಕೆಯಾಗಿದೆ.

Exit mobile version