Site icon Vistara News

Hindu Girl Raped | ತೆಲಂಗಾಣದಲ್ಲಿ 15 ವರ್ಷದ ಹಿಂದು ಬಾಲಕಿ ಮೇಲೆ ಇಬ್ಬರು ಮುಸ್ಲಿಮರಿಂದ ನಿರಂತರ ಅತ್ಯಾಚಾರ

Gang rape by friends

ಹೈದರಾಬಾದ್:‌ ತೆಲಂಗಾಣದ ವಾರಂಗಲ್‌ ಜಿಲ್ಲೆಯಲ್ಲಿ 15 ವರ್ಷದ ಹಿಂದು ಬಾಲಕಿ ಮೇಲೆ ಇಬ್ಬರು ಮುಸ್ಲಿಮರು (Hindu Girl Raped) ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ನೆರೆ ಮನೆಯವರೇ ಬಾಲಕಿಯ ಮೇಲೆ ಕಳೆದ ಆರು ತಿಂಗಳಿಂದ ನಿರಂತರವಾಗಿ ಅತ್ಯಾಚಾರ ಎಸಗಿದ್ದು, ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.

“ವಾರಂಗಲ್‌ ಜಿಲ್ಲೆ ಮಿಲ್ಸ್‌ ಕಾಲೋನಿ ಪೊಲೀಸ್‌ ಠಾಣೆಯಲ್ಲಿ ಬಾಲಕಿಯ ಪೋಷಕರು ತಮ್ಮ ಮಗಳ ಮೇಲೆ ಅತ್ಯಾಚಾರ ಎಸಗಿರುವ ಕುರಿತು ದೂರು ನೀಡಿದ್ದಾರೆ. ನೆರೆ ಮನೆಯವರಾದ, ಮುಸ್ಲಿಂ ಸಮುದಾಯಕ್ಕೆ ಸೇರಿದ ಇಬ್ಬರು ಅತ್ಯಾಚಾರ ಎಸಗಿದ್ದಾರೆ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ” ಎಂದು ವಾರಂಗಲ್‌ ಕಮಿಷನರ್‌ ಎ.ವಿ.ರಂಗನಾಥ್‌ ಮಾಹಿತಿ ನೀಡಿದ್ದಾರೆ.

ಬಾಲಕಿಯ ಪೋಷಕರು ನೀಡಿದ ದೂರಿನಂತೆ ಇಬ್ಬರನ್ನೂ ಬಂಧಿಸಲಾಗಿದ್ದು, ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಇಬ್ಬರೂ ಸಹೋದರರಾಗಿದ್ದು, ಒಬ್ಬನು ಬಾಲಕಿಗೆ ಆಮಿಷವೊಡ್ಡಿ ಮನೆಗೆ ಕರೆಸಿದ್ದಾನೆ. ಇದಾದ ಬಳಿಕ ಇಬ್ಬರೂ ಸೇರಿ ಆಗಾಗ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಗಳ ಮನೆಗೆ ದಾಳಿ
ಹಿಂದು ಬಾಲಕಿಯ ಮೇಲೆ ಅತ್ಯಾಚಾರ ಖಂಡಿಸಿ ಹಿಂದು ಪರ ಸಂಘಟನೆಗಳು ಆರೋಪಿಗಳ ಮನೆಗೆ ದಾಳಿ ನಡೆಸಿದ್ದಾರೆ. ಮನೆಯ ಕಿಟಕಿಗಳ ಗಾಜು ಪುಡಿ ಮಾಡಿದ್ದಲ್ಲದೆ, ಎರಡು ದ್ವಿಚಕ್ರ ವಾಹನಗಳನ್ನೂ ಧ್ವಂಸಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕೂಡ ಹಿಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ | Sexual harrassement | ದಲಿತ ಮಹಿಳೆ ಮೇಲೆ ಅತ್ಯಾಚಾರ: ಸ್ಯಾಂಟ್ರೋ ರವಿ ಮೇಲೆ ಕೇಸ್‌, ರಾಜಕೀಯ ನಾಯಕರ ಆಪ್ತನೇ ಇವನು?

Exit mobile version