Site icon Vistara News

Honour Killing : ಮಗಳ ಕತ್ತು ಕೊಯ್ದು ಕೊಂದ ಪಾಪಿ ತಂದೆ; ಅನ್ಯ ಜಾತಿ ಯುವಕನ ಪ್ರೀತಿಸಿದ್ದೇ ತಪ್ಪಾಯ್ತು!

honour killing Man kills daughter

ದೇವನಹಳ್ಳಿ (ಬೆಂಗಳೂರು) : ಸಮಾಜ ಇಷ್ಟು ಮುಂದೆ ಮುಂದುವರಿದಿದೆ ಎಂದು ಹೇಳುತ್ತಿದ್ದರೂ ಇನ್ನೂ ಜಾತಿಯ ವಿಷ ಮಾತ್ರ ಸ್ವಲ್ಪವೂ ಶಕ್ತಿ ಕಳೆದುಕೊಂಡಿಲ್ಲ. ಅದು ದಿನದಿಂದ ದಿನಕ್ಕೆ ತನ್ನ ಭಯಾನಕ ಪರಿಣಾಮಗಳನ್ನು ಮುಂದುವರಿಸಿದೆ. ಮಗಳು ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆ (Daughters love with boy from other Caste) ಎಂಬುದನ್ನು ಸಹಿಸಲಾಗದ ತಂದೆಯೊಬ್ಬ ಮಗಳೆಂಬ ಸಣ್ಣ ಮಮಕಾರವೂ ಇಲ್ಲದೆ ಆಕೆಯನ್ನು ಕೊಂದು (Honour killing) ಹಾಕಿದ್ದಾನೆ. ಈ ಘಟನೆ (Man kills his own daughter) ನಡೆದಿರುವುದು ಬೆಂಗಳೂರು ಹೊರವಲಯದ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದಲ್ಲಿ.

ದೇವನಹಳ್ಳಿಯ ಬಿದನೂರು ಗ್ರಾಮದ 20 ವರ್ಷದ ಯುವತಿ ಕವನ ಎಂಬವಳೇ ತಂದೆಯಿಂದ ಕೊಲೆಯಾದವಳು. ಆಕೆಯನ್ನು ಕೊಂದ ತಂದೆಯ ಹೆಸರು ಮಂಜುನಾಥ್‌ (25).

ಕಾಲೇಜಿನಲ್ಲಿ ಓದುತ್ತಿರುವ ಕವನ ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ತಂದೆ ಮಂಜುನಾಥನಿಗೆ ಮಗಳು ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾಳೆ ಎನ್ನುವುದು ಒಂದು ಆಕ್ರೋಶವಾದರೆ ಇನ್ನೊಂದು ಆಕೆ ಪ್ರೀತಿಸುತ್ತಿರುವುದು ಅನ್ಯ ಜಾತಿಯ ಯುವಕನನ್ನು ಎನ್ನುವುದು ಇನ್ನಷ್ಟು ಪಿತ್ಥ ನೆತ್ತಿಗೇರಿತ್ತು.

ಬೇರೆ ಜಾತಿಯ ಹುಡುಗನನ್ನು ಪ್ರೀತಿಸಬೇಡ ಎಂದು ಆತ ಆಕೆಗೆ ಎಚ್ಚರಿಕೆ ಕೊಟ್ಟಿದ್ದನಂತೆ. ಆದರೆ, ಆಕೆ ಅಪ್ಪನ ಆದೇಶವನ್ನು ಮೀರಿ ಕದ್ದು ಮುಚ್ಚಿ ಅವನ ಜತೆ ಸಂಬಂಧ ಮುಂದುವರಿಸಿದ್ದಳು. ಇದನ್ನು ಯಾರೋ ಮಂಜುನಾಥನಿಗೆ ತಿಳಿಸಿದ್ದರು.

ಮಂಜುನಾಥ ತನ್ನ ಮಗಳ ಚಲನವಲನದ ಮೇಲೆ ಕಣ್ಣಿಟ್ಟಿದ್ದ. ಬುಧವಾರ ರಾತ್ರಿ ಮನೆಯಲ್ಲಿ ಇದೇ ವಿಚಾರದ ಬಗ್ಗೆ ಚರ್ಚೆ ನಡೆದಿತ್ತು. ಆಗ ಮಗಳು ಮೊದಲು ತಾನು ಪ್ರೀತಿ ಮುಂದುವರಿಸಿಲ್ಲ ಎಂದು ಹೇಳಿದ್ದಳೆನ್ನಲಾಗಿದೆ. ಆದರೆ, ಮಂಜುನಾಥ್‌ ಆಕೆಗೆ ತನ್ನಲ್ಲಿರುವ ದಾಖಲೆಗಳನ್ನು ತೋರಿಸಿದಾಗ ಆಕೆ ಕೊನೆಗೆ ಒಪ್ಪಿಕೊಂಡಳು. ಈ ಮಧ್ಯೆ ಮಂಜುನಾಥ ಮತ್ತು ಆಕೆಯ ನಡುವೆ ಮಾತಿನ ಚಕಮಕಿ ನಡೆದಿದೆ.

ಅಂತಿಮವಾಗಿ ತೀವ್ರವಾಗಿ ಸಿಟ್ಟುಗೊಂಡ ಮಂಜುನಾಥ ತನ್ನ ಮಾತು ಮೀರಿ ಬೇರೆ ಜಾತಿಯ ಹುಡುಗನನ್ನು ಪ್ರೀತಿಸುತ್ತಿರುವ ಮಗಳನ್ನು ಕೊಲೆ ಮಾಡಲು ನಿರ್ಧಾರ ಮಾಡಿದ್ದಾನೆ. ಅಲ್ಲೇ ಇದ್ದ ಕತ್ತಿಯಿಂದ ಆಕೆಯ ಕತ್ತನ್ನೇ ಕೊಯ್ದು ಹಾಕಿದ್ದಾನೆ. ಜತೆಗೆ ಕಾಲು ಸೇರಿದಂತೆ ಬೇರೆ ಭಾಗಗಳಿಗೂ ದಾಳಿ ಮಾಡಿದ್ದಾನೆ.

ಈ ಘಟನೆ ಬಿದಲೂರು ಗ್ರಾಮದಲ್ಲಿ ಭಾರಿ ಆತಂಕ ಮೂಡಿಸಿದೆ. ಬೆಳಗ್ಗೆ ಮನೆಯ ಮುಂದೆ ನೂರಾರು ಜನರು ನೆರೆದಿದ್ದಾರೆ. ಅಪ್ಪನ ಕ್ರೌರ್ಯಕ್ಕೆ ಎಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Honour Killng: ಮನುಷ್ಯ ಚಂದ್ರನ ಮೇಲೆ ಕಾಲಿರಿಸಿದ್ದರೂ… ಮರ್ಯಾದೆಗೇಡು ಹತ್ಯೆಗಳ ವಿರುದ್ಧ ಸಿಎಂ ಸಿದ್ಧರಾಮಯ್ಯ ಆಕ್ರೋಶ

ಕೋಲಾರದಲ್ಲೂ ನಡೆದಿದ್ದು ತಂದೆಯಿಂದ ಮಗಳ ಹತ್ಯೆ

ಕೋಲಾರ ಜಿಲ್ಲೆಯ ಕೋಲಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಅನ್ಯಕೋಮಿನ ಯುವಕನ ಜತೆ ಪ್ರೀತಿಯಲ್ಲಿದ್ದ ಮಗಳನ್ನು ತಂದೆಯೇ ಕೊಂದು ಹಾಕಿದ ಘಟನೆಯೊಂದು ಆಗಸ್ಟ್‌ 25ರಂದು ನಡೆದಿತ್ತು. ರಮ್ಯಾ (19) ಎಂಬಾಕೆಯನ್ನು ಆಕೆಯ ತಂದೆ ವೆಂಕಟೇಶ್‌ ಗೌಡ ಕೊಲೆ ಮಾಡಿ ಯಾರಿಗೂ ಗೊತ್ತಾಗದಂತೆ ಸಮಾಧಿ ಮಾಡಿದ್ದ.

ಕೊಲೆಯಾದ ರಮ್ಯಾ

ರಮ್ಯಾ ನರಸಾಪುರ ಖಾಸಗಿ ಕಂಪನಿಗೆ ಕೆಲಸಕ್ಕೆ ಹೋಗುವಾಗ ಅನ್ಯ ಕೋಮಿನ ಯುವಕನ ಜತೆ ಪ್ರೀತಿಯಾಗಿತ್ತು. ಈ ವಿಚಾರ ತಿಳಿದ ವೆಂಕಟೇಶ್‌ ಗೌಡ ಬುದ್ಧಿ ಹೇಳಿದ್ದ. ಆದರೆ, ಆಕೆ ತಂದೆಯ ಮಾತನ್ನು ಕಿವಿಗೆ ಹಾಕಿಕೊಳ್ಳದೆ ತನ್ನ ಪ್ರೀತಿಯನ್ನು ಮುಂದುವರಿಸಿದ್ದಳು ಎನ್ನಲಾಗಿದೆ. ಆಗಸ್ಟ್‌ 25ಕ್ಕೆ ಆಕೆಯನ್ನು ತಂದೆ ಕೊಂದು ಹಾಕಿದ್ದಾನೆ. ಮನೆಯವರೆಲ್ಲ ಸೇರಿ ಯಾರಿಗೂ ಗೊತ್ತಾಗದಂತೆ ಆಕೆಯ ಅಂತ್ಯ ಸಂಸ್ಕಾರ ಮುಗಿಸಿದ್ದಾರೆ. ಆದರೆ ಊರಿನಲ್ಲಿ ಈಗ ಬಗ್ಗೆ ಗುಸುಗುಸು ಆರಂಭವಾಗಿ ಪೊಲೀಸರು ಬಂದು ಮನೆಯವರನ್ನು ಅರೆಸ್ಟ್‌ ಮಾಡಿದ್ದರು. ಹೆಣವನ್ನು ಸಮಾಧಿಯಿಂದ ತೆಗೆದು ಪರಿಶೀಲನೆ ನಡೆಸಿದಾಗ ಕೊಲೆ ನಡೆದಿದ್ದು ಸ್ಪಷ್ಟವಾಗಿತ್ತು.


Exit mobile version