Site icon Vistara News

Crime | 12 ಕೋಟಿ ರೂ. ಮೌಲ್ಯದ ಮೊಬೈಲ್‌ ಕದ್ದ ಪ್ರಕರಣವನ್ನು ಪೊಲೀಸರು 24 ಗಂಟೆಯಲ್ಲಿ ಭೇದಿಸಿದ್ದು ಹೇಗೆ?

Truck

ಭೋಪಾಲ್‌: ಮಧ್ಯಪ್ರದೇಶದಲ್ಲಿ ಸುಮಾರು ೧೨ ಕೋಟಿ ರೂ. ಮೌಲ್ಯದ ಮೊಬೈಲ್‌ಗಳನ್ನು ಕದ್ದು (Crime), ಅವುಗಳನ್ನು ಬೇರೆಡೆ ಸಾಗಿಸುವ ವೇಳೆ ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಕರಣವನ್ನು ಪೊಲೀಸರು ಕೇವಲ ೨೪ ಗಂಟೆಯಲ್ಲಿ ಭೇದಿಸಿದ್ದಾರೆ. ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯ ಮೂಲಕ ಹರಿಯಾಣಕ್ಕೆ ೧೨ ಕೋಟಿ ರೂ. ಮೌಲ್ಯದ ಮೊಬೈಲ್‌ಗಳನ್ನು ಸಾಗಿಸುತ್ತಿದ್ದ ಟ್ರಕ್‌ನಿಂದ ನಾಲ್ವರು ದುಷ್ಕರ್ಮಿಗಳು ಕಳ್ಳತನ ಮಾಡಿದ್ದರು. ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸರು ಕಳ್ಳತನ ನಡೆದ ಸ್ಥಳದಿಂದ ೪೦೦ ಕಿ.ಮೀ. ದೂರದಲ್ಲಿ ಬೇರೊಂದು ಟ್ರಕ್‌ನಲ್ಲಿದ್ದ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.

“ನಾಲ್ವರು ದುಷ್ಕರ್ಮಿಗಳು ಕಳೆದ ಗುರುವಾರ ರಾತ್ರಿ ಮೊಬೈಲ್‌ಗಳಿದ್ದ ಟ್ರಕ್‌ಅನ್ನೇ ಕಳ್ಳತನ ಮಾಡಿದ್ದರು. ಟ್ರಕ್‌ ಡ್ರೈವರ್‌ನನ್ನೂ ಅವರು ಅಪಹರಣ ಮಾಡಿ, ಅಪರಾಧ ಎಸಗಿದ ಬಳಿಕ ನರಸಿಂಗ್‌ಪುರ ಬಳಿ ಚಾಲಕನನ್ನು ಬಿಟ್ಟಿದ್ದರು. ಬೇರೆ ಟ್ರಕ್‌ಗೆ ಮೊಬೈಲ್‌ಗಳನ್ನು ತುಂಬಿಕೊಂಡು ಸಾಗಿಸುವ ವೇಳೆ ಟ್ರಕ್‌ಅನ್ನು ಜಪ್ತಿ ಮಾಡಲಾಗಿದೆ. ಪೊಲೀಸರು ದಾಳಿ ಮಾಡುತ್ತಲೇ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ” ಎಂದು ಸಾಗರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತರುಣ್‌ ನಾಯಕ್‌ ತಿಳಿಸಿದ್ದಾರೆ.

ಮೊಬೈಲ್‌ಗಳನ್ನು ಟ್ರಕ್‌ ಮೂಲಕ ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದ ಮಧ್ಯಪ್ರದೇಶದ ಮೂಲಕ ಹರಿಯಾಣದ ಗುರುಗ್ರಾಮಕ್ಕೆ ಸಾಗಿಸಲಾಗುತ್ತಿತ್ತು. ಇದನ್ನು ಮೊದಲೇ ತಿಳಿದಿದ್ದ ಕಳ್ಳರು ಟ್ರಕ್‌ಅನ್ನೇ ಕಳ್ಳತನ ಮಾಡಿದ್ದರು. ಆದರೆ, ಪ್ರಕರಣವನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿಯೇ ಭೇದಿಸಿದ್ದಾರೆ.

ಇದನ್ನೂ ಓದಿ | Life story | ಕಳ್ಳತನ ಮಾಡಿದಾತನೇ ಪೊಲೀಸ್‌ ಪ್ರಶಸ್ತಿ ಪಡೆದು ಹಲವರಿಗೆ ಸ್ಫೂರ್ತಿಯಾದ ಕಥೆ!

Exit mobile version