ಬೆಳಗಾವಿ: ಆನ್ಲೈನ್ ಗೇಮಿಂಗ್ (Online gambling) ಗೀಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಬೆಳಗಾವಿ ದಂಡು ಮಂಡಳಿ ಸಿಇಒ ಕೆ. ಆನಂದ ಅವರ ಆತ್ಮಹತ್ಯೆಗೆ ಮುಂಚೆ ಅವರ ಮಾಡಿದ್ದ ಪ್ಲ್ಯಾನ್ ಏನು ಎಂಬುದು ಬಯಲಾಗಿದೆ. ಪ್ರಕರಣದ ತನಿಖೆ ಮಾಡುತ್ತಿರುವ ಪೊಲೀಸರಿಗೆ ಅಚ್ಚರಿಯ ವಿಷಯವೊಂದು ತಿಳಿದುಬಂದಿದೆ. ಮೊದಲಿಗೆ ಇದು ಕೊಲೆಯೋ (Murder Case), ಆತ್ಮಹತ್ಯೆಯೋ (Self Harming) ಎಂಬ ಹಲವು ಅನುಮಾನಗಳು ಹುಟ್ಟಿಕೊಂಡಿದ್ದರೂ ತನಿಖೆ ವೇಳೆ ಆತ್ಮಹತ್ಯೆ ಎಂಬುದು ಬಯಲಾಗಿತ್ತು. ಆದರೆ, ನಡೆಸಿದ ಪೊಲೀಸರಿಗೆ ನಿಗೂಢ ಸಾವಿನ ರಹಸ್ಯ ಬಯಲಾಗಿದೆ. ಸಾಯುವ ಮುಂಚೆ ಆನಂದ ತಮ್ಮ ಕೋಣೆಯಲ್ಲಿಟ್ಟಿದ್ದ ಲ್ಯಾಪ್ಟಾಪ್ನಲ್ಲಿ ಖುಷಿಯಿಂದ ಸಾಯುವುದು ಹೇಗೆ ಎಂಬ ವಿಷಯದ ಬಗ್ಗೆ ಗೂಗಲ್ ಸರ್ಚ್ (Google Search) ಹಾಗೂ ಯೂಟ್ಯೂಬ್ ವಿಡಿಯೊ (YouTube Video) ಮಾಡಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.
ಬೆಳಗಾವಿ ಕ್ಯಾಂಪ್ ಪ್ರದೇಶದಲ್ಲಿರುವ ಸರ್ಕಾರಿ ನಿವಾಸದಲ್ಲಿ ಕೆ. ಆನಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳುನಾಡು ಮೂಲದವರಾದ ಆನಂದ ಕಳೆದ ಒಂದೂವರೆ ವರ್ಷಗಳಿಂದ ದಂಡು ಮಂಡಳಿ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದರು. ಆನಂದ ಈ ನಡುವೆ ಆನ್ಲೈನ್ ಹಾಗೂ ಆಫ್ಲೈನ್ ಗೇಮ್ಗಾಗಿ ಲಕ್ಷಾಂತರ ರೂ. ಕೈ ಸಾಲ ಮಾಡಿಕೊಂಡಿದ್ದರು. ಸಾಲದ ಹೊರಗೆ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತೀರಿಸಲಾಗದಷ್ಟು ಸಾಲ ಮಾಡಿಕೊಂಡಿದ್ದಾಗಿ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Karnataka Weather: ಉತ್ತರ ಕರ್ನಾಟಕಕ್ಕೂ ಆವರಿಸಲಿದ್ಯಾ ಮಳೆ? ಯಾವ್ಯಾವ ಜಿಲ್ಲೆಗೆ ಅಲರ್ಟ್
ಎರಡು ದಿನಗಳ ಹಿಂದೆಯೇ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನ.25ರಂದು ಬಾಗಿಲು ತಟ್ಟಿದ್ದರೂ ತೆರೆಯದೆ ಇದ್ದಾಗ ಸಿಬ್ಬಂದಿ ಆತಂಕಗೊಂಡು ಕ್ಯಾಂಪ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ಹೊಡೆದು ಒಳ ನುಗ್ಗಿದಾಗ ಆನಂದ ಶವವಾಗಿ ಪತ್ತೆಯಾಗಿದ್ದರು.
ಆನಂದದಿಂದ ಸಾಯುವುದು ಹೇಗೆ? ಗೂಗಲ್ ಸರ್ಚ್!
ಕೆ. ಆನಂದ್ ಸಾಯುವ ಮುನ್ನ ಬೆಡ್ ರೂಂನಲ್ಲಿ ಆನ್ ಮಾಡಿದ್ದ ಮ್ಯೂಸಿಕ್ ಸಹ ಹಾಗೆಯೇ ಇತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಅವರ ಲ್ಯಾಪ್ಟಾಪ್ ಅನ್ನು ಪರಿಶೀಲನೆ ನಡೆಸಿದಾಗ ಗೂಗಲ್ ಸರ್ಚ್ನಲ್ಲಿ ಬಹಳ ಹೊತ್ತಿನವರೆಗೂ ಕೆಲವು ವಿಡಿಯೊಗಳನ್ನು ಹುಡುಕಾಡಿದ್ದು, ಗೊತ್ತಾಗಿದೆ. ಆದರೆ, ಆ ವಿಡಿಯೊ ನೋಡಿ ಪೊಲೀಸರು ಅಚ್ಚರಿಗೊಂಡಿದ್ದಾರೆ. ಒಬ್ಬ ವ್ಯಕ್ತಿ ನಗುನಗುತಾ ಡ್ಯಾನ್ಸ್ ಮಾಡುತ್ತಾ ಪ್ರಾಣ ಬಿಡುವುದು ಹೇಗೆ ಎಂಬ ಬಗ್ಗೆ ಇರುವ ವಿಡಿಯೊ ನೋಡಿದ್ದಾರೆ. ಅಲ್ಲದೆ, ಹೇಗೆ ಆನಂದದಿಂದ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವುದನ್ನು ಸಹ ಸರ್ಚ್ ಮಾಡಿದ್ದರು. ಹೀಗಾಗಿ ಮ್ಯೂಸಿಕ್ ಹಾಕಿಕೊಂಡು ಡ್ಯಾನ್ಸ್ ಮಾಡುತ್ತಾ ಆತ್ಮಹತ್ಯೆಗೆ ಶರಣಾದರೇ ಎನ್ನುವ ಅನುಮಾನ ಈಗ ಪೊಲೀಸರಿಗೆ ಕಾಡುತ್ತಿದೆ.
ದಂಡು ಮಂಡಳಿ ಮೇಲೆ ಸಿಬಿಐ ದಾಳಿ
ದಂಡು ಮಂಡಳಿಯ ಬಗ್ಗೆ ಹಲವಾರು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಳೆದ ನವೆಂಬರ್ 19 ರಂದು ದಂಡು ಮಂಡಳಿಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಇದಾದ ಬಳಿಕ ಸರ್ಕಾರಿ ನಿವಾಸದಲ್ಲಿ ಒಬ್ಬರೇ ವಾಸವಿದ್ದ ಆನಂದ್, ಬೆಡ್ ರೂಮ್ನಲ್ಲಿ ಮೃತದೇಹ ಪತ್ತೆ ಆಗಿತ್ತು. ಹೀಗಾಗಿ ಹಲವಾರು ಅನುಮಾನಗಳು ಹುಟ್ಟಿಕೊಂಡಿತ್ತು.
ವಿಷಯ ತಿಳಿಯುತ್ತಿದ್ದಂತೆ ಬೆಳಗಾವಿ ನಗರದ ಕಾನೂನು ಸುವ್ಯವಸ್ಥೆ ಡಿಸಿಪಿ ರೋಹನ್ ಜಗದೀಶ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೆ. ಆನಂದ ಅವರು 2015ನೇ ಬ್ಯಾಚ್ನ ಐಡಿಎಎಸ್ ಅಧಿಕಾರಿ ಆಗಿದ್ದರು. ಎರಡು ದಿನಗಳಿಂದ ಮನೆಯ ರೂಂ ಲಾಕ್ ಆಗಿತ್ತು. ಅನುಮಾನಗೊಂಡ ಸಿಬ್ಬಂದಿ ಶನಿವಾರ ಕ್ಯಾಂಪ್ ಪೊಲೀಸರಿಗೆ ಮಾಹಿತಿ ನೀಡಿದರು. ಬಾಗಿಲು ತೆರೆದು ನೋಡಿದಾಗ ಆನಂದ ಶವವಾಗಿ ಪತ್ತೆಯಾಗಿದ್ದಾರೆ. ವೈದ್ಯಕೀಯ ತಪಾಸಣೆ ನಡೆಸಿ, ಹಿರಿಯ ಕ್ರೈಂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನಂದ ಅವರ ಕುಟುಂಬಸ್ಥರಿಗೂ ಮಾಹಿತಿ ನೀಡಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಮೃತದೇಹವನ್ನು ರವಾನೆ ಮಾಡಲಾಗಿದೆ ಎಂದರು.
ಇದನ್ನೂ ಓದಿ: BY Vijayendra : ಹೆದರಬೇಡಿ ನಾನಿದ್ದೇನೆ; ಬಿಜೆಪಿ ಕಾರ್ಯಕರ್ತರ ಬೆನ್ನಿಗೆ ನಿಂತ ಬಿ.ವೈ. ವಿಜಯೇಂದ್ರ!
ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆ.ಆನಂದ ಅವರ ರೂಮ್ನಲ್ಲಿ ಡೆತ್ ನೋಟ್ ಸಿಕ್ಕಿದೆ. ಬೆಡ್ ಮೇಲೆ ವಿಷದ ಬಾಟಲ್ ಸಿಕ್ಕಿದೆ. ಮೂಗಿನಿಂದ ರಕ್ತ ಬಂದಿದ್ದು, ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡು ಬಂದಿದೆ ಎಂದರು.