ತಿರುವನಂತಪುರಂ: ಕೇರಳದಲ್ಲಿ ಹಣದ ಆಸೆ ತೋರಿಸಿ ಇಬ್ಬರು ಮಹಿಳೆಯರನ್ನು ಕ್ರೂರವಾಗಿ ಹತ್ಯೆಗೈದ (Human Sacrifice) ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ಕುಕೃತ್ಯದ ಕುರಿತು ಬಗೆದಷ್ಟೂ ಮಾಹಿತಿ ಲಭ್ಯವಾಗುತ್ತಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮೊಹಮ್ಮದ್ ಶಫಿ ಮನೆಯ ಫ್ರಿಡ್ಜ್‌ನಲ್ಲಿ ಮನುಷ್ಯರ ೧೦ ಕೆಜಿ ಮಾಂಸ ಪತ್ತೆಯಾಗಿದೆ. ನಿತ್ಯವೂ ಇದೇ ಮಾಂಸದ ಅಡುಗೆ ಮಾಡಿಕೊಂಡು ಮೊಹಮ್ಮದ್ ಶಫಿ ಸೇವಿಸುತ್ತಿದ್ದ ಎಂದು ತಿಳಿದುಬಂದಿದೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುವ ಭಾಗವಾಗಿ ಎಳಂತೂರ್‌ನಲ್ಲಿರುವ ಮೊಹಮ್ಮದ್ ಶಮಿ ನಿವಾಸದಲ್ಲಿ ಪೊಲೀಸರು ಸುಮಾರು ಎಂಟು ಗಂಟೆ ಸಾಕ್ಷ್ಯ ಸಂಗ್ರಹ ಕಾರ್ಯಾಚರಣೆ ಕೈಗೊಂಡಿದ್ದಾರೆ. “ಈ ವೇಳೆ ಫ್ರಿಡ್ಜ್‌ನಲ್ಲಿ ಮನುಷ್ಯರ ೧೦ ಕೆಜಿ ಮಾಂಸ ದೊರೆತಿದೆ. ಹಾಗೆಯೇ, ಫ್ರಿಡ್ಜ್ ಮೇಲೆ ಮೊಹಮ್ಮದ್ ಶಫಿ ಬೆರಳಚ್ಚು (Finger Print) ಇರುವುದು ಸಹ ದೃಢವಾಗಿದೆ. ಮನುಷ್ಯನ ಮಾಂಸದಿಂದ ಮಾಡಿದ ಅಡುಗೆಯೂ ಸಿಕ್ಕಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
“ಮೊಹಮ್ಮದ್ ಶಫಿ ನಿವಾಸದಲ್ಲಿ ನಾಲ್ಕು ಚಾಕು ಸೇರಿ ಹಲವು ಶಸ್ತ್ರಾಸ್ತ್ರಗಳೂ ಪತ್ತೆಯಾಗಿವೆ. ಗೋಡೆಯ ತುಂಬ ರಕ್ತದ ಕಲೆಗಳು ಇವೆ. ಇಬ್ಬರು ಮಹಿಳೆಯರ ಶವಗಳನ್ನು ಮನೆಯಲ್ಲಿ ಎಳೆದಾಡಿರುವುದರಿಂದ ಮನೆಯಲ್ಲೆಲ್ಲ ರಕ್ತದ ಕೆಲಗಳು ಇವೆ” ಎಂದು ಹೇಳಿದ್ದಾರೆ. ಇತ್ತೀಚೆಗೆ ಹಣದ ಆಸೆ ತೋರಿಸಿ ಪದ್ಮಂ ಹಾಗೂ ರೋಸ್‌ಲಿನ್ ಎಂಬ ಮಹಿಳೆಯರನ್ನು ಭೀಕರವಾಗಿ ಹತ್ಯೆಗೈದು, ಅವರ ದೇಹಗಳನ್ನು ತುಂಡು ತುಂಡಾಗಿ ಮಾಡಲಾಗಿದೆ. ಮಹಿಳೆಯರ ಹತ್ಯೆ ಪ್ರಕರಣದಲ್ಲಿ ಮೊಹಮ್ಮದ್ ಶಫಿ, ಭಗವಾಲ್ ಸಿಂಗ್ ಹಾಗೂ ಸಿಂಗ್ ಪತ್ನಿ ಲೈಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | Human Sacrifice | 17ನೇ ವರ್ಷಕ್ಕೆ ಮನೆ ಬಿಟ್ಟ ಶಫಿ ವಿಕೃತ ಕಾಮುಕ, ಹಂತಕ ಹೇಗಾದ? ಇದು ಮರ್ಡರರ್ ಮಿಸ್ಟರಿ