Site icon Vistara News

Human Sacrifice | 17ನೇ ವರ್ಷಕ್ಕೆ ಮನೆ ಬಿಟ್ಟ ಶಫಿ ವಿಕೃತ ಕಾಮುಕ, ಹಂತಕ ಹೇಗಾದ? ಇದು ಮರ್ಡರರ್‌ ಮಿಸ್ಟರಿ

Mohammad Shafi

ತಿರುವನಂತಪುರಂ: ಕೇರಳದಲ್ಲಿ ಇಬ್ಬರು ಮಹಿಳೆಯರನ್ನು ಕ್ರೂರವಾಗಿ ಕೊಂದು (Human Sacrifice), ಸುಮಾರು ೬೧ ಬ್ಯಾಗ್‌ಗಳಲ್ಲಿ ತುಂಡರಿಸಿದ ದೇಹದ ಭಾಗಗಳನ್ನು ತುಂಬಿ ಎಸೆದ ಮೊಹಮ್ಮದ್‌ ಶಫಿಯ (೫೨) ಕ್ರೂರತನ ದೇಶಾದ್ಯಂತ ಸುದ್ದಿಯಾಗಿದೆ. ಮಾನಸಿಕವಾಗಿ ವಿಕೃತನಾಗಿರುವ, ವಿಕೃತ ಕಾಮಿಯೂ ಆಗಿರುವ ಈತನ ಹಿನ್ನೆಲೆಯೂ ಅಷ್ಟೇ ಭಯಾನಕವಾಗಿದೆ. ಕಳೆದ ಒಂದು ದಶಕದಲ್ಲಿ ಈತನ ವಿರುದ್ಧ ಅತ್ಯಾಚಾರ, ಕೊಲೆ ಯತ್ನ, ಕಳ್ಳತನ ಸೇರಿ ೧೦ ಪ್ರಕರಣಗಳು ದಾಖಲಾಗಿವೆ. ಆರ್ಥಿಕ ಸ್ಥಿತಿ ಸುಧಾರಣೆಯ ಆಸೆ ತೋರಿಸಿ ಇಬ್ಬರು ಮಹಿಳೆಯರನ್ನು ಹತ್ಯೆಗೈದ ಪ್ರಕರಣದಲ್ಲಿ ಸದಸ್ಯ ಈತ ನ್ಯಾಯಾಂಗ ವಶದಲ್ಲಿದ್ದಾನೆ.

ಹುಟ್ಟಿದಾಗಿನಿಂದಲೂ ಮೊಹಮ್ಮದ್‌ ಶಫಿ ವಿಚಿತ್ರವಾಗಿ ವರ್ತಿಸುತ್ತಿದ್ದ. ಆತ ಯಾವುದರಿಂದಲೂ ಸಮಾಧಾನಗೊಳ್ಳುತ್ತಿರಲಿಲ್ಲ. ಇದರಿಂದ ಓದಿನಲ್ಲಿ ಹಿಂದುಳಿತ ಶಫಿ, ಆರನೇ ತರಗತಿಯಲ್ಲಿ ಅನುತ್ತೀರ್ಣನಾದ. ಕೊನೆಗೆ ಮಾನಸಿಕ ತಳಮಳ ತಾಳದೆ ತನ್ನ ೧೭ನೇ ವಯಸ್ಸಿನಲ್ಲಿ ಮನೆಯನ್ನೇ ತೊರೆದ. ಹೋಟೆಲ್‌ನಲ್ಲಿ ವೇಟರ್‌ ಆಗಿ, ಟ್ರಕ್‌ ಡ್ರೈವರ್‌ ಆಗಿ, ಮೆಕ್ಯಾನಿಕ್‌ ಆಗಿ ಕಾರ್ಯನಿರ್ವಹಿಸಿದ ಆತ ಕೊನೆಗೆ ಎರ್ನಾಕುಲಂನಲ್ಲಿ ಸೆಟಲ್‌ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಎರ್ನಾಕುಲಂನಲ್ಲಿ ಸೆಟಲ್‌ ಆದರೂ ಆತ ದುಡಿದು ತಿನ್ನದೆ ಅಪರಾಧಗಳಲ್ಲಿ ತೊಡಗಿದ ಎಂದು ಮಾಹಿತಿ ನೀಡಿದ್ದಾರೆ.

೧೨ ಮಹಿಳೆಯರ ನಾಪತ್ತೆ, ತನಿಖೆಗೆ ಆದೇಶ

ಹಣದ ಆಸೆ ತೋರಿಸಿ ರೋಸ್‌ಲಿನ್‌ ಹಾಗೂ ಪದ್ಮಂ ಎಂಬ ಮಹಿಳೆಯರನ್ನು ಹತ್ಯೆಗೈದ ಬೆನ್ನಲ್ಲೇ ಕೆಲ ವರ್ಷಗಳಿಂದ ಕೇರಳದಲ್ಲಿ ನಾಪತ್ತೆಯಾದ ೧೨ ಮಹಿಳೆಯರ ನಾಪತ್ತೆ ಪ್ರಕರಣವನ್ನು ಸರ್ಕಾರ ತನಿಖೆಗೆ ಆದೇಶಿಸಿದೆ. ರೋಸ್‌ಲಿನ್‌ ಹಾಗೂ ಪದ್ಮಂ ಅವರನ್ನು ಅಪಹರಿಸಿಯೇ ಹತ್ಯೆಗೈದ ಕಾರಣ, ಮೊಹಮ್ಮದ್‌ ಶಫಿ ಅಥವಾ ಬೇರೆಯವರೂ ಇದೇ ರೀತಿಯ ನರಬಲಿ ಕೊಟ್ಟಿದ್ದಾರೆಯೇ ಎಂಬ ಕುರಿತು ತನಿಖೆ ನಡೆಯುತ್ತಿದೆ.

ಫೇಸ್‌ಬುಕ್‌ ಪೋಸ್ಟ್‌ಗಳ ಪರಿಶೀಲನೆ

ಮೊಹಮ್ಮದ್‌ ಶಫಿಯು ಫೇಸ್‌ಬುಕ್‌ನಲ್ಲಿ ಮೆಸೇಜ್‌ ಮಾಡುವ ಮೂಲಕವೇ ಇಬ್ಬರು ಮಹಿಳೆಯರ ಸಂಪರ್ಕ ಸಾಧಿಸಿದ್ದ ಎಂದು ತಿಳಿದುಬಂದಿದೆ. ಅಲ್ಲದೆ, ಪ್ರಕರಣದ ಮೂವರು ಆರೋಪಿಗಳಲ್ಲಿ ಒಬ್ಬನಾದ ಭಗವಾಲ್‌ ಸಿಂಗ್‌ ಎಂಬುವನ ಫೇಸ್‌ಬುಕ್‌ ಪೋಸ್ಟ್‌ಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಫೇಸ್‌ಬುಕ್‌ ಪ್ರೊಫೈಲ್‌ನಲ್ಲಿ ಸೋಷಿಯಲ್‌ ವರ್ಕರ್, ಸೆಲ್ಫ್‌ ಎಂಪ್ಲಾಯ್ಡ್‌ ಎಂದು ಬರೆದುಕೊಂಡಿರುವ ಭಗವಾಲ್‌ ಸಿಂಗ್‌, ಹತ್ಯೆಯ ಕೆಲ ದಿನಗಳ ಹಿಂದಷ್ಟೇ ಕವನವೊಂದನ್ನು ಪೋಸ್ಟ್‌ ಮಾಡಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Murder | ವಿವಾಹಿತ ಯುವತಿಗೆ ಮೆಸೇಜ್‌ ಮಾಡಿದ ಆರೋಪ, ಯುವಕನನ್ನು ಕಾರಿನಲ್ಲಿ ಕಿಡ್ನ್ಯಾಪ್‌ ಮಾಡಿ ಕೊಲೆ

Exit mobile version