Site icon Vistara News

Hunters Arrest : ಶಿವಮೊಗ್ಗದಲ್ಲಿ ಕಾಡುಕೋಣಗಳು ಬಲಿ; ಚಿಕ್ಕಬಳ್ಳಾಪುರ, ಬಾಗಲಕೋಟೆಯಲ್ಲಿ ಬೇಟೆಗಾರರು ಸೆರೆ

Hunters Arrest

ಶಿವಮೊಗ್ಗ: ಶಿವಮೊಗ್ಗದಲ್ಲಿ ಕಾಡು ಕೋಣಗಳ ಮಾರಣಹೋಮ ಹೋಗಿದೆ. ದುಷ್ಕರ್ಮಿಗಳು (Hunters Arrest) ನಾಲ್ಕೈದು ಕಾಡು ಕೋಣಗಳನ್ನು ಬೇಟೆಯಾಡಿದ್ದಾರೆ. ಶಿವಮೊಗ್ಗದ ಹೊಸನಗರ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಅಕ್ರಮ ಬಂದೂಕು ಬಳಸಿ ಕಾಡುಕೋಣಗಳ ಹತ್ಯೆ (Bison) ಮಾಡಲಾಗಿದೆ. ಕಾಡುಕೋಣಗಳ ಕಳೆಬರ ಪತ್ತೆಯಾಗಿದೆ.

ಸ್ಥಳಕ್ಕೆ ಸಾಗರ ಡಿಎಫ್‌ಓ ಸಂತೋಷ್ ಕೆಂಚಣ್ಣನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡುಕೋಣದ ಕಳೇಬರಗಳನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಿದ್ದಾರೆ. ಆರೋಪಿಗಳು ಕಾಡುಕೋಣಗಳ ಮಾಂಸಕಾಗಿ ಬೇಟೆಯಾಡಿರುವ ಸಾಧ್ಯತೆ ಇದೆ. ಸದ್ಯ ಅರಣ್ಯಾಧಿಕಾರಿಗಳು ಕಾಡುಕೋಣಗಳ ಹತ್ಯೆ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕಾಡು ಹಂದಿಗಳ ಬೇಟೆ

ಚಿಕ್ಕಬಳ್ಳಾಪುರದಲ್ಲಿ ಕಾಡು ಹಂದಿಗಳ ಬೇಟೆಯಾಡಿ ಸಾಗಾಟ ಮಾಡುತ್ತಿದ್ದ ಜಾಲವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಬೀಚಗಾನಹಳ್ಳಿ ಮಿಟ್ಟೇಮರಿ ಅರಣ್ಯದಲ್ಲಿ ಕಾಡು ಹಂದಿಗಳ ಬೇಟೆಯಾಡುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ ಮಾಡಿದ್ದಾರೆ.

ದಾಳಿ ವೇಳೆ ಸಿಕ್ಕಿದ ಆರು ಕಾಡು ಹಂದಿಗಳನ್ನು ರಕ್ಷಣೆ ಮಾಡಲಾಗಿದೆ. ದಾಳಿಯಲ್ಲಿ ಇಬ್ಬರು ಸಿಕ್ಕಿ ಬಿದ್ದಿದ್ದು, ನಾಲ್ವರು ಪರಾರಿ ಆಗಿದ್ದಾರೆ. ಒಂದು ಬುಲೇರೋ ವಾಹನ ಸೀಸ್ ಮಾಡಿದ್ದಾರೆ. ಬಾಗೇಪಲ್ಲಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Road Accident : ನಿಂತಿದ್ದ ಟ್ಯಾಂಕರ್‌ ಟ್ಯಾಲಿಗೆ ಬೈಕ್‌ ಡಿಕ್ಕಿ; ಸವಾರ ಸಾವು, ಮತ್ತೋರ್ವ ಗಂಭೀರ

ಕೃಷ್ಣ ಮೃಗ ಬೇಟೆಯಾಡುತ್ತಿದ್ದ 7 ಜನರ ಬಂಧನ

ಬಾಗಲಕೋಟೆಯ ಜಮಖಂಡಿ ಹೊರ ವಲಯದ ಅರಣ್ಯ ಪ್ರದೇಶದಲ್ಲಿ ಕೃಷ್ಣ ಮೃಗ ಬೇಟೆಯಾಡುತ್ತಿದ್ದ 7 ಜನರನ್ನು ಬಂಧಿಸಲಾಗಿದೆ. ರಾಯಭಾಗ ತಾಲೂಕಿನ ಕಡಕಬಾವಿ ಗ್ರಾಮದ ಸಿದ್ದಪ್ಪ ಪಿಡಾಯಿ (23), ಬ್ಯಾಕೋಡ ಗ್ರಾಮದ ಸುರೇಶ್ ಪಕಾಂಡೆ (21), ಚೇತನ್ ಬಿದರಿ (24) , ಕಂಕನವಾಡಿ ಗ್ರಾಮದ ನಿಂಗಪ್ಪ ಪಡತಾರೆ (24) ಹಾಗೂ ದೇವರಪಟ್ಟಿ ಗ್ರಾಮದ ಪ್ರಜ್ವಲ್ ಮೆಳವಂಕಿ (18), ರಬಕವಿ ಬನಹಟ್ಟಿ ತಾಲ್ಲೂಕಿನ ಹಳಿಂಗಳಿ ಗ್ರಾಮದ ಶಬ್ಬಿರ್ ಗುಡ್ಡದಮನಿ (25), ರಮಜಾನ್‌ಸಾಬ್ ಅಲಸ್ (25) ಬಂಧಿತ ಆರೋಪಿಗಳು.

ಬಂಧಿತರಿಂದ 13.5 ಕೆಜಿ ಹಂದಿ ಮಾಂಸ, 4 ಮೊಬೈಲ್, ಕಾರು, ನಾಲ್ಕು ಬೇಟೆ ನಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಡಿಸಿಎಫ್‌ಸಿ ಶ್ರೀಧರ್ ನೇತೃತ್ವದಲ್ಲಿ ಎಸಿಎಫ್ ರಾಜೇಶ್ವರಿ, ಆರ್‌ಎಫ್‌ಒ ಪವನ್ ಕುರನಿಂಗ ತಂಡ ಕಾರ್ಯಾಚರಣೆ ನಡೆಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version