ಲಖನೌ: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ, ಉತ್ತರ ಪ್ರದೇಶದಲ್ಲಿ (Uttar Pradesh) ಗಂಡ-ಹೆಂಡತಿ ಜಗಳವು ಮಾರುಕಟ್ಟೆವರೆಗೆ ತಲುಪಿದೆ. ಇನ್ನು ಹೆಂಡತಿ ಮೇಲೆ ಕುಪಿತಗೊಂಡಿದ್ದ ಗಂಡನು ತುಂಬಿದ ಮಾರುಕಟ್ಟೆಯಲ್ಲಿ ಪತ್ನಿಗೆ ಸುಮಾರು 19 ಬಾರಿ ಕತ್ತರಿಯಿಂದ ಇರಿಯುವ (Man Stabs Wife) ಮೂಲಕ ಕ್ರೌರ್ಯ ಮೆರೆದಿದ್ದಾನೆ. ಈ ಭೀಕರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಾರಿ ವೈರಲ್ ಆಗಿದೆ. ಇನ್ನು ತುಂಬಿದ ಮಾರುಕಟ್ಟೆಯಲ್ಲಿ ಹೆಂಡತಿಗೆ ಇರಿದ ಪತಿ ಈಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.
ಸುಮನ್ ನಿಶಾದ್ ಎಂಬ ಮಹಿಳೆಯು ಲಖನೌ ನಗರದ ಕುತುಬ್‌ಪುರ ಪ್ರದೇಶ ವ್ಯಾಪ್ತಿಯ ಲಂಬೆಕೇಶ್ವರ ಪಾರ್ಕ್‌ನಲ್ಲಿ ತರಕಾರಿ ಖರೀದಿಸಲು ತೆರಳಿದ್ದಾರೆ. ಅವರು ತರಕಾರಿ ಖರೀದಿಸುತ್ತಿರುವಾಗಲೇ ಪತಿ ಬ್ರಿಜ್‌ಮೋಹನ್ ನಿಶಾದ್ ಎಂಬಾತನು ಬಂದಿದ್ದಾನೆ. ಪತ್ನಿಯನ್ನು ಕಾಣುತ್ತಲೇ ಬ್ರಿಜ್‌ಮೋಹನ್ ನಿಶಾದ್ ಕುಪಿತಗೊಂಡಿದ್ದಾನೆ. ಕೂಡಲೇ ಪತ್ನಿಗೆ ಚಾಕು ಇರಿದಿದ್ದಾನೆ. ಎರಡು ಚಾಕುಗಳನ್ನು ಹಿಡಿದುಕೊಂಡಿದ್ದ ದುರುಳನು ಸುಮಾರು 19 ಬಾರಿ ಚಾಕು ಇರಿದಿದ್ದಾನೆ. ಅಲ್ಲಿದ್ದ ಜನ ಇದನ್ನು ಕಂಡು ದಂಗಾಗಿದ್ದು, ಯಾರೂ ಮಹಿಳೆಯನ್ನು ರಕ್ಷಿಸಿಲ್ಲ ಎಂದು ತಿಳಿದುಬಂದಿದೆ.
11 सेकेंड में 19 बार कैंची मारी –
— Sachin Gupta (@SachinGuptaUP) January 12, 2024
ये सीन उत्तर प्रदेश की राजधानी लखनऊ का है। पत्नी सुमन पर हमले के जुर्म में पति बृजमोहन निषाद गिरफ्तार हुआ। पारिवारिक विवाद में वारदात की। महिला गंभीर घायल है। pic.twitter.com/R56ILu39jh
ಮಹಿಳೆ ಪರಿಸ್ಥಿತಿ ಈಗ ಹೇಗಿದೆ?
ಎರಡು ಚಾಕುಗಳಿಂದ ಸತತವಾಗಿ ಇರಿತಕ್ಕೊಳಗಾದ ಮಹಿಳೆಯು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಕೆಜಿಎಂಯು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಪರಿಸ್ಥಿತಿ ಬಗ್ಗೆ ಈಗಲೇ ಏನೂ ಹೇಳಲು ಆಗುವುದಿಲ್ಲ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ಪತ್ನಿಯ ಮೇಲೆಯೇ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಬ್ರಿಜ್‌ಮೋಹನ್ ನಿಶಾದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಕೊಲೆ ಯತ್ನ ಸೇರಿ ಐಪಿಸಿಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Murder Case: ಪ್ರೇಯಸಿಯ ಪತಿಯನ್ನು ಇರಿದು ಕೊಂದ ಪ್ರೇಮಿ; ಈಗ ಜೈಲಿನಲ್ಲಿ ಬಂಧಿ
ಶೀಲ ಶಂಕಿಸಿ ಹತ್ಯೆ?
ಅನುಮಾನದ ಪೀಡೆಯಂತಾಗಿದ್ದ ಬ್ರಿಜ್‌ಮೋಹನ್ ನಿಶಾದ್, ಹೆಂಡತಿಯ ವಿಚಾರದಲ್ಲಿ ವಿಪರೀತ ಅನುಮಾನ ಪಡುತ್ತಿದ್ದ. ಪತ್ನಿಯ ಸಂಬಂಧಗಳ ಬಗ್ಗೆ ಶಂಕಿಸಿ ಅವರ ಜತೆ ಜಗಳವಾಡುತ್ತಿದ್ದ. ಪದೇಪದೆ ಜಗಳ ಆಡುತ್ತಿರುವುದರಿಂದ ಪತ್ನಿಗೂ ಬೇಸರವಾಗಿತ್ತು. ಮತ್ತೊಂದೆಡೆ, ಪತ್ನಿಯ ಶೀಲವನ್ನೇ ಶಂಕಿಸಿದ್ದ ಆತ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಈಗ ಕೊನೆಗೆ ಇದೇ ಕಾರಣಕ್ಕೆ ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ