Site icon Vistara News

ಅಮೆರಿಕದ ಶಾಲೆಗಳಲ್ಲಿ ನಡೆದ ಭೀಕರ ಗುಂಡಿನ ದಾಳಿ ಇದೇ ಮೊದಲಲ್ಲ…

us shooting

ವಾಷಿಂಗ್ಟನ್:‌ ಅಮೆರಿಕದ ಟೆಕ್ಸಾಸ್‌ನಲ್ಲಿ ಮಂಗಳವಾರ 19 ಶಾಲಾ ಮಕ್ಕಳನ್ನು ಬಂದೂಕುಧಾರಿ ಯುವಕನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಆದರೆ ಅಮೆರಿಕದಲ್ಲಿ ಅಮಾಯಕ, ಮುಗ್ಧ ಶಾಲಾ ಮಕ್ಕಳು ಗುಂಡಿನ ದಾಳಿಗೆ ಬಲಿಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ಕೆಲ ವರ್ಷಗಳಲ್ಲಿ ಡಜನ್‌ ಗಟ್ಟಲೆ ಇಂಥ ಭೀಕರ ದುರ್ಘಟನೆಗಳು ನಡೆದಿವೆ! ಆದರೆ 1999ರಲ್ಲಿ ಕೊಲೊರಾಡೊದ ಕೊಲಂಬಿಯನ್‌ ಹೈಸ್ಕೂಲ್‌ ನಲ್ಲಿ ನರಮೇಧ ನಡೆಯುವ ತನಕ ಒಂದಂಕಿಯಲ್ಲಿ ಸಾವಿಗೀಡಾಗುತ್ತಿದರು. ಬಳಿಕ ಎರಡಂಕಿಯಲ್ಲಿ ಹತ್ಯೆಗಳು ನಡೆದಿವೆ.

ರೋಬ್‌ ಎಲಿಮೆಂಟರಿ ಸ್ಕೂಲ್‌ ಮೇ 2022

ಅಮೆರಿಕದ ಟೆಕ್ಸಾಸ್‌ ರಾಜ್ಯದ ಉವಲ್ಡೆಯಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ 18 ವರ್ಷ ವಯಸ್ಸಿನ ಬಂದೂಕುಧಾರಿಯಿಂದ ಗುಂಡಿನ ದಾಳಿ. 19 ಮಕ್ಕಳ ಹತ್ಯೆ.

ಸಾಂತಾ ಫೆ ಹೈಸ್ಕೂಲ್‌, ಮೇ 2018

17 ವರ್ಷದ ಹಂತಕನಿಂದ ಹ್ಯೂಸ್ಟನ್‌ ವ್ಯಾಪ್ತಿಯ ಪ್ರೌಢಶಾಲೆಯಲ್ಲಿ 10 ಮಕ್ಕಳ ಹತ್ಯೆ.

ಮರ್ಜೊರಿ ಸ್ಟೋನ್‌ ಮ್ಯಾನ್‌ ಡೋಗ್ಲಸ್‌ ಹೈಸ್ಕೂಲ್‌, ಫೆಬ್ರವರಿ 2018

ಫ್ಲೊರಿಡಾದ ಪಾರ್ಕ್‌ ಲ್ಯಾಂಡ್‌ನಲ್ಲಿನ ಪ್ರೌಢಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 14 ವಿದ್ಯಾರ್ಥಿಗಳ ಮಾರಣ ಹೋಮ. 20 ವರ್ಷ ವಯಸ್ಸಿನ ಹಂತಕನಿಂದ ಕೃತ್ಯ.

ರೋಸ್‌ ಬರ್ಗ್‌ನ ಕಮ್ಯುನಿಟಿ ಕಾಲೇಜ್‌, ಅಕ್ಟೋಬರ್‌ 2015

ರೋಸ್‌ ಬರ್ಗ್‌ನಲ್ಲಿನ ಶಾಲೆಗೆ ಎರಗಿದ ದುಷ್ಕರ್ಮಿಯಿಂದ 9 ವಿದ್ಯಾರ್ಥಿಗಳ ಹತ್ಯೆ. ಹಲವು ಮಂದಿಗೆ ಗಾಯ.

ಸ್ಯಾಂಡಿ ಹುಕ್‌ ಎಲಿಮೆಂಟರಿ ಸ್ಕೂಲ್‌, ಡಿಸೆಂಬರ್‌ 2012

ನ್ಯೂಟೌನ್‌ನಲ್ಲಿರುವ ಸ್ಯಾಂಡಿ ಹುಕ್‌ ಎಲಿಮೆಂಟರಿ ಶಾಲೆಯಲ್ಲಿ 19 ವರ್ಷ ವಯಸ್ಸಿನ ಹಂತಕನಿಂದ ಗುಡಿನ ದಾಳಿ. 20 ಸಾವು. ದಾಳಿಕೋರ ತನಗೂ ಗುಂಡಿಕ್ಕಿ ಸತ್ತ.

ವರ್ಜೀನಿಯಾ ಟೆಕ್‌, ಏಪ್ರಿಲ್‌ 2007

ವರ್ಜೀನಿಯಾದ ಶಾಲೆಯ ಕ್ಯಾಂಪಸ್‌ನಲ್ಲಿ 23 ವರ್ಷ ವಯಸ್ಸಿನ ವಿದ್ಯಾರ್ಥಿಯಿಂದ ಭೀಕರ ಗುಂಡಿನ ದಾಳಿ. 32 ಮಂದಿ ಹತರಾದರು. ಎರಡು ಡಜನ್ನಿಗೂ ಹೆಚ್ಚು ಮಂದಿ ಗಾಯಾಳುಗಳಾದರು.

ರೆಡ್‌ ಲೇಕ್‌ ಹೈಸ್ಕೂಲ್‌, ಮಾರ್ಚ್‌ 2005

16 ವರ್ಷದ ವಿದ್ಯಾರ್ಥಿಯೊಬ್ಬ ಮನೆಯಲ್ಲಿ ಅಜ್ಜನನ್ನು ಹತ್ಯೆಗೈದು ಸಮೀಪದ ಹೈಸ್ಕೂಲಿಗೂ ಬಂದು ಐವರು ವಿದ್ಯಾರ್ಥಿಗಳಿಗೆ, ಒಬ್ಬ ಶಿಕ್ಷಕರು ಮತ್ತು ಭದ್ರತಾ ಸಿಬ್ಬಂದಿಗೆ ಗುಂಡಿಕ್ಕಿ ಸಾಯಿಸಿದ. ಕೊನೆಗೆ ಆತ್ಮಹತ್ಯೆ ಮಾಡಿಕೊಂಡ.

ಕೊಲಂಬಿಯನ್‌ ಹೈಸ್ಕೂಲ್‌, 1999

ಇಬ್ಬರು ವಿದ್ಯಾರ್ಥಿಗಳು ಸೇರಿಕೊಂಡು ತಮ್ಮ 12 ಸಹಪಾಠಿಗಳನ್ನು ಮತ್ತು ಒಬ್ಬ ಶಿಕ್ಷಕರನ್ನು ಗುಂಡಿಕ್ಕಿ ಹತ್ಯೆ ಮಾಡಿದರು. ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡರು.

ಇದನ್ನೂ ಓದಿ: ಅಮೆರಿಕದ ಟೆಕ್ಸಾಸ್‌ ಶಾಲೆಯಲ್ಲಿ 19 ಮಕ್ಕಳನ್ನು ಗುಂಡಿಕ್ಕಿ ಕೊಂದ ಯುವಕ

Exit mobile version