Site icon Vistara News

Sukesh Case | ಡ್ರೀಮ್ ಮ್ಯಾನ್ ಸುಕೇಶ್‌ನನ್ನು ಮದ್ವೆಯಾಗಲು ಹೊರಟಿದ್ದ ರಕ್ಕಮ್ಮ ಜಾಕ್ವೆಲಿನ್!

Sukesh Case

ನವ ದೆಹಲಿ: 200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸುಕೇಶ್ (Sukesh) ಚಂದ್ರಶೇಖರ್‌ನನ್ನು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಮದುವೆಯಾಗಲು ಮುಂದಾಗಿದ್ದರು ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ. ವಿಪರ್ಯಾಸ ಎಂದರೆ, ತಾನು ಸುಕೇಶ್‌ನೊಂದಿಗೆ ಡೇಟಿಂಗ್‌ನಲ್ಲಿ ಇರಲಿಲ್ಲ ಎಂದು ಕಳೆದ ವರ್ಷವಷ್ಟೇ ಜಾಕ್ವೆಲಿನ್ ಫರ್ನಾಂಡಿಸ್ ಹೇಳಿಕೊಂಡಿದ್ದರು. ಆದರೆ, ಈಗ ಗೊತ್ತಾಗಿರುವ ಮಾಹಿತಿ ಮತ್ತು ಫೋಟೋಗಳು ಬೇರೆಯದ್ದೇ ಕತೆ ಹೇಳುತ್ತವೆ. ಒಂದು ಹಂತದಲ್ಲಿ ಸುಕೇಶ್‌ನನ್ನು ಮದ್ವೆಯಾಗಲು ಸಿದ್ಧರಾಗಿದ್ದರು ಎಂಬುದು ಖಚಿತವಾಗಿದೆ.

ವಂಚಕ ಸುಕೇಶ್ ಚಂದ್ರಶೇಖರ್, ನಟಿ ಜಾಕ್ವೆಲಿನ್ ಜತೆ ಅದ್ಧೂರಿ, ಐಷಾರಾಮಿ ಸಮಯವನ್ನು ಕಳೆದಿದ್ದ. ಲಿಮಿಟಿಡ್ ಎಡಿಷನ್ ಪರ್ಫ್ಯೂಮ್ಸ್, ಡಿಸೈನರ್ ಬ್ಯಾಗ್ಸ್, ಬಟ್ಟೆಗಳು, ಪ್ರೈವೆಟ್ ಜೆಟ್ಸ್ ಇತ್ಯಾದಿ ಅದ್ದೂರಿ ಜೀವನಕ್ಕೆ ಏನೂ ಭರವಿರಲಿಲ್ಲ. ಹಾಗಾಗಿ, ಜಾಕ್ವೆಲಿನ್ ಸಂಪೂರ್ಣವಾಗಿ ಸುಕೇಶ್ ಹಿಡಿತದಲ್ಲಿದ್ದಳು. ಅಲ್ಲದೇ, ತನ್ನ ಕನಸಿನ ಗಂಡು ಸಿಕ್ಕಿದ್ದಾನೆ, ನಾನು ಮದುವೆಯಾಗಲಿದ್ದೇನೆ ಎಂದು ಜಾಕ್ವೆಲಿನ್ ತನ್ನ ಸ್ನೇಹಿತೆಯರ ಮುಂದೆ ಹೇಳಿಕೊಂಡಿದ್ದಳು ಎಂಬುದು ಇದೀಗ ಗೊತ್ತಾಗಿದೆ.

ದಿಲ್ಲಿ ಪೊಲೀಸ್ ಇಲಾಖೆ ಆರ್ಥಿಕ ಅಪರಾಧ ವಿಂಗ್ ನಡೆಸಿದ ವಿಚಾರಣೆಯಲ್ಲಿ ಹಲವು ಸಂಗತಿಗಳು ಬೆಳಕಿಗೆ ಬಂದಿವೆ. ನಟಿ ಜಾಕ್ವೆಲಿನ್ ಅವರನ್ನು ಸಮ್ಮೋಹನಗೊಳಿಸಲು ವಂಚಕ ಸುಕೇಶ್, ಸಿಕ್ಕಾಪಟ್ಟೆ ಹಣವನ್ನು ಖರ್ಚು ಮಾಡಿದ್ದ ಎನ್ನಲಾಗಿದೆ. ಆದರೆ, ಇವರಿಬ್ಬರೂ ಮದುವೆಯಾಗಲಿಲ್ಲ. ಸುಲಿಗೆ ಪ್ರಕರಣವು ಬೆಳಕಿಗೆ ಬರದೇ ಹೋಗಿದ್ದರೆ ಬಹುಶಃ ಸುಕೇಶ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಮದುವೆಯಾಗುತ್ತಿದ್ದರೇನೋ?

ಏತನ್ಮಧ್ಯೆ, 200 ಕೋಟಿ ರೂ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್ ಡ್ರೆಸ್ ಡಿಸೈನರ್ ಅವರಿಗೆ ಪೊಲೀಸ್ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ಈ ವಸ್ತ್ರ ವಿನ್ಯಾಸಕ ಮುಂಬೈನಲ್ಲಿ ವಾಸವಾಗಿದ್ದಾರೆ. ಜಾಕ್ವೆಲಿನ್ ಡ್ರೆಸ್ ವಿನ್ಯಾಸ ಮಾಡಲು ಈ ಡ್ರೆಸ್ ಡಿಸೈನರ್‌ಗೆ ಸುಕೇಶ್ ಅವರು ಭಾರಿ ಮೊತ್ತವನ್ನು ಪೇ ಮಾಡಿದ್ದರು. ಈ ಕುರಿತು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.

ಇದನ್ನೂ ಓದಿ | Sukesh Case | ‘ರಕ್ಕಮ್ಮ’ ಜಾಕ್ವೆಲಿನ್, ನೋರಾ ಬಳಿಕ ಇನ್ನೂ 4 ನಟಿಯರ ವಿಚಾರಣೆ ಸಾಧ್ಯತೆ

Exit mobile version