ಬಿಹಾರ ಜೆಡಿ(ಯು) ನಾಯಕ ಕೈಲಾಶ್ ಮಹತೋ (70) ಅವರು ಗುರುವಾರ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ (JDU Leader Shot Dead). ಇಲ್ಲಿನ ಕಟಿಹಾರ್ನಲ್ಲಿರುವ ಪುರ್ಬಿ ಬಾರಿ ನಗರ್ನ ವಾರ್ಡ್ ನಂಬರ್ 12ರಲ್ಲಿರುವ ಅವರ ಮನೆಯ ಸಮೀಪವೇ ಘಟನೆ ನಡೆದಿದೆ. ಕೈಲಾಶ್ ಮಹತೋ ಅವರು ರಾತ್ರಿ ಮನೆಯ ಬಳಿ ಇದ್ದರು. ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಅವರ ಕಡೆಗೆ ನಾಲ್ಕೈದು ಗುಂಡು ಹಾರಿಸಿದ್ದಾರೆ. ಕೈಲಾಶ್ ಮಹತೋ ಹೊಟ್ಟೆ ಮತ್ತು ಎದೆಗೆ ಗುಂಡು ಬಿದ್ದು ಅವರು ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ತನಿಖೆ ಶುರು ಮಾಡಿದ್ದೇವೆ. ಕೈಲಾಶ್ ಮಹತೋ ಅವರಿಗೆ ಜಮೀನು ವಿಚಾರದಲ್ಲಿ ಕೆಲವರೊಂದಿಗೆ ವೈರತ್ವ/ಸಂಘರ್ಷ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ. ಅಷ್ಟೇ ಅಲ್ಲ, ಸ್ವಲ್ಪ ದಿನಗಳ ಹಿಂದೆ ಅವರು ತಮಗೆ ಬೆದರಿಕೆಯಿದೆ, ಹಾಗಾಗಿ ಭದ್ರತೆ ಬೇಕು ಎಂದು ಸ್ಥಳೀಯ ಆಡಳಿತಕ್ಕೆ ಮನವಿಯನ್ನೂ ಸಲ್ಲಿಸಿದ್ದರು. ಎಲ್ಲ ಆಯಾಮದಲ್ಲೂ ತನಿಖೆ ಕೈಗೊಳ್ಳುತ್ತೇವೆ. ಮೃತದೇಹವನ್ನು ಪೋಸ್ಟ್ಮಾರ್ಟಮ್ಗೆ ಕಳಿಸಿದ್ದು, ವರದಿ ಬಂದ ನಂತರ ಇನ್ನಷ್ಟು ಮಾಹಿತಿಯನ್ನು ನಾವು ನೀಡುತ್ತೇವೆ ಎಂದು ಕಟಿಹಾರ ಎಸ್ಡಿಪಿಒ ಓಂ ಪ್ರಕಾಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಭಟಿಂಡಾ ಸೇನಾ ನೆಲೆಯಲ್ಲಿ ಗುಂಡಿನ ದಾಳಿ: ಒಬ್ಬ ಯೋಧನನ್ನು ಬಂಧಿಸಿದ ಪಂಜಾಬ್ ಪೊಲೀಸರು, ಆತ ಗುಂಡು ಹಾರಿಸಿದ್ದೇಕೆ?