ಬೆಂಗಳೂರು: ಸೀರಿಯಲ್ ಪ್ರೊಡಕ್ಷನ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಹಣದಾಸೆಗೆ ಬಿದ್ದಿದ್ದರು. ಇದಕ್ಕಾಗಿ ಹಾಲಿ ಹಾಗೂ ಮಾಜಿ ಸಿಬ್ಬಂದಿ ಸೇರಿ ಕಿಡ್ನ್ಯಾಪ್ (Kidnap case) ನಾಟಕವನ್ನಾಡಿದ್ದರು. ಆದರೆ ಅದೃಷ್ಟ ಕೈಕೊಟ್ಟಿತ್ತು, ಖಾಕಿಯ ಹದ್ದಿನ ಕಣ್ಣಿಗೆ ಸಿಕ್ಕಿ, ಈಗ ಕಂಬಿ ಎಣಿಸುವಂತಾಗಿದೆ.
ಸೀರಿಯಲ್ ಪ್ರೊಡಕ್ಷನ್ ಹೌಸ್ ಮಾಲೀಕರಾದ ಲಕ್ಷ್ಮಿ ಅವರು ಚಾಮುಂಡೇಶ್ವರಿ ಎಂಟರ್ ಪ್ರೈಸರ್ಸ್ ಮೂಲಕ ರಝಿಯಾ ರಾಮ್ ಎಂಬ ಧಾರಾವಾಹಿಗೆ ಪ್ರೊಡಕ್ಷನ್ ಮಾಡುತ್ತಿದ್ದರು. ಸೀರಿಯಲ್ ಪ್ರೊಡಕ್ಷನ್ ಹೌಸ್‌ನಲ್ಲಿ ಕಾರ್ ಡ್ರೈವರ್ ಹೇಮಂತ್ (42), ಪ್ರೊಡಕ್ಷನ್ ಅಸಿಸ್ಟೆಂಟ್ ನಾಗೇಶ್ (28) ಎಂಬುವವರು ಕೆಲಸ ಮಾಡುತ್ತಿದ್ದರು.
ಇವರಿಬ್ಬರನ್ನು ಅಪಹರಿಸಿ, ಸೀರಿಯಲ್ ಪ್ರೊಡಕ್ಷನ್ ಹೌಸ್ ಮಾಲೀಕರಾದ ಲಕ್ಷ್ಮಿ (23) ಅವರಿಗೆ ಫೋನ್ ಮಾಡಿ ಅನಾಮಿಕರು 1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಒಂದು ಕೋಟಿ ಹಣ ಕೊಡದಿದ್ದರೆ, ಸಂಜೆ ಒಳಗೆ ಇಬ್ಬರನ್ನು ಕೊಲೆ ಮಾಡುವುದಾಗಿ ಬೆದರಿಕೆಯನ್ನು ಹಾಕಿದ್ದರು.
ಇದನ್ನೂ ಓದಿ: Murder Case : ಎದೆಗೆ ಚೂರಿ ಹಾಕಿ ರೌಡಿಶೀಟರ್ ಹತ್ಯೆ; ಕಾಣೆಯಾಗಿದ್ದ ವ್ಯಕ್ತಿಯನ್ನು ಹೂತಿಟ್ಟ ಹಂತಕರು!
ಇದರಿಂದ ಗಾಬರಿಯಾದ ಲಕ್ಷ್ಮೀ ಅವರು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಲಕ್ಷ್ಮೀ ಅವರಿಗೆ ಶಾಕ್ ಆಗಿತ್ತು. ಯಾಕೆಂದರೆ, ಸೀರಿಯಲ್ ಪ್ರೊಡಕ್ಷನ್ ಹೌಸ್ ಸಿಬ್ಬಂದಿಯ ಕಳ್ಳಾಟ ಬಯಲಾಗಿತ್ತು.
ಲಕ್ಷ್ಮೀ ಅವರ ಪ್ರೊಡಕ್ಷನ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ ಡ್ರೈವರ್ ಹೇಮಂತ್, ಮಾಜಿ ಉದ್ಯೋಗಿ ಕಿರಣ್ ಜತೆಗೆ ಸೇರಿಕೊಂಡಿದ್ದ. ಹಣದಾಸೆಗೆ ಬಿದ್ದ ಇವರಿಬ್ಬರು, ಕಿಡ್ನ್ಯಾಪ್ ಮಾಡುವ ಮಾಸ್ಟರ್ ಪ್ಲಾನ್ ಮಾಡಿದ್ದರು. ಇದಕ್ಕಾಗಿ ಮಲ್ಲೇಶ್ವರಂ ರೌಡಿಶೀಟರ್ ಆಗಿರುವ ಶ್ರೀನಿವಾಸ್‌ನನ್ನು ಸಂಪರ್ಕ ಮಾಡಿದ್ದರು. ಲಕ್ಷ್ಮಿ ಬಳಿ ಸಿಕ್ಕಾಪಟ್ಟೆ ಹಣವಿದೆ ಎಂಬ ವಿಚಾರವನ್ನು ತಿಳಿಸಿದ್ದರು.
ಹೀಗಾಗಿ ರೌಡಿಶೀಟರ್ ಶ್ರೀನಿವಾಸನ ಸಹಚರ ಮೋಹನ್ ಎಂಬಾತ ಲಕ್ಷ್ಮಿಗೆ ಕರೆ ಮಾಡಿ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದ. ಲಕ್ಷ್ಮೀಗೆ ಅನುಮಾನ ಬಾರದಿರಲಿ ಎಂದು ಪ್ರೊಡಕ್ಷನ್ ಅಸಿಸ್ಟೆಂಟ್ ನಾಗೇಶ್ ಜತೆ ಕಾರ್ ಡ್ರೈವರ್ ಹೇಮಂತ್‌ನನ್ನು ಕಿಡ್ನ್ಯಾಪ್ ಮಾಡಿ, ಚಿಕ್ಕ ಮಧುರೆಯ ಫಾರ್ಮ್ ಹೌಸ್‌ನಲ್ಲಿ ಇಟ್ಟಿದ್ದರು. ಪ್ರಕರಣ ಭೇದಿಸಿದ ಪೊಲೀಸರು ಆರೋಪಿಗಳ ಚಲನವಲನದ ಸಿಸಿಟಿವಿ, ಟೋಲ್ ಸಿಸಿಟಿವಿ ಪತ್ತೆ ಮಾಡಿದ್ದರು. ರೌಡಿಶೀಟರ್‌ಗಳಾದ ಶ್ರೀನಿವಾಸ್, ಮೋಹನ್ ಹಾಗೂ ಮಾಜಿ ಉದ್ಯೋಗಿ ಕಿರಣ್, ಹಾಲಿ ಡ್ರೈವರ್ ಹೇಮಂತ್ ಹಾಗು ಕುಲ್ದೀಪ್ ಸಿಂಗ್‌ನನ್ನು ಬಂಧಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ