Site icon Vistara News

Kolkata Doctor Murder Case: ಕೋಲ್ಕತಾ ವೈದ್ಯೆಯ ಹಂತಕನಲ್ಲಿ ಕ್ರೂರ ಮೃಗದ ಲಕ್ಷಣ! ಪಶ್ಚಾತ್ತಾಪವೇ ಇಲ್ಲ

Kolkata Doctor Murder Case

ಕೋಲ್ಕತ್ತಾದ ವೈದ್ಯೆಯ ಅತ್ಯಾಚಾರ, ಕೊಲೆ (Kolkata Doctor Murder Case) ಪ್ರಕರಣದ ಆರೋಪಿಯಾಗಿ ಬಂಧಿಸಲ್ಪಟ್ಟಿರುವ ಸಂಜಯ್ ರಾಯ್‌ಗೆ (Sanjay Roy) ತಾನು ಎಸಗಿದ ಈ ಕ್ರೂರ ಕೃತ್ಯದ ಬಗ್ಗೆ ಒಂದಿಷ್ಟೂ ಪಶ್ಚಾತ್ತಾಪವಿಲ್ಲ ಎಂದು ಸಿಬಿಐ (CBI) ಅಧಿಕಾರಿಯೊಬ್ಬರು ಹೇಳಿದ್ದಾರೆ. ಆತನ ಮನಸ್ಥಿತಿಯ ಪರೀಕ್ಷೆ ನಡೆಸಲಾಗಿದ್ದು, ಆತ ವಿಕೃತ ಮತ್ತು ಅಶ್ಲೀಲತೆಯ ತೀವ್ರ ವ್ಯಸನಿ ಎಂಬುದು ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ.

ಅತ್ಯಾಚಾರಿ ಸಂಜಯ್‌ನಲ್ಲಿ ಕ್ರೂರ ಪ್ರಾಣಿಯ ಪ್ರವೃತ್ತಿ ಇದೆ. ವಿಚಾರಣೆಯ ಸಮಯದಲ್ಲಿ ಸರ್ಕಾರಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಳಗೆ ನಡೆದ ಭೀಕರ ಹತ್ಯೆಗೆ ಅವನು ಯಾವುದೇ ಪಶ್ಚಾತ್ತಾಪವನ್ನು ತೋರಿಸಲಿಲ್ಲ ಎಂದು ಅವರು ಹೇಳಿದ್ದಾರೆ. ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದ ಅಪರಾಧಕ್ಕಾಗಿ ಸಂಜಯ್ ರಾಯ್ ಯಾವುದೇ ಪಶ್ಚಾತ್ತಾಪವನ್ನು ತೋರಿಸಿಲ್ಲ. ಯಾವುದೇ ಹಿಂಜರಿಕೆಯನ್ನು ಪ್ರದರ್ಶಿಸದೆ ಆತ ಸಂಪೂರ್ಣ ಅಪರಾಧವನ್ನು ತನಿಖಾ ಸಂಸ್ಥೆಗೆ ವಿವರಿಸಿದ್ದಾನೆ. ಆ ವ್ಯಕ್ತಿ ಯಾವುದೇ ಪಶ್ಚಾತ್ತಾಪವನ್ನು ತೋರಿಸಲಿಲ್ಲ. ಪ್ರತಿ ನಿಮಿಷದ ವಿವರವನ್ನು ಯಾವುದೇ ಟೆನ್ಶನ್‌ ಇಲ್ಲದೆ ಸಂಪೂರ್ಣ ಘಟನೆಯನ್ನು ವಿವರಿಸಿದ್ದಾನೆ. ಅವನಿಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ತೋರುತ್ತಿದೆ ಎಂದು ಸಿಬಿಐ ಅಧಿಕಾರಿ ತಿಳಿಸಿದ್ದಾರೆ.

ಕೋಲ್ಕತ್ತಾ ಆಸ್ಪತ್ರೆಯ ವೈದ್ಯೆ ತಮ್ಮ 36 ಗಂಟೆಗಳ ಸುದೀರ್ಘ ಪಾಳಿಯ ಬಳಿಕ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ವಿಶ್ರಮಿಸಲು ಹೋಗಿದ್ದರು. ಮರಣೋತ್ತರ ಪರೀಕ್ಷೆಯ ವರದಿಯು ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ ಮತ್ತು ತೀವ್ರವಾಗಿ ಥಳಿಸಲಾಗಿದೆ ಎಂದು ಸೂಚಿಸಿದೆ. ಸಂತ್ರಸ್ತೆಯ ಮೇಲೆ 16 ಬಾಹ್ಯ ಮತ್ತು ಒಂಬತ್ತು ಆಂತರಿಕ ಗಾಯವಾಗಿತ್ತು. ಕತ್ತು ಹಿಸುಕಿದ್ದರಿಂದ ಆಕೆ ಸಾವನ್ನಪ್ಪಿದ್ದಳು.


ಅಪರಾಧ ನಡೆದ ಒಂದು ದಿನದ ಅನಂತರ ಸಂಜಯ್ ರಾಯ್‌ನನ್ನು ಬಂಧಿಸಲಾಗಿದೆ. ಆತ ಅಪರಾಧ ನಡೆದ ಸಮಯದಲ್ಲಿ ಕಟ್ಟಡವನ್ನು ಪ್ರವೇಶಿಸುವುದನ್ನು ಕೆಲವರು ನೋಡಿದ್ದಾರೆ. ಅಲ್ಲದೇ ಆತನ ಬ್ಲೂಟೂತ್ ಹೆಡ್‌ಫೋನ್‌ಗಳು ಅಪರಾಧದ ಸ್ಥಳದ ಬಳಿ ಪತ್ತೆಯಾಗಿದ್ದವು. ಸಂಜಯ್ ರಾಯ್‌ನ ಮೊಬೈಲ್ ಫೋನ್‌ನಲ್ಲಿ ಹಲವಾರು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಅಪರಾಧದ ಸ್ಥಳದಲ್ಲಿ ಆರೋಪಿಯ ಉಪಸ್ಥಿತಿಯನ್ನು ತಾಂತ್ರಿಕ ಮತ್ತು ವೈಜ್ಞಾನಿಕ ಪುರಾವೆಗಳು ಸೂಚಿಸುತ್ತವೆ ಎಂದು ಅಧಿಕಾರಿ ಹೇಳಿದರು.

ಆಗಸ್ಟ್ 8ರಂದು ಬೆಳಗ್ಗೆ 11 ಗಂಟೆಗೆ ಆತ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಿದ್ದಾನೆ. ಆಗಸ್ಟ್ 9ರಂದು ಬೆಳಗ್ಗೆ 4 ಗಂಟೆಗೆ ಆತ ಕಟ್ಟಡಕ್ಕೆ ಪ್ರವೇಶಿಸಿರುವುದು ಕೆಮೆರಾದಲ್ಲಿ ಸೆರೆಯಾಗಿದೆ. ಆಗಸ್ಟ್ 9ರಂದು ಬೆಳಗ್ಗೆ 3ರಿಂದ 5 ಗಂಟೆಯ ನಡುವೆ ವೈದ್ಯೆಯನ್ನು ಕೊಲೆ ಮಾಡಲಾಗಿದ್ದು, ಸಂತ್ರಸ್ತೆಯ ಕೊಲೆಗೆ ದೊಡ್ಡ ಸಂಚು ಕಾರಣವೇ ಎಂದು ಸಿಬಿಐ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: Kolkata Doctor Murder Case: ಮಮತಾ ಬ್ಯಾನರ್ಜಿ ಆಡಳಿತದ ಕರಾಳ ಅಧ್ಯಾಯ ತೆರೆದಿಟ್ಟಿದೆ ಕೋಲ್ಕತಾ ವೈದ್ಯೆ ಕೊಲೆ ಪ್ರಕರಣ

ಆರ್‌ ಜಿ ಕರ್ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ. ಸಂದೀಪ್ ಘೋಷ್ ಅವರನ್ನು ಹಲವು ದಿನಗಳಿಂದ ವಿಚಾರಣೆ ನಡೆಸಲಾಗಿದೆ. ಕೋಲ್ಕತ್ತಾ ಪೊಲೀಸರು ಡಾ. ಸಂದೀಪ್ ಘೋಷ್ ವಿರುದ್ಧದ ಹಣಕಾಸಿನ ಅವ್ಯವಹಾರದ ಆರೋಪಗಳ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಸಂದೀಪ್ ಘೋಷ್ ಅವರ ಮಾಜಿ ಸಹೋದ್ಯೋಗಿ ಅಖ್ತರ್ ಅಲಿ “ಮೃತ ದೇಹಗಳ ವ್ಯವಹಾರ”ದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪವೂ ಕೇಳಿ ಬಂದಿದೆ.

Exit mobile version