Site icon Vistara News

Lokayukta Raid : 13 ಭ್ರಷ್ಟ ಅಧಿಕಾರಿಗಳಿಗೆ ಲೋಕಾ ಶಾಕ್;‌ ಕೋಟಿ ಕೋಟಿ ಹಣ ಲಾಕ್!

Thimmarajappa KIRDL ENgineer

ಬೆಂಗಳೂರು: ಯಾವುದೇ ಭಯ, ನಾಚಿಕೆ ಇಲ್ಲದೆ ಕಂಡವರ ಮುಂದೆ ಹಣಕ್ಕೆ ಕೈ ಚಾಚುವ, ಬೆದರಿಕೆ ಹಣ ಕೀಳುವ ದುಷ್ಟ ದಂಧೆಯನ್ನು ನಡೆಸಿಕೊಂಡು ಬರುತ್ತಿದ್ದ ರಾಜ್ಯದ 13 ಮಂದಿ ಕಡುಭ್ರಷ್ಟ ಅಧಿಕಾರಿಗಳ (Corrupt officers) ಮೇಲೆ ಮಂಗಳವಾರ ಲೋಕಾಯುಕ್ತ ದಾಳಿ (Lokayukta Raid) ನಡೆದಿದೆ. ಲೋಕಾಯುಕ್ತ ಅಧಿಕಾರಿಗಳ ತಂಡ ಮಂಗಳವಾರ ಬೆಳಗ್ಗೆ ಈ ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಚೇರಿ ಮನೆಗಳಿಗೆ ದಾಳಿ ಮಾಡಿ ಕೋಟ್ಯಂತರ ರೂ. ನಗದು, ಅದಕ್ಕಿಂತಲೂ ದೊಡ್ಡ ಮೊತ್ತದ ಚಿನ್ನಾಭರಣ, ಅದನ್ನೂ ಮೀರಿದ ಆಸ್ತಿಪಾಸ್ತಿಗಳ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ರಾಜಧಾನಿ ಬೆಂಗಳೂರು, ಕೋಲಾರ, ಬೀದರ್, ಕಲಬುರ್ಗಿ, ಯಾದಗಿರಿ. ಕೊಪ್ಪಳ, ಮೈಸೂರು, ರಾಮನಗರ, ಹುಬ್ಬಳ್ಳಿ, ಚಿಕ್ಕಬಳ್ಳಾಪುರ ಹೀಗೆ 10 ಜಿಲ್ಲೆಗಳಲ್ಲಿ ಬೆಳ್ಳಂಬೆಳಗ್ಗೆ ಅಖಾಡಕ್ಕಿಳಿದ ಲೋಕಾಯುಕ್ತ ಅಧಿಕಾರಿಗಳು ಚಳಿಯಲ್ಲಿ ಬೆಚ್ಚಗೆ ಮಲಗಿದ್ದ 13 ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. 63ಕ್ಕೂ ಹೆಚ್ಚು ಸ್ಥಳಗಳ ಮೇಲೆ ಏಕಕಾಲದಲ್ಲೇ ದಾಳಿ ನಡೆಸಿರೋ ಲೋಕಾಯುಕ್ತ ಟೀಂ ಅಧಿಕಾರಿಗಳು ಆದಾಯ ಮೀರಿ ಗಳಿಸಿದ್ದ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.

ದಾಳಿಗೆ ಒಳಗಾದ ಅಧಿಕಾರಿಗಳು ಇವರು

  1. ಚನ್ನಕೇಶವ H.D, EE, ಬೆಸ್ಕಾಂ, ಜಯನಗರ, ಉಪವಿಭಾಗ, ಬೆಂಗಳೂರು
  2. ಸುಧಾಕರ್ ರೆಡ್ಡಿ , ವಿಜಿಲೆನ್ಸ್ EE ಬೆಸ್ಕಾಂ, ಬೆಂಗಳೂರು
  3. H.S.ಕೃಷ್ಣಮೂರ್ತಿ, ಕಣ್ಮಿಣಿಕೆ ಹಾ.ಉ.ಸ.ಸಂಘ, ಕುಂಬಳಗೋಡು
  4. H.D.ನಾರಾಯಣ ಸ್ವಾಮಿ, ನಿವೃತ್ತ ವೈಸ್ ಚಾನ್ಸಲರ್, ಕರ್ನಾಟಕ ಪಶುವೈದ್ಯಕೀಯ ವಿವಿ, ಬೀದರ್
  5. ಸುನೀಲ್ ಕುಮಾರ್, ಸಹಾಯಕ(ಹೊರಗುತ್ತಿಗೆ), ಹಣಕಾಸು ಕಚೇರಿ, ಕರ್ನಾಟಕ ಪಶುವೈದ್ಯಕೀಯ ವಿವಿ, ಬೀದರ್
  6. ಡಾ.ಪ್ರಭುಲಿಂಗ್, ಜಿಲ್ಲಾ ಆರೋಗ್ಯಾಧಿಕಾರಿ ಯಾದಗಿರಿ
  7. ಬಿ ಮಾರುತಿ, RFO, ಆನೆಗುಂಡಿ ಡಿವಿ, ಪ್ರಾದೇಶಿಕ ಶ್ರೇಣಿ, ಗಂಗಾವತಿ, ಕೊಪ್ಪಳ
  8. ಚಂದ್ರಶೇಖರ, ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ, ಬಳ್ಳಾರಿ
  9. ಶರಣಪ್ಪ, ಆಯುಕ್ತರು, ನಗರಸಭೆ, ಯಾದಗಿರಿ.
  10. ಮಹದೇವ ಸ್ವಾಮಿ M S, ಉಪನ್ಯಾಸಕ, ಸ.ಪ್ರ.ದ.ಕಾಲೇಜು, ನಂಜನಗೂಡು
  11. ತಿಮ್ಮರಾಜಪ್ಪ, EE, KRDL, ವಿಜಯಪುರ ಜಿಲ್ಲೆ. (ಪ್ರಸ್ತುತ ಬೆಳಗಾವಿಯಲ್ಲಿ ಇಇ)
  12. ಮುನೇಗೌಡ ಎನ್, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ರಾಮನಗರ
  13. ಬಸವರಾಜ, ಸ್ಟೋರ್ ಕೀಪರ್, ಗ್ರೇಡ್-2, ಓ & ಎಂ ಸಿಟಿ ವಿಭಾಗ ಅಂಗಡಿ, ಹೆಸ್ಕಾಂ, ಹುಬ್ಬಳ್ಳಿ, (ನಿವೃತ್ತ)

ಬೆಸ್ಕಾಂ ಇಇ ಚನ್ನಕೇಶವ ಮನೆಯಲ್ಲಿ 15.53 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ

ಬೆಂಗಳೂರಿನ ಜಯನಗರ ಉಪವಿಭಾಗ ಇಇ ಬೆಸ್ಕಾಂ ಚೆನ್ನಕೇಶವ ಮನೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಆಸ್ತಿಪಾಸ್ತಿ ಪತ್ತೆಯಾಗಿದೆ. ಅಮೃತಹಳ್ಳಿಯ ಮಿಥುನ ಅಪಾರ್ಟಮೆಂಟ್‌ನಲ್ಲಿರುವ ಚೆನ್ನಕೇಶವ ಮನೆಗೆ ಬೆಳಗ್ಗೆ 6 ಗಂಟೆಗೆ ಮೂರು ವಾಹನದಲ್ಲಿ ಬಂದಿದ್ದ 13 ಜನ ಅಧಿಕಾರಿಗಳು ದಾಳಿ ನಡೆಸಿದರು.

ಈ ದಾಳಿಯಲ್ಲಿ ಚೆನ್ನಕೇಶವಗೆ ಸೇರಿದ 11.46 ಕೋಟಿ ಮೌಲ್ಯದ ಆಸ್ತಿ ದಾಖಲೆ ಪತ್ರ, 3 ಕೆ.ಜಿ ಚಿನ್ನ, 28 ಕೆ.ಜಿ ಬೆಳ್ಳಿ, 25 ಲಕ್ಷ ಬೆಲೆ ಬಾಳುವ ವಜ್ರಗಳು ಸೇರಿ ಒಟ್ಟು 15.53 ಕೋಟಿ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ. ಆತ ಯಲಹಂಕ ಬಳಿ ಕಮರ್ಷಿಯಲ್ ಕಟ್ಟಡ ನಿರ್ಮಿಸುತ್ತಿರುವುದು ಕೂಡಾ ಪತ್ತೆಯಾಗಿದೆ. ದಾಳಿ ವೇಳೆ ಶಾಕ್‌ಗೆ ಒಳಗಾದ ಚೆನ್ನಕೇಶವಗೆ ಬಿಪಿ ಹೆಚ್ಚಾಗಿ ಆರೋಗ್ಯ ಸಮಸ್ಯೆ ಎದುರಾಗಿದೆ. ಹೀಗಾಗಿ ಅಧಿಕಾರಿಗಳು ಮಾತ್ರೆಗಳನ್ನು ತಂದುಕೊಟ್ಟ ಬಳಿಕ ಸುಧಾರಿಸಿಕೊಂಡು ಅಧಿಕಾರಿಗಳ ಪರಿಶೀಲನೆಗೆ ಸಹಕಾರ ನೀಡಿದ್ದಾರೆ. ಹಾಗೆ ಚನ್ನಕೇಶವ ಸೋದರ ಮಾನವ ಮನೆ ಮೇಲೂ ದಾಳಿ ನಡೆದಿದ್ದು ಸುಮಾರು 1 ಕೋಟಿ ನಗದು ಸಿಕ್ಕಿದೆ.

ಬೆಸ್ಕಾಂ ಜಾಗೃತ ದಳದ ಅಧಿಕಾರಿ ನಿವಾಸದಲ್ಲಿ 5.73 ಕೋಟಿ ಮೌಲ್ಯದ ಚಿನ್ನಾಭರಣ, ನಗದು, ಆಸ್ತಿ ಪತ್ತೆ

ಬೆಸ್ಕಾಂ ಜಾಗೃತ ದಳದ ಅಧಿಕಾರಿ ಸುಧಾಕರ್ ರೆಡ್ಡಿಯ ಬೆಂಗಳೂರಿನ ಮನೆ, ಚಿಂತಾಮಣಿಯ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಸುಧಾಕರ್‌ಗೆ ಸೇರಿದ ಐದು ಕಡೆ ದಾಳಿ ನಡೆದಿದ್ದು, ಬೆಳಗ್ಗೆ 6 ಗಂಟೆಯಿಂದಲೇ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಸಾತನೂರು ಬಳಿಯ ನಿವಾಸಕ್ಕೆ ಲೋಕಾಯುಕ್ತ ಎಸ್ ಪಿ ವಂಶಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

Thimmarajappa Bangalore Belagavi house

ಹಾಗೆ ಈ ದಾಳಿಯಲ್ಲಿ ಸುಧಾಕರ್ ರೆಡ್ಡಿಗೆ ಸಂಬಂಧಿಸಿದ ಚಿಕ್ಕಬಳ್ಳಾಪುರ ಜಿಲ್ಲೆಯ ಎರಡು ಗ್ರಾಮೀಣ ಪ್ರದೇಶದಲ್ಲಿ 12 ಎಕರೆ ಕೃಷಿ ಜಾಗ ಪತ್ತೆಯಾಗಿದ್ದು, ಸುಧಾಕರ್ ಪತ್ನಿ ಟೆಲಿ ಇಂಡಿಯನ್ ಪ್ರೈವೆಟ್‌ ಲಿಮಿಟೆಡ್ ಎಂಬ ಕಂಪನಿಯಲ್ಲಿ ನಿರ್ದೇಶಕರಾಗಿದ್ದು, ಆ ಕಂಪನಿಯಲ್ಲಿ 700 ರಿಂದ 800ರಷ್ಟು ಜನ ಕೆಲಸ ಮಾಡುತ್ತಿದ್ದಾರಂತೆ. ಸದ್ಯ ಕಂಪನಿಯ ಮೇಲೂ ಸಹ ದಾಳಿ ನಡೆಸಿದ್ದು, ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ. ಇವರ ಮನೆಯಲ್ಲಿ 5.42 ಕೋಟಿ ರೂ. ಬೆಲೆಬಾಳುವ ಆಸ್ತಿ ಪತ್ರಗಳು, 31 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ, ನಗದು ಸೇರಿ ಒಟ್ಟು 5.73 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.

ಕೃಷ್ಣ ಮೂರ್ತಿ ಕಣಿಮಿಣಿಕೆ: ಬೆಳ್ಳಗಿರೋದೆಲ್ಲ ಹಾಲಲ್ಲ!

Thimmarajappa Bangalore Belagavi house

ಕುಂಬಳಗೋಡು ಹಾಲು ಸಹಕಾರ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್ ಎಸ್ ಕೃಷ್ಣಮೂರ್ತಿಯ ಕಣಿಮಿಣಿಕೆ ನಿವಾಸ ಸೇರಿದಂತೆ 5 ಕಡೆ ಲೋಕಾ ದಾಳಿ ನಡೆದಿದೆ. 16 ಸಾವಿರ ಸಂಬಳ ಇದ್ರೂ ಕೃಷ್ಣಮೂರ್ತಿ ಕೋಟಿ ಕೋಟಿ ಸಂಪಾದನೆ ಮಾಡಿದ್ದು, ಪ್ರತಿ ತಿಂಗಳು ಸೊಸೈಟಿಗೆ ಎರಡು ಲಕ್ಷ ಆದಾಯ ಇದ್ದರು ಕೇವಲ ಹತ್ತು ಸಾವಿರ ತೋರಿಸಿರುವ ಆರೋಪ ಕೇಳಿಬಂದಿದೆ. ರೈತರಿಗೆ ವಂಚಿಸಿ ಹಣ ಮಾಡಿದ್ದು ದಾಳೆ ವೇಳೆ ಬೆಳಕಿಗೆ ಬಂದಿದ್ದು, ಕೆಜಿ ಕೆಜಿ ಬಂಗಾರದ ಜೊತೆ 77 ಬಾಡಿಗೆ ಮನೆಯ ಮಾಲೀಕ ಈ ಕೃಷ್ಣಮೂರ್ತಿ ಅನ್ನೋದು ಬೆಳಕಿಗೆ ಬಂದಿದೆ.

ಕೆಆರ್‌ಐಡಿಎಲ್ ಸೂಪರಿಂಟೆಂಡೆಂಟ್ ಇಂಜಿನಿಯರ್‌ ತಿಮ್ಮರಾಜಪ್ಪ

Thimmarajappa Bangalore Belagavi house

ಕೆಆರ್‌ಐಡಿಎಲ್ ಸೂಪರಿಂಟೆಂಡೆಂಟ್ ಎಂಜಿನಿಯರ್‌ ಆಗಿರುವ ತಿಮ್ಮರಾಜಪ್ಪ ಮೊದಲು ಬೆಂಗಳೂರಿನಲ್ಲಿದ್ದು ಇತ್ತೀಚೆಗಷ್ಟೇ ಬೆಳಗಾವಿಗೆ ನಿಯೋಜನೆಗೊಂಡಿದ್ದಾರೆ. ಅವರಿಗೆ ಸೇರಿದ ಬೆಳಗಾವಿಯ ಶಿವಬಸವನಗರದ ನಿವಾಸಕ್ಕೆ ಳಗಾವಿ ಲೋಕಾಯುಕ್ತ ಡಿವೈಎಸ್‌ಪಿ ಭರತರೆಡ್ಡಿ ನೇತೃತ್ವದಲ್ಲಿ ದಾಳಿಮಾಡಲಾಗಿದೆ. ತಿಮ್ಮರಾಜಪ್ಪ ಕೋಲಾರ ಜಿಲ್ಲೆಯ ಕೆಜಿಎಫ್‌ ತಾಲೂಕಿನ ಮಹದೇವಪುರ ಗ್ರಾಮದವರು. ಅವರಿಗೆ ಸೇರಿದ ಬೆಂಗಳೂರಿನ ಐದು ಮನೆ ಮತ್ತು ಬೆಳಗಾವಿಯ ಮನೆಗಳಿಗೆ ದಾಳಿ ನಡೆದಿದೆ.

  1. ಕಲ್ಯಾಣ್ ನಗರ, ಚಳ್ಳಕೆರೆ ಮುಖ್ಯ ರಸ್ತೆಯಲ್ಲಿ ಮನೆ.
  2. ಬೆಂಗಳೂರಿನ ಹೂಡಿಯಲ್ಲಿರುವ ಅಪಾರ್ಟ್‌ಮೆಂಟ್.
  3. ಡಾಲರ್ಸ್ ಕಾಲೋನಿ ಮನೆ
  4. ವಿಲ್ಲಾ, ಟಿಎಂಆರ್ ಆರ್ಚೇಡ್, ಸಂಪಿಗೆಹಳ್ಳಿ,
  5. ಮಹದೇವಪುರ ಗ್ರಾಮದಲ್ಲಿ ಗ್ರಾಮದ ಮನೆ, ಕೆಜಿಎಫ್
  6. ಬೆಳಗಾವಿಯಲ್ಲಿ ಪ್ರಸ್ತುತ ವಾಸಿಸುತ್ತಿರುವ ಮನೆ (ಬಾಡಿಗೆ) ವಾಸ

Exit mobile version