Site icon Vistara News

Lokayukta Raid : ಆರು ಭ್ರಷ್ಟರ ಮೇಲೆ ಲೋಕಾ ದಾಳಿ ; ಕೋಟಿ ಕೋಟಿ ಹಣ, ದುಬಾರಿ ಮದ್ಯ ವಶ!

Lokayukta raid ramanagara suresh Babu

ಬೆಂಗಳೂರು: ರಾಜ್ಯದ ಆರು ಅಧಿಕಾರಿಗಳ ಮೇಲೆ (Six corrupt officers) ಮಂಗಳವಾರ ಲೋಕಾಯುಕ್ತ ಮುಗಿಬಿದ್ದಿದೆ (Lokayukta Raid). ರಾಜ್ಯಾದ್ಯಂತ ಸುಮಾರು 30 ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ (Lokayukta officers) ಮಾಡಿದ್ದು, ಕೋಟ್ಯಂತರ ರೂ. ನಗದು, ರಾಶಿ ರಾಶಿ ಚಿನ್ನಾಭರಣ ಮತ್ತು ದುಬಾರಿ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರು, ಬಳ್ಳಾರಿ,‌ ಚಿತ್ರದುರ್ಗ, ರಾಮನಗರ, ಬೆಂಗಳೂರಿನಲ್ಲಿ ಈ ದಾಳಿಗಳು ನಡೆದಿವೆ.

ದಾಳಿಗೆ ಒಳಗಾದ ಅಧಿಕಾರಿಗಳು ಇವರು

1.ಬಿಬಿಎಂಪಿಯ ಚೀಫ್‌ ಜನರಲ್‌ ಮ್ಯಾನೇಜರ್‌ ಎಂ.ಎಲ್‌. ನಾಗರಾಜ್‌
2.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ಎಂ ಪದ್ಮನಾಭ್
3.ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಎನ್‌. ಸತೀಶ್‌ ಬಾಬು
4.ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಸೈಯದ್‌ ಮುನೀರ್‌ ಅಹ್ಮದ್
5.ಚನ್ನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎಚ್ ಎಸ್ ಸುರೇಶ್
6.ಮೆಂಬರ್ ಸೆಕ್ರೆಟರಿ ಮತ್ತು ಜಂಟಿ ನಿರ್ದೇಶಕ, ಟೌನ್ ಪ್ಲಾನಿಂಗ್ ಮಂಜೇಶ್ ಬಿ

ಚೀಫ್‌ ಜನರಲ್‌ ಮ್ಯಾನೇಜರ್‌ ಎಂ.ಎಲ್‌. ನಾಗರಾಜ್‌, ಪಿಡಿಒ ಡಿ.ಎಂ ಪದ್ಮನಾಭ್

ದುಬಾರಿ ಮದ್ಯ, ಚಿನ್ನಾಭರಣ, ಬೇನಾಮಿ ಆಸ್ತಿ!

ಬೆಂಗಳೂರಿನಲ್ಲಿ ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ‌ ನಡೆಸಿದ್ದಾರೆ. ಪಿಡಿಒ ಆಗಿರುವ ಪದ್ಮನಾಭ್‌ ಎಂಬಾತನ ಮಲ್ಲೇಶ್ವರದಲ್ಲಿರುವ ಮನೆ, ಎಇಇ ಆಗಿರುವ ಸೈಯದ್ ಮುನೀರ್ ಅಹ್ಮದ್‌ನ ಆರ್ ಟಿನಗರದ ಮನೆ ಹಾಗು ಸೂಪರಿಟೆಂಡೆಂಟ್ ಎಂಜಿನಿಯರ್‌ ಸತೀಶ್‌ನ ಜಯಮಹಲ್ ಎಕ್ಸ್ ಟೆನ್ಷನ್ ಸರ್ಕಾರಿ ವಸತಿ ಗೃಹದ ಮೇಲೆ ದಾಳಿ ನಡೆದಿದೆ. ಜನಸಾಮಾನ್ಯರಿಂದ ದೂರುಗಳು ಬಂದ ಬಳಿಕ ಒಂದಷ್ಟು ದಾಖಲೆಗಳನ್ನ ಸಂಗ್ರಹಿಸಿದ ಲೋಕಾಯುಕ್ತ ಟೀಂ ಮಂಗಳವಾರ ಮುಂಜಾನೆ ಮೂರು ಗಂಟೆಗೆ ದಾಳಿ ನಡೆಸಿತ್ತು.

ಎಇಇ ಆಗಿರುವ ಸೈಯದ್ ಮುನೀರ್ ಅಹ್ಮದ್‌ ಮನೆಯಲ್ಲಿ ಸಿಕ್ಕಿದ ನಗ-ನಗದು

ರಾಮನಗರ ಗ್ರಾಮ ಪಂಚಾಯತಿ ಸದಸ್ಯನಾಗಿರುವ ಸುರೇಶ್ ಎಂಬಾತನ ಮನೆಯಲ್ಲಿ ಲಕ್ಷಾಂತರ ರೂಪಾಯಿ ಹಣದ ಜೊತೆಗೆ ವಿದೇಶಿ ಹಾಗು ದೇಸೀ ಮೂಲದ ದುಬಾರಿ ಮದ್ಯಗಳು ಪತ್ತೆಯಾಗಿವೆ. ಒಬ್ಬ ಗ್ರಾಮ ಪಂಚಾಯಿತಿ ಸದಸ್ಯ ಈ ಮಟ್ಟಕ್ಕೆ ದುಡ್ಡು ಮಾಡಿದ್ದಾನಾ ಎಂಬಷ್ಟರ ಮಟ್ಟಿಗೆ ಕುತೂಹಲ ಮೂಡಿದೆ. ಅಗತ್ಯಕ್ಕಿಂತ ಹೆಚ್ಚಿನ ಮದ್ಯ ಸಿಕ್ಕಿದ ಹಿನ್ನಲೆ ಅಬಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಿದ್ದಾರೆ.

ಭಾರಿ ಪ್ರಮಾಣದ ಭೂದಾಖಲೆಗಳು ಕೂಡಾ ಪತ್ತೆ

ಬೆಂಗಳೂರಿನಲ್ಲಿ ಕುಂದಣ ಪಿಡಿಒ ಪದ್ಮನಾಭ ಅವರಿಗೆ ಸೇರಿದ ಮೂರು ಮನೆಗಳ ಮೇಲೆ ದಾಳಿ ನಡೆದಿದೆ. ಮಲ್ಲೇಶ್ವರಂನ ಸಪ್ತಗಿರಿ ನಿವಾಸ, ಸಪ್ತಗಿರಿ ಲೇಔಟ್‌ ಬಳಿಯ ನಾಲ್ಕು ಅಂತಸ್ತಿನ ಮನೆಗೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ತುಮಕೂರು ಜಿಲ್ಲೆಯ ಅನುಪನಹಳ್ಳಿಯಲ್ಲಿರುವ ಫಾರ್ಮ್‌ ಹೌಸ್‌, ಐದು ಎಕರೆ ಕೃಷಿ ಭೂಮಿ, ಸೋಂಪುರದಲ್ಲಿರುವ ವಾಣಿಜ್ಯ ಕಟ್ಟಡ, ದಾಬಸ್‌ಪೇಟೆ ಮತ್ತು ಸೋಂಪುರದಲ್ಲಿರುವ ಕೈಗಾರಿಕಾ ಶೆಡ್‌ಗಳಲ್ಲಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದರು.

ಸತೀಶ್‌ ಬಾಬು ಮನೆಯಲ್ಲಿ ಸಿಕ್ಕಿದ ಬೆಳ್ಳಿ ಮತ್ತು ಚಿನ್ನಾಭರಣಗಳು

ಬೆಸ್ಕಾಂ ಚೀಫ್‌ ಜನರಲ್‌ ಮ್ಯಾನೇಜರ್‌ ನಾಗರಾಜ್‌

ವಿಜಯನಗರ ಜಿಲ್ಲೆಯ ಬೆಸ್ಕಾಂ ಚೀಫ್‌ ಜನರಲ್‌ ಮ್ಯಾನೇಜರ್‌ ನಾಗರಾಜ್‌ ಮತ್ತು ಅವರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆದಿದೆ. ಸಿವಿ ರಾಮನ್‌ ನಗರದ ನಾಗವಾರ ಪಾಳ್ಯದ ಮನೆ, ನಾಗರಾಜ್‌ ವಾಸವಿದ್ದ ಕ್ವಾರ್ಟರ್ಸ್‌, ಬಳ್ಳಾರಿಯ ಹುಟ್ಟೂರಿನಲ್ಲಿರುವ ದಾಖಲೆಗಳ ಪರಿಶೀಲನೆ ನಡೆದಿದೆ. ನಾಗರಾಜ್‌ ಅವರು ಕೂಡ್ಲಿಗಿ ಪಟ್ಟಣ, ಗುಡೇಕೋಟೆ ಗ್ರಾಮದಲ್ಲಿ ಅಕ್ರಮ ಆಸ್ತಿ, ಪೆಟ್ರೋಲ್‌ ಬಂಕ್‌, ಮನೆ ಮತ್ತು ಜಮೀನು ಹೊಂದಿದ್ದಾರೆ ಎನ್ನಲಾಗಿದೆ. ನಾಗರಾಜ್‌ ಕೆಲವೇ ದಿನಗಳ ಹಿಂದೆ 7.5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದರು.

ಚಿತ್ರದುರ್ಗದಲ್ಲಿ ಕೋಲಾರ ಮೂಲದ ಪಿಡಬ್ಲ್ಯುಡಿ ಎಂಜಿನಿಯರ್‌ ಸತೀಶ್‌ ಬಾಬು ಅವರಿಗೆ ಸೇರಿದ ಮನೆಗೆ ದಾಳಿ ನಡೆದಿದೆ. ಸತೀಶ್‌ ಬಾಬು ಹಿಂದೆ ಚಿತ್ರದುರ್ಗದಲ್ಲಿ ಕೆಲಸ ಮಾಡಿದ್ದರು.

Exit mobile version