ಹಾಸನ: ಅವರಿಬ್ಬರೂ ಎಂಜಿನಿಯರಿಂಗ್ ಸ್ಟೂಡೆಂಟ್ಸ್ (Engineering Students). ಕಳೆದ ಕೆಲವು ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯಾವುದೋ ಕಾರಣಕ್ಕೆ ಅವರ ನಡುವೆ ಬ್ರೇಕಪ್ ಆಗಿತ್ತು (Break up Revenge). ಈ ನಡುವೆ ಮರು ಸಂಧಾನದ ಮಾತುಕತೆ ಎಂದು ಆಕೆಯನ್ನು ಆಹ್ವಾನಿಸಿದ ಹುಡುಗ ಆಕೆಯನ್ನು ಕತ್ತು ಸೀಳಿ ಕೊಲೆ (Love and Murder) ಮಾಡಿದ್ದಾನೆ.
ಇದು ಹಾಸನ ತಾಲೂಕಿನ ಅಗಿಲೆ ಗ್ರಾಮದ ಬಳಿಯ ಕುಂತಿಬೆಟ್ಟದಲ್ಲಿ ನಡೆದ ಭೀಕರ ಘಟನೆ. ಕೊಲೆಯಾದ ಯುವತಿಯ ಹೆಸರು ಸುಚಿತ್ರಾ (21), ಕೊಲೆ ಮಾಡಿದವನು ತೇಜಸ್ (21) )Student kills his Ex lover).
ಸುಚಿತ್ರಾ ಮತ್ತು ತೇಜಸ್ ಇಬ್ಬರೂ ಇಬ್ಬರೂ ಮೊಸಳೆ ಹೊಸಳ್ಳಿ ಇಂಜಿನಿಯರಿಂಗ್ ಕಾಲೇಜ್ (Hosalli Engineering College) ವಿದ್ಯಾರ್ಥಿಗಳು. ಒಂದೇ ತರಗತಿಯಲ್ಲಿದ್ದ ಇಬ್ಬರೂ ಕೆಲವು ಸಮಯದಿಂದ ಪ್ರೀತಿಸುತ್ತಿದ್ದರು. ಆದರೆ, ಈ ನಡುವೆ ಅವರ ಮಧ್ಯೆ ಯಾವುದೋ ಕಾರಣಕ್ಕೆ ಜಗಳವಾಗಿ ಲವ್ ಬ್ರೇಕಪ್ ಆಗಿತ್ತು.
ಈ ನಡುವೆ ಪರಸ್ಪರ ಮಾತನಾಡಿ ಜಗಳ ಪರಿಹರಿಸಿಕೊಳ್ಳೋಣ ಎಂದು ತೇಜಸ್ ಸುಚಿತ್ರಾಳಿಗೆ ತಿಳಿಸಿದ್ದ. ಮಾತುಕತೆಗಾಗಿ ಅವನು ಆಕೆಯನ್ನು ಕರೆಸಿಕೊಂಡದ್ದು ಅಗಿಲೆ ಗ್ರಾಮದ ಬಳಿಯ ಕುಂತಿಬೆಟ್ಟಕ್ಕೆ.
ಆತನ ಮಾತು ನಂಬಿ ಸುಚಿತ್ರಾ ಕುಂತಿಬೆಟ್ಟಕ್ಕೆ ಬಂದಿದ್ದಳು. ಅಲ್ಲಿ ಅವರಿಬ್ಬರೂ ತುಂಬ ಹೊತ್ತು ಮಾತನಾಡಿದ್ದಾರೆ. ಆದರೆ, ಕೊನೆಗೆ ಆತ ಆಕೆಯ ಕತ್ತನ್ನೇ ಸೀಳಿ ಕೊಲೆ ಮಾಡಿದ್ದಾನೆ. ಈ ರೀತಿ ಕೊಲೆ ಮಾಡಿದ್ದನ್ನು ನೋಡಿದ ಕುಂತಿ ಬೆಟ್ಟಕ್ಕೆ ಬಂದಿದ್ದ ಇತರರು ಪೊಲೀಸರಿಗೆ ತಿಳಿಸಿದರು. ಕೂಡಲೇ ಪೊಲೀಸರು ಧಾವಿಸಿದರು. ಆದರೆ, ಅಷ್ಟು ಹೊತ್ತಿಗೆ ಸುಚಿತ್ರಾ ಜೀವ ಹೋಗಿ ಆಗಿತ್ತು.
ಲವ್ ಬ್ರೇಕಪ್ ಬಳಿಕ ಪ್ಯಾಚಪ್ ಮಾತುಕತೆಯ ಹೆಸರಿನಲ್ಲಿ ಆತ ಆಕೆಯನ್ನು ಕರೆಸಿಕೊಂಡಿದ್ದ. ಆದರೆ, ಅಲ್ಲಿ ಅವರ ಮಧ್ಯೆ ನಿಜಕ್ಕೂ ಪ್ಯಾಚಪ್ ಮಾತುಕತೆ ನಡೆಯಿತಾ ಅಥವಾ ಹಿಂದಿನದೇ ವಿಚಾರವನ್ನು ಇಟ್ಟುಕೊಂಡು ಜಗಳವೇ ಮುಂದುವರಿಯಿತಾ ಎನ್ನುವುದು ಸ್ಪಷ್ಟವಾಗಿಲ್ಲ. ಹಂತಕ ತೇಜಸ್ ನಿಜಕ್ಕೂ ಮಾತುಕತೆಗಾಗಿ ಆಕೆಯನ್ನು ಕರೆಸಿಕೊಂಡಿದ್ದನಾ ಅಥವಾ ಆಕೆಯನ್ನು ಕೊಲ್ಲುವುದಕ್ಕಾಗಿಯೇ ಕರೆಸಿಕೊಂಡಿದ್ದನಾ ಎನ್ನುವುದೂ ಸ್ಪಷ್ಟವಿಲ್ಲ.
ಆದರೆ, ಆತ ಹರಿತವಾದ ಆಯುಧದಿಂದ ಆಕೆಯ ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿದ್ದನ್ನು ನೋಡಿದರೆ ಆತ ಕೊಲೆಗೆ ಮೊದಲೇ ಸ್ಕೆಚ್ ಹಾಕಿ ಆಕೆಯನ್ನು ಮಾತುಕತೆಯ ನಾಟಕವಾಡಿ ಕೊಲೆ ಮಾಡಿದ್ದಾನೆ ಎಂದು ಅಂದಾಜಿಸಲಾಗಿದೆ.
ಸುಚಿತ್ರಾ ಬಿ.ಟಿ. ಕೊಪ್ಪಲು ಗ್ರಾಮದ ನಿವಾಸಿಯಾಗಿದ್ದಾಳೆ. ಮಧ್ಯಮ ವರ್ಗದ ಕುಟುಂಬ ದೊಡ್ಡ ಕನಸು ಹೊತ್ತು ಆಕೆಯನ್ನು ಎಂಜಿನಿಯರಿಂಗ್ ಕಾಲೇಜಿಗೆ ಕಳುಹಿಸಿತ್ತು. ಆದರೆ ಆಕೆ ತೇಜಸ್ನ ಪ್ರೀತಿಯ ಬಲೆಗೆ ಬಿದ್ದಿದ್ದಳು. ಆತನ ವರ್ತನೆಗಳಿಂದ ಬೇಸತ್ತು ಆಕೆ ದೂರ ಸರಿದರೂ ಆತ ಮನೆ ಆಮಿಷಗಳ ಮೂಲಕ ಆಕೆಯನ್ನು ಸೆಳೆದುಕೊಂಡಿದ್ದ. ಅಷ್ಟೇ ಆಗಿದ್ದರೆ ಆಕೆ ಜೀವಂತವಾಗಿ ಉಳಿಯುತಿದ್ದಳು. ಆದರೆ, ಆತ ಆಕೆಯನ್ನು ಕೊಂದೇ ಮುಗಿಸುವ ತೀರ್ಮಾನಕ್ಕೆ ಬಂದು ಕುಂತಿ ಬೆಟ್ಟಕ್ಕೆ ರಕ್ತ ತರ್ಪಣ ಕೊಟ್ಟಿದ್ದಾನೆ.
ಹಂತಕ ತೇಜಸ್ ಕೂಡಾ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವನಾಗಿದ್ದು, ಅವನ ಮನೆಯವರು ಕೂಡಾ ಭವಿಷ್ಯದ ಬಗ್ಗೆ ದೊಡ್ಡ ಕನಸುಗಳನ್ನು ಹೊಂದಿದ್ದ. ಆದರೆ, ಆತ ಮಾತ್ರ ಪ್ರೀತಿಯ ಬಲೆಗೆ ಬಿದ್ದು ಮುಂದೆ ಕ್ರೂರಿಯಾಗಿ ಪರಿವರ್ತನೆಗೊಂಡು ಘೋರ ಅಪರಾಧ ಮಾಡಿದ್ದಾನೆ.
ತನ್ನದೇ ಸಹಪಾಠಿಯನ್ನು ಪ್ರೀತಿಯ ನೆಪದಲ್ಲಿ ಕೊಂದು ಮುಗಿಸಿದ ಆತನನ್ನು ಈಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಜತೆಗೆ ಎರಡೂ ಕುಟುಂಬಗಳು ಮರೆಯಲಾಗದ ದುರ್ಘಟನೆಯೊಂದು ಕೂಡಾ ದಾಖಲಾಗಿದೆ.