ತ್ರಿಸೂರ್: ಇಬ್ಬರು ಶಾಲಾ ಬಾಲಕಿಯರ ಎದುರು ತನ್ನ ಗುಪ್ತಾಂಗ ಪ್ರದರ್ಶಿಸಿದ ಆರೋಪದಡಿ ಮಲಯಾಳಂ ನಟ ಶ್ರೀಜಿತ್ ರವಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಜನಸಾಮಾನ್ಯರು ಓಡಾಡುವ ಸ್ಥಳದಲ್ಲಿಯೇ ಈ ವ್ಯಕ್ತಿ ತನ್ನ ವಿಕೃತಿ ತೋರಿಸಿದ್ದಾನೆ. ತ್ರಿಸೂರ್‌ನ ಅಯ್ಯಂತೋಲ್ ಎಂಬಲ್ಲಿರುವ ಎಸ್‌ಎನ್ ಪಾರ್ಕ್‌ನಲ್ಲಿ ಜುಲೈ 4ರಂದು ತಮ್ಮ ಎದುರು ವ್ಯಕ್ತಿಯೊಬ್ಬ ಜನನಾಂಗ ಪ್ರದರ್ಶನ ಮಾಡಿದ್ದಾಗಿ 9 ಮತ್ತು ೧೪ವರ್ಷದ ಹುಡುಗಿಯರು ದೂರು ನೀಡಿದ್ದರು. ಆ ಪ್ರದೇಶದಲ್ಲಿರುವ ಸಿಸಿಟಿವಿ ದೃಶ್ಯವನ್ನು ಪೊಲೀಸರು ಪರಿಶೀಲನೆ ಮಾಡಿದಾಗ ಆ ವ್ಯಕ್ತಿ ಶ್ರೀಜಿತ್ ರವಿ ಎಂಬುದು ಸ್ಪಷ್ಟವಾಗಿದೆ.
ಮಲಯಾಳಂನ ಮೇರು ನಟ ಟಿ.ಜಿ ರವಿ ಅವರ ಪುತ್ರ ಈ ಶ್ರೀಜಿತ್. ಈತ ತಮಿಳು ಹಾಗೂ ಮಲಯಾಳಂ ಭಾಷೆಯ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶ್ರೀಜಿತ್ ಅವರ ಈ ರೀತಿಯ ವಿಕೃತ ನಡವಳಿಕೆ ಇದೇ ಮೊದಲೇನಲ್ಲ. 2016ರಲ್ಲಿ ಸುಮಾರು 14 ಬಾಲಕಿಯರ ಮುಂದೆ ತಮ್ಮ ಗುಪ್ತಾಂಗ ಪ್ರದರ್ಶನ ಮಾಡಿದ್ದ. 2016 ರ ಆಗಸ್ಟ್ 27ರಂದು ಶ್ರೀಜಿತ್ ತನ್ನ ಕಾರಿನಿಂದ ಇಳಿದು ಹುಡುಗಿಯರಿಗೆ ಗುಪ್ತಾಂಗ ತೋರಿಸಿದ್ದಲ್ಲದೆ, ಆ ಬಾಲಕಿಯರ ಫೋಟೋವನ್ನು ತೆಗೆದುಕೊಂಡಿದ್ದ. ಆಗ ಹುಡುಗಿಯರು ಪೊಲೀಸರಿಗೆ ದೂರು ನೀಡಿದ್ದರು. ಬಾಲಕಿಯರು ಕೊಟ್ಟ ಕಾರಿನ ನಂಬರ್ ಪರಿಶೀಲನೆ ಮಾಡಿದಾಗ ಅದು ಶ್ರೀಜಿತ್‌ಗೆ ಸೇರಿದ್ದು ಎಂಬುದು ಗೊತ್ತಾಗಿತ್ತು. ಆದರೆ ಹೋಗಿ ವಿಚಾರಣೆ ಮಾಡಿದರೆ, ಮೊದಲು ಶ್ರೀಜಿತ್ ಒಪ್ಪಿಕೊಂಡಿರಲಿಲ್ಲ. ಕಾರಿನ ನಂಬರ್ ಬದಲಾಗಿರಬೇಕು ಎಂದು ವಾದಿಸಿದ್ದರು. ಆದರೆ ಈ ಸಲ ಶ್ರೀಜಿತ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತ ಬಾಲಕಿಯ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ, ವರ್ಷದ ಹಿಂದೆ ಮದುವೆಯಾಗಿದ್ದ ಧೂರ್ತನೇ ರೂವಾರಿ