ಲಖನೌ: ಇತ್ತೀಚೆಗೆ ಕೋಮು ಸೌಹಾರ್ದತೆ ಕದಡುವ ಕೃತ್ಯಗಳು, ಮಾತು-ಹೇಳಿಕೆಗಳೆಲ್ಲ ಹೆಚ್ಚಾಗಿವೆ. ಒಂದಲ್ಲ ಒಂದು ಕೋಮು ಪ್ರಚೋದಕ ಘಟನೆಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಈಗ ಉತ್ತರ ಪ್ರದೇಶದಲ್ಲಿ ಅಂಥದ್ದೇ ಒಂದು ಪ್ರಕರಣ ನಡೆದಿದೆ. ಇಲ್ಲಿನ ಸಂಭಾಲ್‌ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ದೇವತೆಗಳ ಚಿತ್ರವಿರುವ ಪೇಪರ್‌ನಲ್ಲಿ ಚಿಕನ್ ಕಟ್ಟಿ ಗ್ರಾಹಕರಿಗೆ ಕೊಡುತ್ತಿದ್ದ. ಇದನ್ನು ಗಮನಿಸಿದ ಹಲವರು ತಕರಾರು ಎತ್ತಿದ್ದರು. ಹಿಂದೂ ದೇವರಿಗೆ ಅವಮಾನ ಮಾಡುವ ಮೂಲಕ ಧಾರ್ಮಿಕ ಭಾವನೆಗೆ ನೋವುಂಟು ಮಾಡಲಾಗುತ್ತಿದೆ ಎಂದು ಪೊಲೀಸರಿಗೆ ದೂರು ಕೂಡ ಕೊಟ್ಟಿದ್ದರು. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದ್ದರು.
ಈ ವ್ಯಕ್ತಿ ಹೆಸರು ತಾಲೀಬ್ ಹುಸೇನ್ ಎಂದಾಗಿದ್ದು, ಆತನ ಅಂಗಡಿಯಲ್ಲಿ ಹಿಂದು ದೇವರು-ದೇವತೆಗಳ ಫೋಟೋ ಇರುವ ಪೇಪರ್‌ಗಳು ತುಂಬ ಇವೆ. ಉದ್ದೇಶಪೂರ್ವಕವಾಗಿಯೇ ಆತ ಚಿಕನ್‌ನ್ನು ಅದರಲ್ಲಿಯೇ ಇಟ್ಟು ಕೊಡುತ್ತಿದ್ದ. ದೂರು ಬಂದ ನಂತರ ಸ್ಥಳಕ್ಕೆ ತೆರಳಿದ ಪೊಲೀಸರ ಮೇಲೆ ಆತ ಚಾಕುವಿನಿಂದ ಹಲ್ಲೆಗೆ ಕೂಡ ಮುಂದಾಗಿದ್ದಾನೆ. ತಾಲೀಬ್ ಪೊಲೀಸರನ್ನು ಕೊಲ್ಲುವ ಉದ್ದೇಶ ಇಟ್ಟುಕೊಂಡೇ ದಾಳಿ ಮಾಡಿದ್ದಾನೆ ಎಂದು ಎಫ್‌ಐಆರ್ ದಾಖಲಾಗಿದೆ. ತಾಲೀಬ್ ಹುಸೇನ್‌ನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ:ಟ್ವೀಟ್ ಮೂಲಕ ಕೋಮು ಕಿಡಿ ಎಬ್ಬಿಸುತ್ತಿದ್ದ ಜುಬೇರ್, ಪೊಲೀಸ್ ವಿಚಾರಣೆ ತೀವ್ರ