Site icon Vistara News

Viral News: ಬೀದಿ ನಾಯಿ ಮೇಲೆಯೇ ಅತ್ಯಾಚಾರಗೈದ ವಿಕೃತ ಕಾಮಿ, ಮೃಗೀಯ ಮನಸ್ಥಿತಿಗಿಲ್ಲವೇ ಕೊನೆ?

Man caught on CCTV raping stray dog in Patna

Man caught on CCTV raping stray dog in Patna

ಪಟನಾ: ಕಾಮಾತುರಾಣಾಂ ನ ಭಯಂ ನ ಲಜ್ಜಾ… ಎಂಬ ಸಂಸ್ಕೃತದ ಮಾತಿದೆ. ಅಂದರೆ, ಯಾರಿಗೆ ಕಾಮದ ಆತುರ ಇರುತ್ತದೆಯೋ, ಯಾರಿಗೆ ಕಾಮದ ಅಮಲೇರಿರುತ್ತದೆಯೋ, ಅಂತಹವರಿಗೆ ಭಯವೂ ಇರುವುದಿಲ್ಲ, ನಾಚಿಕೆಯೂ ಇರುವುದಿಲ್ಲ ಎಂಬುದು ಈ ಮಾತಿನ ತಾತ್ಪರ್ಯ. ಈ ಮಾತಿಗೆ ನಿದರ್ಶನ ಎಂಬಂತೆ ಬಿಹಾರದಲ್ಲಿ ವಿಕೃತ ಕಾಮಿಯೊಬ್ಬ ಬೀದಿ ನಾಯಿಯ ಮೇಲೆ ಅತ್ಯಾಚಾರ (Viral News) ಎಸಗಿದ್ದಾನೆ. ಆ ಮೂಲಕ ದೇಶದಲ್ಲಿ ಹೆಣ್ಣುಮಕ್ಕಳು ಮಾತ್ರವಲ್ಲ, ಪ್ರಾಣಿಗಳೂ ಇಂತಹ ಕಾಮಾಂಧರಿಂದ ಸುರಕ್ಷತೆ ಇಲ್ಲ ಎಂಬುದು ಸಾಬೀತಾಗಿದೆ.

ಪಟನಾದ ಫುಲ್ವಾರಿ ಷರೀಫ್‌ ಪ್ರದೇಶದ ಫೈಸಲ್‌ ಕಾಲೋನಿಯಲ್ಲಿ ವ್ಯಕ್ತಿಯೊಬ್ಬ ರಸ್ತೆ ಮಧ್ಯೆಯೇ ಬೀದಿನಾಯಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾದ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಹಾಗೆಯೇ, ವಿಕೃತ ಕಾಮಿಯನ್ನು ಪತ್ತೆಹಚ್ಚಿ, ಆತನಿಗೆ ಶಿಕ್ಷೆ ವಿಧಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ವಿಡಿಯೊ ವೈರಲ್‌ ಆಗುತ್ತಲೇ ಫುಲ್ವಾರಿ ಷರೀಫ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿರುವ ಎನ್‌ಜಿಒ ವತಿಯಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಇದಾದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಾರ್ಚ್‌ 8ರಂದು ಹೋಳಿ ಹಬ್ಬದ ದಿನವೇ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. “ಶ್ವಾನದ ಮೇಲೆ ಅತ್ಯಾಚಾರ ನಡೆದಿರುವ ಕುರಿತು ದಾಖಲೆ ಸಮೇತ ದೂರು ನೀಡಲಾಗಿದೆ. ಭಾರತೀಯ ದಂಡ ಸಂಹಿತೆ (IPC) ಹಾಗೂ ಪ್ರಾಣಿಗಳ ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಪೊಲೀಸ್‌ ಠಾಣೆ ಎಎಸ್‌ಪಿ ಮನೀಶ್‌ ಕುಮಾರ್‌ ಮಾಹಿತಿ ನೀಡಿದರು.

ಕೆಲ ತಿಂಗಳ ಹಿಂದೆ ಕರ್ನಾಟಕದ ರಾಯಚೂರಿನಲ್ಲಿ ಕೊಟ್ಟಿಗೆಯಲ್ಲಿ ಮಲಗಿದ್ದ ಆಕಳ ಕರುವಿನ ಮೇಲೆಯೇ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ ಅತ್ಯಂತ ಅಮಾನುಷ, ಅಮಾನವೀಯ ಘಟನೆ ನಡೆದಿತ್ತು. ಯಾರೂ ಇಲ್ಲದ ಹೊತ್ತು ಸಾಧಿಸಿ ಇಮ್ತಿಯಾಜ್‌ ಎಂಬಾತ ವಿಕೃತಿ ಮೆರೆದಿದ್ದ. ರಾಯಚೂರಿನ ಕಸಬಾ ಲಿಂಗಸುಗೂರು ಗ್ರಾಮದಲ್ಲಿ ಹೇಯ ಘಟನೆ ನಡೆದಿತ್ತು. ಗೋವುಗಳ ಮಾಲೀಕ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: Sexual assault on cow | ಕೊಟ್ಟಿಗೆಯಲ್ಲಿ ಮಲಗಿದ್ದ ಆಕಳ ಕರುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವಿಕೃತಕಾಮಿ

Exit mobile version