ಪಟನಾ: ದೇಶದಲ್ಲಿ ಹೆಣ್ಣುಮಕ್ಕಳ ದೇಹವನ್ನು ತುಂಡರಿಸಿ, ಕೊಲೆ ಮಾಡುವ ದುರುಳ ಮನಸ್ಥಿತಿಯು ಹೆಚ್ಚಾಗುತ್ತಿದೆ. ದೆಹಲಿಯಲ್ಲಿ ಶ್ರದ್ಧಾ ವಾಳ್ಕರ್ ಎಂಬ ಯುವತಿಯ ದೇಹವನ್ನು ಆಕೆಯ ಪ್ರಿಯಕರನೇ ೩೫ ಭಾಗಗಳಾಗಿ ತುಂಡರಿಸಿದ ಪ್ರಕರಣ ಸುದ್ದಿಯಾದ ಬೆನ್ನಲ್ಲೇ ಬಿಹಾರದಲ್ಲೂ ಮೊಹಮ್ಮದ್ ಶಕೀಲ್ ಎಂಬಾತ (Mohammad Shakeel) ಹಿಂದು ಮಹಿಳೆಯ ದೇಹವನ್ನು ತುಂಡರಿಸುವ ಮೂಲಕ ಕ್ರೌರ್ಯ ಮೆರೆದಿದ್ದಾನೆ.
ಬಿಹಾರದ ಭಾಗಲ್ಪುರ ಜಿಲ್ಲೆ ಪಿರಪೈಂಟಿ ಮಾರುಕಟ್ಟೆಯಲ್ಲಿಯೇ ನಿಲಂ ದೇವಿ ಎಂಬ ಮಹಿಳೆಯ ಸ್ತನಗಳು, ಕೈ, ಕಾಲು ಹಾಗೂ ಕಿವಿಗಳನ್ನು ಕತ್ತರಿಸಿದ ಮೊಹಮ್ಮದ್ ಶಕೀಲ್ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಜವಾಹರ ಲಾಲ್ ನೆಹರು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದು, ಶಕೀಲ್ ಪರಾರಿಯಾಗಿದ್ದಾನೆ.
ಯಾರದ್ದೋ ಮೇಲಿನ ಕೋಪಕ್ಕೆ ಕೊಲೆ?
ಮೊಹಮ್ಮದ್ ಶಕೀಲ್ ಹಾಗೂ ಮಹಿಳೆಯು ಚೋಟಿ ದೈಲೋರಿಯವರಾಗಿದ್ದು, ಮಹಿಳೆಯ ಪತಿ ಅಶೋಕ್ ಯಾದವ್‌ಗೆ ಈತನ ಪರಿಚಯ ಇತ್ತು. ಮೊಹಮ್ಮದ್ ಶಕೀಲ್ ಪದೇಪದೆ ಮನೆಗೆ ಬರುತ್ತಿದ್ದ ಕಾರಣ, ಹೀಗೆ ಬರುವುದು ಸರಿಯಲ್ಲ ಎಂದು ಅಶೋಕ್ ಹೇಳಿದ್ದರು. ಇದರಿಂದ ಕುಪಿತಗೊಂಡ ಶಕೀಲ್, ಸಾರ್ವಜನಿಕರ ಎದುರೇ ಮಹಿಳೆಯನ್ನು ಕತ್ತರಿಸಿ ಕೊಂದಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Ex Girlfriend Murder | ಉತ್ತರ ಪ್ರದೇಶದಲ್ಲಿ ಮಾಜಿ ಪ್ರೇಯಸಿಯ ದೇಹ ತುಂಡರಿಸಿ ಹತ್ಯೆಗೈದವನಿಗೆ ಗುಂಡು