Site icon Vistara News

ಸ್ಯಾಡಿಸ್ಟ್ ಗಂಡ; ಪತ್ನಿ ಮೇಲೆ 51 ಜನರಿಂದ ರೇಪ್​ ಮಾಡಿಸಿದ, ಕೈ ತೊಳೆದು ಆಕೆಯನ್ನು ಮುಟ್ಟಿ ಎನ್ನುತ್ತಿದ್ದ!

Stop Rape 3

#image_title

ರಾತ್ರಿಯಾಯಿತು ಎಂದರೆ ಸಾಕು ಈ ಸ್ಯಾಡಿಸ್ಟ್ ಪತಿ ತನ್ನ ಪತ್ನಿಗೆ ಡ್ರಗ್ಸ್​ ಕೊಡುತ್ತಿದ್ದ (Man Drugged Wife). ಮೈಮೇಲೆ ಪ್ರಜ್ಞೆ ಇಲ್ಲದೆ ಬೆಡ್​ ಮೇಲೆ ಮಲಗಿರುತ್ತಿದ್ದ ಆಕೆಯ ಕೋಣೆಗೆ ಪರಪುರುಷರನ್ನು ಕಳಿಸಿ, ಅತ್ಯಾಚಾರ ಮಾಡಿಸುತ್ತಿದ್ದ. ಇದು ಒಂದೆರಡು ದಿನಗಳ ಕತೆಯಲ್ಲ, ಬರೋಬ್ಬರಿ 10ವರ್ಷದಿಂದ ಇದನ್ನೇ ಕಾಯಕವನ್ನಾಗಿಸಿಕೊಂಡಿದ್ದ. ಅವನ ದುಡಿಮೆಯೇ ಇದಾಗಿತ್ತು. ಕಟ್ಟಿಕೊಂಡ ಪತ್ನಿಯೇ ಬಲಿಪಶು ಆಗಿದ್ದಳು. 10 ವರ್ಷದಲ್ಲಿ ಆ ಮಹಿಳೆ ಮೇಲೆ 51 ಮಂದಿ ರೇಪ್​ ಮಾಡಿದ್ದಾರೆ. ಒಟ್ಟು 92 ಸಲ ಹೀಗೆ ಅತ್ಯಾಚಾರವಾಗಿದೆ. 26ವರ್ಷದವರಿಂದ ಹಿಡಿದು 73ವರ್ಷದವರೆಗಿನವರು ಆಕೆಯನ್ನು ತಮ್ಮ ಲೈಂಗಿಕ ಬಯಕೆಗೆ ಮನಸೋ ಇಚ್ಛೆ ಬಳಸಿಕೊಂಡಿದ್ದಾರೆ. ಸದ್ಯ ಸ್ಯಾಡಿಸ್ಟ್​ ಗಂಡ ಅರೆಸ್ಟ್ ಆಗಿದ್ದಾನೆ.

ಆರೋಪಿ ಹೆಸರು ಡೊಮಿನಿಕ್ ಪಿ. ಫ್ರಾನ್ಸ್​ನ ಮಾಝಾನ್​ ಎಂಬಲ್ಲಿ ಇವನ ಮನೆಯಿದೆ. ಮನೆಯಲ್ಲಿ ಈತ ಮತ್ತು ಇವನ ಪತ್ನಿ ಮಾತ್ರ ಇದ್ದರು. ರಾತ್ರಿ ಊಟದಲ್ಲಿಯೇ ಪತ್ನಿಗೆ ಡ್ರಗ್ಸ್​ ಬೆರೆಸಿ ಕೊಡುತ್ತಿದ್ದ. ಊಟವೊಂದು ಆದ ಮೇಲೆ ಅವಳು ಎಚ್ಚರ ತಪ್ಪುತ್ತಿದ್ದಳು ಅಥವಾ ಅರೆಬರೆ ಪ್ರಜ್ಞೆಯಲ್ಲಿ ಇರುತ್ತಿದ್ದಳು. ಗಂಡನಾದವನು ಮನೆಗೆ ‘ಅತಿಥಿ’ಗಳನ್ನು ಕರೆಯುತ್ತಿದ್ದ. 10ವರ್ಷಗಳಿಂದ ಇದೇ ನಡೆಯುತ್ತಿತ್ತು. ಇಷ್ಟು ವರ್ಷದಲ್ಲಿ ಇವನ ಮನೆಗೆ ಬಂದವರಲ್ಲಿ ಲಾರಿ ಡ್ರೈವರ್​ಗಳು, ಅಗ್ನಿಶಾಮಕದಳದ ಸಿಬ್ಬಂದಿ, ಮುನ್ಸಿಪಲ್​ ಕೌನ್ಸಿಲರ್​, ಬ್ಯಾಂಕ್​, ಐಟಿ ಉದ್ಯೋಗಿಗಳು, ಕಾರಾಗೃಹ ರಕ್ಷಣಾ ಸಿಬ್ಬಂದಿ, ನರ್ಸ್​, ಪತ್ರಕರ್ತರೂ ಸೇರಿದ್ದಾರೆ. ಇವರು ತನ್ನ ಪತ್ನಿಯೊಂದಿಗೆ ಸೆಕ್ಸ್ ಮಾಡುತ್ತಿರುವ ವಿಡಿಯೊ, ಫೋಟೋ ಚಿತ್ರೀಕರಿಸಿ ಪೆನ್​ಡ್ರೈವ್​​ನಲ್ಲಿ ಹಾಕಿಡುತ್ತಿದ್ದ. ಈ ಪೆನ್​ಡ್ರೈವ್​ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Liquor Consumption: ಬಡವನ ಕುಡಿತದ ವಾರ್ಷಿಕ ಲೆಕ್ಕಾಚಾರ ಇಲ್ಲಿದೆ! ದಿನಕ್ಕೆ ಆತನ ಸರಾಸರಿ ಖರ್ಚೆಷ್ಟು?

ಡೊಮಿನಿಕ್ ತುಂಬ ಚಾಲಾಕಿಯಾಗಿದ್ದ. ಮನೆಗೆ ಬಂದಾಗ ಆ ಅತಿಥಿಗಳು ತಂಬಾಕು ಸೇವನೆ ಮಾಡುವಂತಿರಲಿಲ್ಲ. ಪರ್​ಫ್ಯೂಮ್ ಹಾಕಿಕೊಂಡು ಬರಬೇಡಿ ಎಂದು ಮೊದಲೇ ಹೇಳುತ್ತಿದ್ದ. ಕಾರಣ ಇಂಥ ವಾಸನೆಗಳಿಂದ ಪತ್ನಿಗೆ ಎಚ್ಚರ ಆಗುವ ಸಾಧ್ಯತೆ ಇರುತ್ತದೆ ಎಂಬುದು ಅವನ ಮುನ್ನೆಚ್ಚರಿಕೆ ಕ್ರಮವಾಗಿತ್ತು. ಆಕೆಯನ್ನು ಮುಟ್ಟುವ ಮುನ್ನ ಬಿಸಿಯಾದ ನೀರಿನಿಂದ ಕೈತೊಳೆದುಕೊಳ್ಳುವಂತೆ ಹೇಳುತ್ತಿದ್ದ. ಹಾಗೇ, ಕಿಚನ್​ನಲ್ಲಿ ಬಟ್ಟೆ ಬಿಚ್ಚಿಡುವಂತೆ ಸೂಚನೆ ನೀಡುತ್ತಿದ್ದ. ಮನೆ ಬಳಿ ವಾಹನ ನಿಲ್ಲಿಸಬೇಡಿ, ಅಲ್ಲೇ ಸಮೀಪದಲ್ಲಿ ಇದ್ದ ಶಾಲೆಯ ಬಳಿ ನಿಲ್ಲಿಸಿ ಬನ್ನಿ. ಮನೆ ಹತ್ತಿರ ಗಾಡಿ ನಿಲ್ಲಿಸುವುದರಿಂದ ನೆರೆಹೊರೆಯವರಿಗೆ ಅನುಮಾನ ಬರುತ್ತದೆ ಎಂದು ಹೇಳುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆದರೂ ಈ ವಿಷಯ ತುಂಬ ದಿನ ಗುಟ್ಟಾಗಿ ಇರಲಿಲ್ಲ. ಈತ ಮಾಡಿದ್ದ ಕೆಲ ವಿಡಿಯೊ ತುಣುಕುಗಳು ವೈರಲ್ ಆಗಿದ್ದವು. ಪೊಲೀಸರು ತನಿಖೆ ಕೈಗೆತ್ತಿಕೊಂಡರು. ಇನ್ನು ಪತ್ನಿಯಂತೂ ವಿಷಯ ತಿಳಿದು ಭೂಮಿಗೆ ಇಳಿದು ಹೋಗಿದ್ದಾಳೆ. ಖಿನ್ನತೆಗೆ ಜಾರಿದ್ದಳು. ವಿಚ್ಛೇದನಕ್ಕಾಗಿ ಅರ್ಜಿಯನ್ನೂ ಸಲ್ಲಿಸಿದ್ದಾಳೆ.

Exit mobile version