Site icon Vistara News

ಎದೆಹಾಲು ಉಂಡು ಬೆಳೆದ ಮಗನ ಕೃತಘ್ನತೆ; 80 ವರ್ಷ ವಯಸ್ಸಿನ ಹೆತ್ತಮ್ಮನ ಎದೆಗೇ ಒದ್ದು ಪ್ರಾಣ ತೆಗೆದ

Teachers Recruitment Scam

ಕೊಟ್ಟಾಯಂ: ಅಮ್ಮನ ಗರ್ಭದಿಂದಲೇ ಹೊರಬಂದು, ಆಕೆಯ ಎದೆ ಹಾಲು ಉಂಡು ಬೆಳೆದ ಮಗ, ಈಗ ಅದೇ ಅಮ್ಮನ ಎದೆಗೆ ಒದ್ದು ಅವಳ ಜೀವ ತೆಗೆದಿದ್ದಾನೆ. ಮನೆಯೆಂದ ಮೇಲೆ ಜಗಳ, ಮನಸ್ತಾಪ ಇದ್ದೇ ಇರುತ್ತದೆ. ಮಕ್ಕಳು ಬೆಳೆಯುತ್ತ-ಬೆಳೆಯುತ್ತ ಹೆತ್ತವರನ್ನು ವಿರೋಧಿಸುವುದು, ಸಣ್ಣಸಣ್ಣದಕ್ಕೂ ಜಗಳ ತೆಗೆಯುವುದು ಸಾಮಾನ್ಯ. ಕೆಲವರಂತೂ ಅಪ್ಪ-ಅಮ್ಮನನ್ನು ಮನೆಯಿಂದ ಹೊರಹಾಕುವ ಕೆಟ್ಟತನವನ್ನೂ ತೋರುತ್ತಾರೆ. ಆದರೆ ಕೇರಳದ ಕೊಟ್ಟಾಯಂ ಜಿಲ್ಲೆಯ 52 ವರ್ಷದ ವ್ಯಕ್ತಿ ಹೆತ್ತಮ್ಮನ ಎದೆಗೆ ಒದ್ದಿದ್ದಾನೆ. ಬೆಳೆದು, ಬಲಿಷ್ಠನಾದ ಮಗನ ಒದೆ ತಡೆದುಕೊಳ್ಳಲಾಗದ ಆ ವೃದ್ಧೆ ಜೀವ ಬಿಟ್ಟಿದ್ದಾರೆ. ಆತನೀಗ ಅರೆಸ್ಟ್ ಆಗಿದ್ದಾನೆ.

ಮೃತ ಮಹಿಳೆಯ ಹೆಸರು ಸಾಥಿ(80). ಆಕೆಯನ್ನು ಕೊಂದು, ಬಂಧಿತನಾದ ಮಗ ಬಿಜು (52). ಇವರು ಕೊಟ್ಟಾಯಂ ಜಿಲ್ಲೆಯ ಪಣಚಿಕ್ಕಾಡ್​ ನಿವಾಸಿಗಳು. ಈ ಬಿಜುನಿಗೆ ಆತನ ಸೋದರಿಯನ್ನು ಕಂಡರೇ ಆಗುತ್ತಿರಲಿಲ್ಲ. ಮದುವೆಯಾಗಿ ಹೋಗಿದ್ದ ಅವಳು ತವರು ಮನೆಗೆ ಬರುವುದನ್ನು ವಿರೋಧಿಸುತ್ತಿದ್ದ. ಆಕೆ ವಯಸ್ಸಾದ ತಾಯಿಯನ್ನು ನೋಡಲು ಆಗಾಗ ಇಲ್ಲಿಗೆ ಬರುತ್ತಿದ್ದರು. ಅದನ್ನು ಸಹಿಸದ ಬಿಜು ತನ್ನ ತಾಯಿಯ ಬಳಿ ರೇಗಾಡುತ್ತಿದ್ದ. ಇತ್ತೀಚೆಗೆ ಒಮ್ಮೆ ಆತನ ಸಹೋದರಿ ಅಮ್ಮನನ್ನು ನೋಡಲು ಬಂದಿದ್ದಳು. ಆಕೆ ಅತ್ತ ಹೋಗುತ್ತಿದ್ದಂತೆ ಬಿಜು ಕೋಪದಿಂದ ಅಮ್ಮನ ಬಳಿ ಗಲಾಟೆ ಎತ್ತಿದ್ದ. ಒಂದು ಹಂತದಲ್ಲಿ ಆಕೆಯ ಎದೆಗೆ ಒದ್ದಿದ್ದ.

ಜೋರಾಗಿ ಏಟು ಬಿದ್ದಿದ್ದರಿಂದ ಆ ವೃದ್ಧ ಮಹಿಳೆ ಕೆಳಗೆ ಬಿದ್ದು ಎಚ್ಚರತಪ್ಪಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದ. ಆತ ಆಸ್ಪತ್ರೆಯಲ್ಲಿ ಸುಳ್ಳು ಹೇಳಿದ್ದ. ‘ನನ್ನಮ್ಮ ಮನೆಯಲ್ಲಿ ಬಿದ್ದಳು, ಹೀಗಾಗಿ ಏಟಾಗಿದೆ’ ಎಂದಿದ್ದ. ಎರಡು ದಿನಗಳ ಚಿಕಿತ್ಸೆ ನೀಡಿದರೂ ಮಹಿಳೆ ಬದುಕಲಿಲ್ಲ.

ಆಸ್ಪತ್ರೆಯಿಂದ ಅಮ್ಮನ ಶವವನ್ನು ತಂದ ಬಿಜು ಅವಸರ ಅವಸರದಲ್ಲಿ ಅವಳ ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದ. ತುಂಬ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ಇದನ್ನು ನೋಡಿದ ನೆರಮನೆಯವರು ಚಿಂಗವನಮ್​ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಅಂತ್ಯಕ್ರಿಯೆ ಆಗುವುದನ್ನು ತಡೆದು, ಶವಪರೀಕ್ಷೆ ಮಾಡಿಸಿದ್ದಾರೆ. ಆಗ ಆಕೆಯ ಮುಖ ಮತ್ತು ಎದೆಯ ಮೇಲೆ ಬಲವಾದ ಪೆಟ್ಟು ಬಿದ್ದಿರುವ ವರದಿ ಬಂದಿದೆ. ಪಕ್ಕೆಲುಬು ಮುರಿತವಾಗಿದ್ದು ಗೊತ್ತಾಗಿದೆ. ಪೊಲೀಸರು ಗಟ್ಟಿಯಾಗಿ ಹೆದರಿಗೆ ಬಿಜುವಿನ ಬಳಿ ಪ್ರಶ್ನಿಸಿದಾಗ ಆತ ಸತ್ಯ ಬಾಯ್ಬಿಟ್ಟಿದ್ದಾನೆ. ಅವನನ್ನು 14 ದಿನಗಳ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ.

ಇದನ್ನೂ ಒದಿ: Mass suicide | ಮೂರು ಪುಟ್ಟ ಮಕ್ಕಳ ಜತೆ ಮಹಿಳೆ ಆತ್ಮಹತ್ಯೆ: ಗಂಡನ ಪರಸ್ತ್ರೀ ವ್ಯಾಮೋಹವೇ ಕಾರಣ

Exit mobile version