ಎದೆಹಾಲು ಉಂಡು ಬೆಳೆದ ಮಗನ ಕೃತಘ್ನತೆ; 80 ವರ್ಷ ವಯಸ್ಸಿನ ಹೆತ್ತಮ್ಮನ ಎದೆಗೇ ಒದ್ದು ಪ್ರಾಣ ತೆಗೆದ - Vistara News

ಕ್ರೈಂ

ಎದೆಹಾಲು ಉಂಡು ಬೆಳೆದ ಮಗನ ಕೃತಘ್ನತೆ; 80 ವರ್ಷ ವಯಸ್ಸಿನ ಹೆತ್ತಮ್ಮನ ಎದೆಗೇ ಒದ್ದು ಪ್ರಾಣ ತೆಗೆದ

ಮೃತ ಮಹಿಳೆಯ ಹೆಸರು ಸಾಥಿ(80). ಆಕೆಯನ್ನು ಕೊಂದು, ಬಂಧಿತನಾದ ಮಗ ಬಿಜು (52). ಇವರು ಕೊಟ್ಟಾಯಂ ಜಿಲ್ಲೆಯ ಪಣಚಿಕ್ಕಾಡ್​ ನಿವಾಸಿಗಳು. ಈ ಬಿಜುನಿಗೆ ಆತನ ಸೋದರಿಯನ್ನು ಕಂಡರೇ ಆಗುತ್ತಿರಲಿಲ್ಲ. ಸೋದರಿ ವಿಷಯಕ್ಕೆ ಅಮ್ಮನ ಬಳಿ ಜಗಳವಾಡಿ, ಆಕೆಯ ಪ್ರಾಣವನ್ನೇ ತೆಗೆದಿದ್ದಾನೆ.

VISTARANEWS.COM


on

Teachers Recruitment Scam
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊಟ್ಟಾಯಂ: ಅಮ್ಮನ ಗರ್ಭದಿಂದಲೇ ಹೊರಬಂದು, ಆಕೆಯ ಎದೆ ಹಾಲು ಉಂಡು ಬೆಳೆದ ಮಗ, ಈಗ ಅದೇ ಅಮ್ಮನ ಎದೆಗೆ ಒದ್ದು ಅವಳ ಜೀವ ತೆಗೆದಿದ್ದಾನೆ. ಮನೆಯೆಂದ ಮೇಲೆ ಜಗಳ, ಮನಸ್ತಾಪ ಇದ್ದೇ ಇರುತ್ತದೆ. ಮಕ್ಕಳು ಬೆಳೆಯುತ್ತ-ಬೆಳೆಯುತ್ತ ಹೆತ್ತವರನ್ನು ವಿರೋಧಿಸುವುದು, ಸಣ್ಣಸಣ್ಣದಕ್ಕೂ ಜಗಳ ತೆಗೆಯುವುದು ಸಾಮಾನ್ಯ. ಕೆಲವರಂತೂ ಅಪ್ಪ-ಅಮ್ಮನನ್ನು ಮನೆಯಿಂದ ಹೊರಹಾಕುವ ಕೆಟ್ಟತನವನ್ನೂ ತೋರುತ್ತಾರೆ. ಆದರೆ ಕೇರಳದ ಕೊಟ್ಟಾಯಂ ಜಿಲ್ಲೆಯ 52 ವರ್ಷದ ವ್ಯಕ್ತಿ ಹೆತ್ತಮ್ಮನ ಎದೆಗೆ ಒದ್ದಿದ್ದಾನೆ. ಬೆಳೆದು, ಬಲಿಷ್ಠನಾದ ಮಗನ ಒದೆ ತಡೆದುಕೊಳ್ಳಲಾಗದ ಆ ವೃದ್ಧೆ ಜೀವ ಬಿಟ್ಟಿದ್ದಾರೆ. ಆತನೀಗ ಅರೆಸ್ಟ್ ಆಗಿದ್ದಾನೆ.

ಮೃತ ಮಹಿಳೆಯ ಹೆಸರು ಸಾಥಿ(80). ಆಕೆಯನ್ನು ಕೊಂದು, ಬಂಧಿತನಾದ ಮಗ ಬಿಜು (52). ಇವರು ಕೊಟ್ಟಾಯಂ ಜಿಲ್ಲೆಯ ಪಣಚಿಕ್ಕಾಡ್​ ನಿವಾಸಿಗಳು. ಈ ಬಿಜುನಿಗೆ ಆತನ ಸೋದರಿಯನ್ನು ಕಂಡರೇ ಆಗುತ್ತಿರಲಿಲ್ಲ. ಮದುವೆಯಾಗಿ ಹೋಗಿದ್ದ ಅವಳು ತವರು ಮನೆಗೆ ಬರುವುದನ್ನು ವಿರೋಧಿಸುತ್ತಿದ್ದ. ಆಕೆ ವಯಸ್ಸಾದ ತಾಯಿಯನ್ನು ನೋಡಲು ಆಗಾಗ ಇಲ್ಲಿಗೆ ಬರುತ್ತಿದ್ದರು. ಅದನ್ನು ಸಹಿಸದ ಬಿಜು ತನ್ನ ತಾಯಿಯ ಬಳಿ ರೇಗಾಡುತ್ತಿದ್ದ. ಇತ್ತೀಚೆಗೆ ಒಮ್ಮೆ ಆತನ ಸಹೋದರಿ ಅಮ್ಮನನ್ನು ನೋಡಲು ಬಂದಿದ್ದಳು. ಆಕೆ ಅತ್ತ ಹೋಗುತ್ತಿದ್ದಂತೆ ಬಿಜು ಕೋಪದಿಂದ ಅಮ್ಮನ ಬಳಿ ಗಲಾಟೆ ಎತ್ತಿದ್ದ. ಒಂದು ಹಂತದಲ್ಲಿ ಆಕೆಯ ಎದೆಗೆ ಒದ್ದಿದ್ದ.

ಜೋರಾಗಿ ಏಟು ಬಿದ್ದಿದ್ದರಿಂದ ಆ ವೃದ್ಧ ಮಹಿಳೆ ಕೆಳಗೆ ಬಿದ್ದು ಎಚ್ಚರತಪ್ಪಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದ. ಆತ ಆಸ್ಪತ್ರೆಯಲ್ಲಿ ಸುಳ್ಳು ಹೇಳಿದ್ದ. ‘ನನ್ನಮ್ಮ ಮನೆಯಲ್ಲಿ ಬಿದ್ದಳು, ಹೀಗಾಗಿ ಏಟಾಗಿದೆ’ ಎಂದಿದ್ದ. ಎರಡು ದಿನಗಳ ಚಿಕಿತ್ಸೆ ನೀಡಿದರೂ ಮಹಿಳೆ ಬದುಕಲಿಲ್ಲ.

ಆಸ್ಪತ್ರೆಯಿಂದ ಅಮ್ಮನ ಶವವನ್ನು ತಂದ ಬಿಜು ಅವಸರ ಅವಸರದಲ್ಲಿ ಅವಳ ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದ. ತುಂಬ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ಇದನ್ನು ನೋಡಿದ ನೆರಮನೆಯವರು ಚಿಂಗವನಮ್​ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಅಂತ್ಯಕ್ರಿಯೆ ಆಗುವುದನ್ನು ತಡೆದು, ಶವಪರೀಕ್ಷೆ ಮಾಡಿಸಿದ್ದಾರೆ. ಆಗ ಆಕೆಯ ಮುಖ ಮತ್ತು ಎದೆಯ ಮೇಲೆ ಬಲವಾದ ಪೆಟ್ಟು ಬಿದ್ದಿರುವ ವರದಿ ಬಂದಿದೆ. ಪಕ್ಕೆಲುಬು ಮುರಿತವಾಗಿದ್ದು ಗೊತ್ತಾಗಿದೆ. ಪೊಲೀಸರು ಗಟ್ಟಿಯಾಗಿ ಹೆದರಿಗೆ ಬಿಜುವಿನ ಬಳಿ ಪ್ರಶ್ನಿಸಿದಾಗ ಆತ ಸತ್ಯ ಬಾಯ್ಬಿಟ್ಟಿದ್ದಾನೆ. ಅವನನ್ನು 14 ದಿನಗಳ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ.

ಇದನ್ನೂ ಒದಿ: Mass suicide | ಮೂರು ಪುಟ್ಟ ಮಕ್ಕಳ ಜತೆ ಮಹಿಳೆ ಆತ್ಮಹತ್ಯೆ: ಗಂಡನ ಪರಸ್ತ್ರೀ ವ್ಯಾಮೋಹವೇ ಕಾರಣ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Actor Darshan: ದರ್ಶನ್‌ ಬಂಧಿಸಿದ ಎಸಿಪಿ ಚಂದನ್ ಕುಮಾರ್‌ ಕೆಲಸಕ್ಕೆ ಸೆಲ್ಯೂಟ್‌ ಎಂದ ಗ್ರಾಮಸ್ಥರು!

Actor Darshan: ಎಸಿಪಿ ಚಂದನ್‌ ಹಾಗೂ ಗಿರೀಶ್‌ ನಾಯ್ಕ್‌ ಅವರು ದರ್ಶನ್‌ನನ್ನು ಮೈಸೂರಿನಿಂದ ಕರೆತಂದಿದ್ದರು. ಆರಂಭದಲ್ಲಿ ಗಿರೀಶ್‌ ನಾಯ್ಕ್‌ ಅವರೇ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದರು. ಚುನಾವಣೆ ನಿಮಿತ್ತ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿದ್ದರು. ಬಳಿಕ ಮತ್ತೆ ಸಿ.ಕೆ.ಅಚ್ಚುಕಟ್ಟು ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿದ್ದರು.

VISTARANEWS.COM


on

Actor Darshan ACP Chandan Kumar work salute by people
Koo

ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲುಪಾಲಾಗಿರುವ ನಟ ದರ್ಶನ್‌ (Actor Darshan) ಹಾಗೂ ಆತನ ಗ್ಯಾಂಗ್‌ನ ಹಲವು ಆರೋಪಿಗಳನ್ನು ನ್ಯಾಯಾಲಯವು ಮತ್ತೆ ಐದು ದಿನಗಳವರೆಗೆ ಪೊಲೀಸ್‌ ಕಸ್ಟಡಿಗೆ (Police Custody) ನೀಡಿದೆ. ಆರೋಪಿ ದರ್ಶನ್‌ನನ್ನು ಮೈಸೂರಿನಲ್ಲಿ ವಶಕ್ಕೆ ಪಡೆದುಕೊಂಡು, ಬೆಂಗಳೂರಿಗೆ ಕರೆತಂದಿದ್ದ ಇನ್ಸ್‌ಪೆಕ್ಟರ್‌ ಗಿರೀಶ್‌ ನಾಯ್ಕ್‌ ಅವರು ಮತ್ತೆ ತನಿಖಾ ತಂಡವನ್ನು ಸೇರಿಕೊಂಡಿದ್ದು, ತನಿಖೆಗೆ ಬಲ ಬಂದಂತಾಗಿದೆ. ನಟ ದರ್ಶನ್ ಬಂಧಿಸಿದ ಎಸಿಪಿ ಚಂದನ್ ಕುಮಾರ್‌ಗೆ ಮೈಸೂರಿನ ಇಟ್ಟಿಗೆಗೂಡು ಗ್ರಾಮಸ್ಥರಿಂದ ಶ್ಲಾಘನೆ ವ್ಯಕ್ತವಾಗಿದೆ. ಎಸಿಪಿ ಚಂದನ್ ಕುಮಾರ್ ಸ್ನೇಹಿತರು ವಿಸ್ತಾರ ನ್ಯೂಸ್‌ ಜತೆ ಸಂತಸ ಹಂಚಿಕೊಂಡಿದ್ದು ಹೀಗೆ.

ʻʻಎಸಿಪಿ ಚಂದನ್ ಕುಮಾರ್‌ ನಮ್ಮೂರಿನವರು ಎನ್ನುವುದೇ ನಮಗೆ ಹೆಮ್ಮೆ. ತುಂಬಾ ಸಂಭಾವಿತ ವ್ಯಕ್ತಿ. ಯಾವುದೇ ರಾಜಕೀಯ ಒತ್ತಡಕ್ಕೂ ಮಣಿಯಲ್ಲ, ಪ್ರಭಾವಕ್ಕೂ ಜಗ್ಗಲ್ಲ. ತಮ್ಮ ಪಾಲಿಗೆ ಬಂದ ಕೆಲಸವನ್ನು ಅತ್ಯಂತ ದಕ್ಷತೆಯಿಂದ ಮಾಡಿದ್ದಾರೆ.ಈ ಕೇಸ್ ಮೂಲಕ ಚಂದನ್ ಕರ್ನಾಟಕ ಪೊಲೀಸರ ಘನತೆ ಹೆಚ್ಚಿಸಿದ್ದಾರೆʼʼಎಂದು ಚಂದನ್ ಕುಮಾರ್ ಸ್ನೇಹಿತರು ವಿಸ್ತಾರ ನ್ಯೂಸ್‌ ಜತೆ ಸಂತಸ ಹಂಚಿಕೊಂಡರು.

ಎಸಿಪಿ ಚಂದನ್‌ ಹಾಗೂ ಗಿರೀಶ್‌ ನಾಯ್ಕ್‌ ಅವರು ದರ್ಶನ್‌ನನ್ನು ಮೈಸೂರಿನಿಂದ ಕರೆತಂದಿದ್ದರು. ಆರಂಭದಲ್ಲಿ ಗಿರೀಶ್‌ ನಾಯ್ಕ್‌ ಅವರೇ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದರು. ಚುನಾವಣೆ ನಿಮಿತ್ತ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿದ್ದರು. ಬಳಿಕ ಮತ್ತೆ ಸಿ.ಕೆ.ಅಚ್ಚುಕಟ್ಟು ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿದ್ದರು.

ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಕೊಲೆ ಕೇಸ್;‌ ಮೊಬೈಲ್‌ ಪಾಸ್‌ವರ್ಡ್‌ ನೀಡಲು ದರ್ಶನ್‌ & ಗ್ಯಾಂಗ್‌ ತಕರಾರು!

ಗಿರೀಶ್‌ ನಾಯ್ಕ್‌ ಅವರ ವರ್ಗಾವಣೆ ಹಿನ್ನೆಲೆಯಲ್ಲಿ ಎಸಿಪಿ ಚಂದನ್‌ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಆರೋಪಿಗಳ ಹೆಚ್ಚಿನ ವಿಚಾರಣೆ ಹಿನ್ನೆಲೆಯಲ್ಲಿ ಈಗ ಗಿರೀಶ್‌ ನಾಯ್ಕ್‌ ಅವರನ್ನು ಮತ್ತೆ ಸಹಾಯಕ ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ.

2011ರಲ್ಲಿ ಕರ್ನಾಟಕದ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರನ್ನು ಬಂಧಿಸಿದ್ದು ಇದೇ ಗಿರೀಶ್‌ ಅವರು. ಹಾಗೇ ಇಂಜಿನಿಯರ್‌ ಆಗಿ ಬಳಿಕ ಪೊಲೀಸ್‌ ಅಧಿಕಾರಿಯಾಗಿರುವ ಎಸ್‌ ಗಿರೀಶ್‌ ಅವರು ಈ ಹಿಂದೆ ಲೋಕಾಯುಕ್ತದಲ್ಲಿದ್ದಾಗ ತಮ್ಮ ನೇರ ಹಾಗೂ ಧೈರ್ಯದ ನಡವಳಿಕೆಗೆ ಹೆಸರಾಗಿದ್ದರು. ಇನ್ನು, ಚಂದನ್‌ ಕುಮಾರ್‌ ಅವರು ಮೊದಲು ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದರು. ಅದಾದ ಬಳಿಕ ಪೊಲೀಸ್‌ ಅಧಿಕಾರಿಯಾದರು.

ಮೊಬೈಲ್‌ ಪಾಸ್‌ವರ್ಡ್‌ ನೀಡಲು ದರ್ಶನ್‌ & ಗ್ಯಾಂಗ್‌ ತಕರಾರು!

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಆದರೆ, ವಿಚಾರಣೆ ವೇಳೆ ಮೊಬೈಲ್‌ ಪಾಸ್‌ವರ್ಡ್‌ (Mobile Password) ನೀಡಲು ದರ್ಶನ್‌ ಮತ್ತು ಆತನ ಗ್ಯಾಂಗ್‌ ನಿರಾಕರಿಸುತ್ತಿದೆ. ಇದರಿಂದ ಪೊಲೀಸರ ತನಿಖೆಗೆ ಅಡಚಣೆಯಾಗುತ್ತಿದೆ ಎಂದು ತಿಳಿದುಬಂದಿದೆ.

ದರ್ಶನ್‌ & ಗ್ಯಾಂಗ್‌ನಿಂದ ಪೊಲೀಸರು ಇದುವರೆಗೆ 10 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಡೇಟಾ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಇನ್ನು ಕೆಲವು ಮೊಬೈಲ್‌ಗಳಲ್ಲಿದ್ದ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಆರೋಪಿಗಳು ಇನ್ನೂ ಕೆಲವು ಮೊಬೈಲ್‌ಗಳ ಪಾಸ್‌ವರ್ಡ್‌ ನೀಡುತ್ತಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇಷ್ಟಾದರೂ ಪಟ್ಟು ಬಿಡದ ಪೊಲೀಸ್‌ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Continue Reading

ಕರ್ನಾಟಕ

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್;‌ ಮೊಬೈಲ್‌ ಪಾಸ್‌ವರ್ಡ್‌ ನೀಡಲು ದರ್ಶನ್‌ & ಗ್ಯಾಂಗ್‌ ತಕರಾರು!

Actor Darshan: ದರ್ಶನ್‌ & ಗ್ಯಾಂಗ್‌ನಿಂದ ಪೊಲೀಸರು ಇದುವರೆಗೆ 10 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಡೇಟಾ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಇನ್ನು ಕೆಲವು ಮೊಬೈಲ್‌ಗಳಲ್ಲಿದ್ದ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಆರೋಪಿಗಳು ಇನ್ನೂ ಕೆಲವು ಮೊಬೈಲ್‌ಗಳ ಪಾಸ್‌ವರ್ಡ್‌ ನೀಡುತ್ತಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

VISTARANEWS.COM


on

Actor Darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲುಪಾಲಾಗಿರುವ ನಟ ದರ್ಶನ್‌ (Actor Darshan) ಹಾಗೂ ಆತನ ಗ್ಯಾಂಗ್‌ನ ಹಲವು ಆರೋಪಿಗಳನ್ನು ನ್ಯಾಯಾಲಯವು ಮತ್ತೆ ಐದು ದಿನಗಳವರೆಗೆ ಪೊಲೀಸ್‌ ಕಸ್ಟಡಿಗೆ (Police Custody) ನೀಡಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಆದರೆ, ವಿಚಾರಣೆ ವೇಳೆ ಮೊಬೈಲ್‌ ಪಾಸ್‌ವರ್ಡ್‌ (Mobile Password) ನೀಡಲು ದರ್ಶನ್‌ ಮತ್ತು ಆತನ ಗ್ಯಾಂಗ್‌ ನಿರಾಕರಿಸುತ್ತಿದೆ. ಇದರಿಂದ ಪೊಲೀಸರ ತನಿಖೆಗೆ ಅಡಚಣೆಯಾಗುತ್ತಿದೆ ಎಂದು ತಿಳಿದುಬಂದಿದೆ.

ದರ್ಶನ್‌ & ಗ್ಯಾಂಗ್‌ನಿಂದ ಪೊಲೀಸರು ಇದುವರೆಗೆ 10 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಡೇಟಾ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಇನ್ನು ಕೆಲವು ಮೊಬೈಲ್‌ಗಳಲ್ಲಿದ್ದ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಆರೋಪಿಗಳು ಇನ್ನೂ ಕೆಲವು ಮೊಬೈಲ್‌ಗಳ ಪಾಸ್‌ವರ್ಡ್‌ ನೀಡುತ್ತಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇಷ್ಟಾದರೂ ಪಟ್ಟು ಬಿಡದ ಪೊಲೀಸ್‌ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Actor Darshan

ಪ್ರಶ್ನೆಗಳ ಸುರಿಮಳೆ

ಶರಣಾಗಿರುವ ಆರೋಪಿಗಳನ್ನು ಡ್ರಿಲ್‌ ಮಾಡುತ್ತಿರುವ ಪೊಲೀಸರು, ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಪ್ರಕರಣದ ಸಂಬಂಧ ನೀವೇನಾದರೂ ಹಣ ಪಡೆದಿದ್ರಾ? ನಿಮ್ಮನ್ನು ಸಂಪರ್ಕಿಸಿದವರು ಯಾರು? ಯಾರ ಮಾತನ್ನು ನೀವು ಕೇಳಿ ನೀವು ಪ್ರಕರಣದಲ್ಲಿ ಭಾಗಿಯಾದಿರಿ? ದರ್ಶನ ಜತೆ ನೀವೇನಾದರೂ ನೇರವಾಗಿ ಸಂಪರ್ಕದಲ್ಲಿ ಇದ್ರಾ? ಆರೋಪಿ ರಘು ನಿಮ್ಮನ್ನು ಭೇಟಿಯಾಗಿ ಹೇಳಿದ್ದೇನು? ಶೆಡ್‌ ಒಳಗೆ ಯಾರೆಲ್ಲ ಹೋದರು? ನೀವೂ ಹೋಗಿದ್ರಾ ಎಂಬುದು ಸೇರಿ ಹತ್ತಾರು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ.

ತನಿಖೆಯ ಟೀಮ್‌ಗೆ ಇನ್ಸ್‌ಪೆಕ್ಟರ್‌ ಗಿರೀಶ್‌ ನಾಯ್ಕ್‌ ಸೇರ್ಪಡೆ

ಆರೋಪಿ ದರ್ಶನ್‌ನನ್ನು ಮೈಸೂರಿನಲ್ಲಿ ವಶಕ್ಕೆ ಪಡೆದುಕೊಂಡು, ಬೆಂಗಳೂರಿಗೆ ಕರೆತಂದಿದ್ದ ಇನ್ಸ್‌ಪೆಕ್ಟರ್‌ ಗಿರೀಶ್‌ ನಾಯ್ಕ್‌ ಅವರು ಮತ್ತೆ ತನಿಖಾ ತಂಡವನ್ನು ಸೇರಿಕೊಂಡಿದ್ದು, ತನಿಖೆಗೆ ಬಲ ಬಂದಂತಾಗಿದೆ. ಎಸಿಪಿ ಚಂದನ್‌ ಹಾಗೂ ಗಿರೀಶ್‌ ನಾಯ್ಕ್‌ ಅವರು ದರ್ಶನ್‌ನನ್ನು ಮೈಸೂರಿನಿಂದ ಕರೆತಂದಿದ್ದರು. ಆರಂಭದಲ್ಲಿ ಗಿರೀಶ್‌ ನಾಯ್ಕ್‌ ಅವರೇ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದರು. ಚುನಾವಣೆ ನಿಮಿತ್ತ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿದ್ದರು. ಬಳಿಕ ಮತ್ತೆ ಸಿ.ಕೆ.ಅಚ್ಚುಕಟ್ಟು ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿದ್ದರು.

ಗಿರೀಶ್‌ ನಾಯ್ಕ್‌ ಅವರ ವರ್ಗಾವಣೆ ಹಿನ್ನೆಲೆಯಲ್ಲಿ ಎಸಿಪಿ ಚಂದನ್‌ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಆರೋಪಿಗಳ ಹೆಚ್ಚಿನ ವಿಚಾರಣೆ ಹಿನ್ನೆಲೆಯಲ್ಲಿ ಈಗ ಗಿರೀಶ್‌ ನಾಯ್ಕ್‌ ಅವರನ್ನು ಮತ್ತೆ ಸಹಾಯಕ ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ.

ಇದನ್ನೂ ಓದಿ: Actor Darshan: ದರ್ಶನ್‌ ಗ್ಯಾಂಗ್‌ಗೆ ಮತ್ತೆ 5 ದಿನ ಪೊಲೀಸ್‌ ಕಸ್ಟಡಿ; ಜಡ್ಜ್‌ ಮುಂದೆ ಪವಿತ್ರಾ ಗೌಡ ಕಣ್ಣೀರು!

Continue Reading

ಕ್ರೈಂ

Bribe Case: ಕಸ ಗುಡಿಸುತ್ತಲೇ ಉನ್ನತ ಹುದ್ದೆಗೇರಿದ್ದ ಮಹಿಳೆ ಕಸ ಗುಡಿಸುವವರಿಂದಲೇ ಲಂಚ ಸ್ವೀಕರಿಸುವಾಗ ಬಂಧನ!

ರಾಜ್ಯ ನಾಗರಿಕ ಸೇವಾ ಪರೀಕ್ಷೆ ಬರೆದು ಎಲ್ಲರಿಗೂ ಮಾದರಿಯಾಗಿದ್ದ ಸ್ವೀಪರ್ ಆಶಾ ಕಂದರ ಈಗ ಭಾರೀ ಲಂಚ (Bribe Case) ಪಡೆದು ಉದ್ಯೋಗ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.
ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳವು ಅವರನ್ನು 1.75 ಲಕ್ಷ ರೂಪಾಯಿ ಲಂಚದೊಂದಿಗೆ ಬಂಧಿಸಿದೆ.

VISTARANEWS.COM


on

By

Bribe Case
Koo

ಜೋಧ್‌ಪುರ: ಕೆಲವು ವರ್ಷಗಳ ಹಿಂದೆ ಕಸ ಗುಡಿಸುವ (sweeper) ಕೆಲಸ ಮಾಡುತ್ತಿದ್ದು, ಬಳಿಕ ರಾಜಸ್ಥಾನ (Rajasthan) ಆಡಳಿತ ಸೇವೆ (RAS) ಪರೀಕ್ಷೆಯಲ್ಲಿ (Exam) ಉತ್ತೀರ್ಣರಾಗಿ ಸುದ್ದಿಯಾಗಿದ್ದ ಆಶಾ ಕಂದರ (ಭಾಟಿ) (Asha Kandara) ಈಗ ಮತ್ತೆ ಗಮನ ಸೆಳೆದಿದ್ದಾರೆ. ಆದರೆ ಈ ಬಾರಿ ಅವರು ಸುದ್ದಿಯಾಗಿರುವುದು ಲಂಚ (Bribe Case) ಪಡೆದಿರುವುದರಿಂದ. ಭಾರೀ ಲಂಚ ಪಡೆದು ಉದ್ಯೋಗ ದಂಧೆ ನಡೆಸುತ್ತಿದ್ದ ಆಶಾ ಅವರನ್ನು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (state Anti-Corruption Bureau) ಬಂಧಿಸಿದೆ. ವಿಶೇಷವೆಂದರೆ ಅವರು ಕಸ ಗುಡಿಸುವ ಕೆಲಸ ಕೊಡಿಸುವಾಗಿ ಲಂಚ ಪಡೆದು ಸಿಕ್ಕಿ ಬಿದ್ದಿದ್ದಾರೆ.

ರಾಜ್ಯ ನಾಗರಿಕ ಸೇವಾ ಪರೀಕ್ಷೆ ಬರೆದು ಎಲ್ಲರಿಗೂ ಮಾದರಿಯಾಗಿದ್ದ ಅವರ ಈ ಕ್ರಮಕ್ಕೆ ಸಾಕಷ್ಟು ಟೀಕೆಯೂ ವ್ಯಕ್ತವಾಗಿದೆ. ಜೂನ್ 12ರಂದು ರಾತ್ರಿ ಭ್ರಷ್ಟಾಚಾರ ನಿಗ್ರಹ ದಳವು 1.75 ಲಕ್ಷ ರೂಪಾಯಿ ಲಂಚದೊಂದಿಗೆ ಆಶಾ ಅವರನ್ನು ಬಂಧಿಸಿದೆ ಎಂದು ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳದ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ. ಜೈಪುರದ ಹೆರಿಟೇಜ್ ನಗರ ನಿಗಮದಲ್ಲಿ ಕೆಲಸ ಮಾಡುತ್ತಿರುವ ಆಶಾ ಅವರು ಸ್ವೀಪರ್ ನೇಮಕಾತಿಗೆ ಬದಲಾಗಿ ಲಂಚ ಸ್ವೀಕರಿಸುತ್ತಿದ್ದಾರೆ ಎಂಬ ಮಾಹಿತಿ ಎಸಿಬಿಗೆ ಲಭಿಸಿದ್ದರಿಂದ ಅವರನ್ನು ಬಂಧಿಸಲಾಗಿದೆ.


ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಪ್ರಕಾರ, ಆಶಾ ಅವರು ಜೂನ್ 11ರಂದು ರಾತ್ರಿ ಜೈಪುರದಿಂದ ಪಾಲಿಗೆ ಹೊರಟರು. ಆದರೆ ಅವರ ಮಗ ಹಣದೊಂದಿಗೆ ಜೈತರನ್‌ಗೆ ಬಂದಿದ್ದು, ಈತನೊಂದಿಗೆ ಯೋಗೇಂದ್ರ ಚೌಧರಿ ಎಂಬ ಬ್ರೋಕರ್ ಕೂಡ ಇದ್ದರು. ಜೈತರನ್ ಬಾರ್‌ನ ಹೃದಯಭಾಗದಲ್ಲಿರುವ ಹೊಟೇಲ್ ವೊಂದರಲ್ಲಿ ಇಬ್ಬರೂ ತಂಗಿದ್ದರು.
ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಎಸಿಬಿ ಇನ್ಸ್‌ಪೆಕ್ಟರ್ ಕಾಂಚನ್ ಭಾಟಿ ಅವರು 1.75 ಲಕ್ಷ ರೂ. ನಗದು ಹಣದೊಂದಿಗೆ ಆಶಾ ಅವರನ್ನು ಬಂಧಿಸಲಾಗಿದೆ. ಅವರು ಮೂರೂವರೆ ಲಕ್ಷಕ್ಕೆ ಉದ್ಯೋಗ ಒಪ್ಪಂದ ಮಾಡಿಕೊಂಡಿರುವುದಾಗಿ ಎಸಿಪಿ ತಿಳಿಸಿದ್ದಾರೆ.

ಇದನ್ನೂ ಓದಿ: Anekal News : ಯುವತಿ ಕೈ ಬಲಿ ಪಡೆದ ಅಕ್ರಮ ಡ್ರೈ ಕ್ಲೀನಿಂಗ್ ಕಾರ್ಖಾನೆ; ಚಿಕಿತ್ಸೆ ಕೊಡಿಸದೆ ಮಾಲೀಕ ಎಸ್ಕೇಪ್‌

ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ಆಶಾ 2018ರಲ್ಲಿ ಪ್ರಮುಖ ಆರ್‌ಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅನಂತರ ಸುದ್ದಿಯಾಗಿದ್ದರು. 2021ರಲ್ಲಿ ಪರೀಕ್ಷೆ ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಒಂಟಿ ತಾಯಿಯಾದ ಆಶಾ ಅವರು ಐಎಎಸ್ ಪರೀಕ್ಷೆಗಳಿಗೆ ತಯಾರಾಗುವುದಾಗಿ ಹೇಳಿದ್ದರು.

ವಿದ್ಯುತ್ ಶಾಕ್ ನಿಂದ ಬಾಲಕ ಸಾವು

ವಿದ್ಯುತ್ ಶಾಕ್‌ನಿಂದ 7ನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ. ಆಕಾಶ್ (13) ಮೃತ ದುರ್ದೈವಿ.

ಕಡೂರು ತಾಲೂಕಿನ ಕುಪ್ಪಾಳು ಗ್ರಾಮದ ಮೊರಾರ್ಜಿ ವಸತಿ ಶಾಲೆ ಆವರಣದ ನೇರಳೆ ಮರದಲ್ಲಿ ಹಣ್ಣು ಕೀಳಲು ಆಕಾಶ್ ಮರ ಹತ್ತಿದ್ದ. ಈತನ ಜತೆಗೆ ಮೂವರು ವಿದ್ಯಾರ್ಥಿಗಳು ಮರ ಹತ್ತಿದ್ದರು. ಹಣ್ಣು ಕೀಳುವಾಗ ಆಕಾಶ್‌ ಮರದಿಂದ ಜಾರಿ ಬೀಳುತ್ತಿದ್ದ. ಈ ವೇಳೆ ಅಚಾನಕ್‌ ಆಗಿ ವಿದ್ಯುತ್ ತಂತಿ ಹಿಡಿದಿದ್ದಾನೆ. ಇದರಿಂದ ಕರೆಂಟ್‌ ಶಾಕ್‌ ಆಗಿ ಆತ ಕೆಳಗೆ ಬಿದ್ದಿದ್ದಾನೆ.

ಕೂಡಲೇ ಅಲ್ಲಿದ್ದವರು ಆಕಾಶ್‌ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕಾಶ್ ಮೃತಪಟ್ಟಿದ್ದಾನೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಪ್ರಮುಖ ಸುದ್ದಿ

Sapthami Gowda: ಯುವ ಪತ್ನಿ ವಿರುದ್ಧ ಸಪ್ತಮಿಗೌಡ ಮಾನಹಾನಿ ಕೇಸ್; ನಟಿ ಹೆಸರು ಎಲ್ಲಿಯೂ ಬಳಸದಂತೆ ಕೋರ್ಟ್ ಆದೇಶ

Sapthami Gowda: ವಕೀಲ ಶಂಕರಪ್ಪ ಅವರ ಮೂಲಕ ನಟಿ ಸಪ್ತಮಿಗೌಡ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಈಗ ಮಾಡಿರುವ ಆರೋಪಗಳಿಂದ ಉಂಟಾದ ಮಾನಹಾನಿ ಸಂಬಂಧ ಶ್ರೀದೇವಿಗೆ ನೋಟಿಸ್ ನೀಡಿದ್ದು, 10 ಕೋಟಿ ಪರಿಹಾರ ನೀಡುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

VISTARANEWS.COM


on

Sapthami Gowda
Koo

ಬೆಂಗಳೂರು: ನಟ ಯುವ ರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಬೈರಪ್ಪ ವಿರುದ್ಧ ನಟಿ ಸಪ್ತಮಿ ಗೌಡ ಮಾನಹಾನಿ ಕೇಸ್ ದಾಖಲಿಸಿದ್ದಾರೆ. ವಕೀಲ ಶಂಕರಪ್ಪ ಅವರ ಮೂಲಕ ನಟಿ (Sapthami Gowda) ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ನಟಿ ಹೆಸರು ಎಲ್ಲಿಯೂ ಬಳಸದಂತೆ ಕೋರ್ಟ್ ಆದೇಶ ನೀಡಿದೆ.

ಯುವ ಮತ್ತು ಶ್ರೀದೇವಿ ಬೈರಪ್ಪ ನಡುವಿನ ಆರೋಪ-ಪ್ರತ್ಯಾರೋಪಗಳಲ್ಲಿ ಸಪ್ತಮಿಗೌಡ ಹೆಸರು ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ತನ್ನ ವೃತ್ತಿ ಜೀವನದ ಪರಿಣಾಮ ಬೀರಲಿದೆ ಎಂದು ಸಪ್ತಮಿ ಗೌಡ ಮಾನಹಾನಿ ಕೇಸ್ ದಾಖಲಿಸಿದ್ದಾರೆ. ಹೀಗಾಗಿ ಇನ್ಮುಂದೆ ನಟಿಯ ಬಗ್ಗೆ ಎಲ್ಲಿಯೂ ಮಾತನಾಡದಂತೆ ಲೀಗಲ್ ನೋಟಿಸ್ ನೀಡಲಾಗಿದೆ ಹಾಗೂ ಈಗ ಮಾಡಿರುವ ಆರೋಪಗಳಿಂದ ಉಂಟಾದ ಮಾನಹಾನಿ ಸಂಬಂಧ ಶ್ರೀದೇವಿಗೆ ನೋಟಿಸ್ ನೀಡಿದ್ದು, 10 ಕೋಟಿ ರೂ. ಪರಿಹಾರ ನೀಡುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದೇ ವೇಳೆ ನಟಿ ಸಪ್ತಮಿಗೌಡ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸದಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಸಿಟಿ ಸಿವಿಲ್ ಕೋರ್ಟ್, ನಟಿ ಹೆಸರು ಎಲ್ಲಿಯೂ ಬಳಸದಂತೆ ಕೋರ್ಟ್ ಆದೇಶ ನೀಡಿದೆ.

ಇದನ್ನೂ ಓದಿ | Yuva Rajkumar: ‘ಅನೈತಿಕ ಸಂಬಂಧ’ ಎಂದು ಯುವ ಪರ ವಕೀಲ ಆರೋಪ; ತಿರುಗೇಟು ಕೊಟ್ಟ ಶ್ರೀದೇವಿ!

ಡಾ.ರಾಜ್‌ಕುಮಾರ್‌ ವಂಶದ ಕುಡಿ, ನಟ ಯುವ ರಾಜ್‌ಕುಮಾರ್‌ (Yuva Rajkumar) ಅವರು ಪತ್ನಿ ಶ್ರೀದೇವಿ ಭೈರಪ್ಪ (Sridevi Byrappa) ಅವರಿಗೆ ಡಿವೋರ್ಸ್ ನೋಟಿಸ್‌ ನೀಡಿದ ಬಳಿಕ ಇಬ್ಬರ ನಡುವಿನ ಆರೋಪ- ಪ್ರತ್ಯಾರೋಪಗಳು ಜಾಸ್ತಿಯಾಗಿವೆ. ಅದರಲ್ಲೂ, ಅನೈತಿಕ ಸಂಬಂಧಗಳ ಆರೋಪಗಳು ಇನ್ನೂ ಹೆಚ್ಚಾಗಿವೆ. “ಶ್ರೀದೇವಿ ಭೈರಪ್ಪ ಅವರು ರಾಧಯ್ಯ ಎಂಬ ವ್ಯಕ್ತಿ ಜತೆ ಅನೈತಿಕ ಸಂಬಂಧ ಹೊಂದಿದ್ದಾರೆ” ಎಂಬುದಾಗಿ ಯುವ ರಾಜ್‌ಕುಮಾರ್‌ ಪರ ವಕೀಲ ಸಿರಿಲ್‌ ಪ್ರಸಾದ್‌ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದರು. ಇನ್ನು, ನಟನ ಲೀಗಲ್‌ ನೋಟಿಸ್‌ಗೆ ಉತ್ತರಿಸಿದ್ದ ಶ್ರೀದೇವಿ ಭೈರಪ್ಪ, “ಯುವ ರಾಜ್‌ಕುಮಾರ್‌ ನಟಿ ಸಪ್ತಮಿ ಗೌಡ (Sapthami Gowda) ಜತೆ ಸಂಬಂಧ ಹೊಂದಿದ್ದಾರೆ” ಎಂಬುದಾಗಿ ಆರೋಪಿಸಿದ್ದರು. ಆ ಮೂಲಕ ಡಿವೋರ್ಸ್‌ ಪ್ರಕರಣವು ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿತ್ತು

ನಟ ಯುವ ರಾಜ್‌ಕುಮಾರ್‌ ಕಳುಹಿಸಿದ ಲೀಗಲ್‌ ನೋಟಿಸ್‌ಗೆ ಮರುತ್ತರ ನೀಡಿದ್ದ ಶ್ರೀದೇವಿ ಭೈರಪ್ಪ, ಹಲವು ಆರೋಪಗಳನ್ನು ಮಾಡಿದ್ದರು. “ಸಪ್ತಮಿ ಗೌಡ ಜತೆಗೆ ಯುವ ರಾಜ್‌ಕುಮಾರ್‌ ಒಂದು ವರ್ಷದಿಂದ ಸಂಬಂಧ ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ನನ್ನನ್ನು ಮನೆಯಿಂದ ಹೊರಹಾಕಲು ಪ್ರಯತ್ನಿಸಿದರು. ಪ್ರೀತಿಸಿ ಮದುವೆಯಾದ ಯುವ ರಾಜ್‌ಕುಮಾರ್‌, ಬಳಿಕ ಸಪ್ತಮಿ ಗೌಡ ಹಿಂದೆ ಬಿದ್ದಿದ್ದಾರೆ” ಎಂಬುದಾಗಿ ಶ್ರೀದೇವಿ ಭೈರಪ್ಪ ಆರೋಪಿಸಿದ್ದರು.

ಇದನ್ನೂ ಓದಿ | Sapthami Gowda: ಲವ್‌ ಬ್ರೇಕಪ್‌ ಆಗಿದೆ, ಬಾಯ್‌ಫ್ರೆಂಡ್‌ ನನ್ನ ಜತೆ ಇಲ್ಲ ಎಂದ ಸಪ್ತಮಿ ಗೌಡ!

“ನಾನು ಹಾಗೂ ಯುವ ರಾಜ್‌ಕುಮಾರ್‌ 5 ವರ್ಷ ಪ್ರೀತಿಸಿದ್ದೆವು. 2019ರಲ್ಲಿ ಹಿಂದು ಸಂಪ್ರದಾಯದಂತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಮಾಡಿಕೊಂಡೆವು. ಮದುವೆಗೂ ಮುಂಚೆ ಯುವ ರಾಜ್‌ಕುಮಾರ್‌ ನಿರುದ್ಯೋಗಿ ಆಗಿದ್ದರು. ಅವರಿಗೆ ಕರಿಯರ್‌ ಬಗ್ಗೆ ಫೋಕಸ್‌ ಇರಲಿಲ್ಲ. ಅವರ ಕುಟುಂಬವು ಕೂಡ ಆರ್ಥಿಕವಾಗಿ ಸ್ಟೇಬಲ್‌ ಇರಲಿಲ್ಲ. ಇದಾದ ಬಳಿಕ ಯುವ ರಾಜ್‌ಕುಮಾರ್‌ ಸಪ್ತಮಿ ಗೌಡ ಹಿಂದೆ ಬಿದ್ದರು. ನಟಿಯನ್ನು ಮನೆಗೆ ಕರೆದುಕೊಂಡು ಬರುತ್ತಿದ್ದರು. ಸಪ್ತಮಿ ಗೌಡ ಜತೆ ಹೋಟೆಲ್‌ನಲ್ಲಿ ಇರುವಾಗಲೇ ಯುವ ಸಿಕ್ಕಿಬಿದ್ದಿದ್ದರು. ಸಂಬಂಧ ಗೊತ್ತಾದ ಮೇಲೆ ನನ್ನ ಮೇಲೆ ಆರೋಪ ಮಾಡಲು ಶುರುವಿಟ್ಟುಕೊಂಡರು” ಎಂಬುದಾಗಿ ಶ್ರೀದೇವಿ ಆರೋಪಿಸಿದ್ದರು. ಹೀಗಾಗಿ ಇದೀಗ ದಂಪತಿ ನಡುವಿನ ವಿವಾದದಲ್ಲಿ ತಮ್ಮ ಹೆಸರನ್ನು ತರದಂತೆ ಸಪ್ತಮಿ ಗೌಡ ನೋಟಿಸ್‌ ನೀಡಿದ್ದಾರೆ.

Continue Reading
Advertisement
Actor Darshan ACP Chandan Kumar work salute by people
ಕ್ರೈಂ9 mins ago

Actor Darshan: ದರ್ಶನ್‌ ಬಂಧಿಸಿದ ಎಸಿಪಿ ಚಂದನ್ ಕುಮಾರ್‌ ಕೆಲಸಕ್ಕೆ ಸೆಲ್ಯೂಟ್‌ ಎಂದ ಗ್ರಾಮಸ್ಥರು!

Euro 2024
ಕ್ರೀಡೆ18 mins ago

Euro 2024: ಕ್ರೊವೇಷಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಸ್ಪೇನ್

Bihar Women
ದೇಶ21 mins ago

ರಾಹುಲ್‌ ಗಾಂಧಿ ‘ಟಕಾ ಟಕ್’‌ 1 ಲಕ್ಷ ರೂ.ಗಾಗಿ ಬ್ಯಾಂಕ್‌ಗೆ ನುಗ್ಗಿದ ನೂರಾರು ಸ್ತ್ರೀಯರು; ಬಳಿಕ ಆಗಿದ್ದೇನು?

Kalaburagi News
ಕರ್ನಾಟಕ42 mins ago

Kalaburagi News: ಕಲಬುರಗಿಯಲ್ಲಿ ಲಾರಿಗೆ ಕಾರು ಡಿಕ್ಕಿಯಾಗಿ ಇಬ್ಬರ ಸಾವು; ಮತ್ತೊಬ್ಬನ ಸ್ಥಿತಿ ಗಂಭೀರ

Mohan Bhagwat
ದೇಶ47 mins ago

Mohan Bhagwat: ಎರಡು ಸುತ್ತಿನ ರಹಸ್ಯ ಸಭೆ ನಡೆಸಿದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್-ಯೋಗಿ ಆದಿತ್ಯನಾಥ್‌

Actor Darshan
ಕರ್ನಾಟಕ1 hour ago

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್;‌ ಮೊಬೈಲ್‌ ಪಾಸ್‌ವರ್ಡ್‌ ನೀಡಲು ದರ್ಶನ್‌ & ಗ್ಯಾಂಗ್‌ ತಕರಾರು!

Apple With sticker
Latest1 hour ago

Apple With sticker: ಸೇಬು ಹಣ್ಣುಗಳ ಮೇಲೆ ಸ್ಟಿಕ್ಕರ್; ಏನಿದರ ಹಿಂದಿರುವ ರಹಸ್ಯ?

Viral News
Latest1 hour ago

Viral News: ಮುಖಕ್ಕೆ ಎಂಜಲು ಉಗಿದು ಫೇಸ್ ಮಸಾಜ್ ಮಾಡಿದ ಅಮ್ಜದ್ ಅರೆಸ್ಟ್!

Viral Video
Latest2 hours ago

Viral Video: ನಾಯಿ ಜತೆ ವಾಕಿಂಗ್ ನೋಡಿರುತ್ತೀರಿ, ಹುಲಿ ಜತೆ? ಈ ವಿಡಿಯೊ ನೋಡಿ!

Health Tips
Latest2 hours ago

Health Tips: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ19 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ5 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌