Site icon Vistara News

ಪ್ರೇಯಸಿಯನ್ನು ಕೊಂದು, ಆಕೆಯ ಶವದ ಫೋಟೊ ವಾಟ್ಸ್‌ಆ್ಯಪ್ ಸ್ಟೇಟಸ್‌ ಇಟ್ಟ ಯುವಕ

Man Kills Girlfriend

Man kills girlfriend, posts picture of body as WhatsApp status In Chennai

ಚೆನ್ನೈ: ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಾಗ, ಮನೆಯಲ್ಲಿ ಯಾವುದೇ ಸಂಭ್ರಮದ ಕಾರ್ಯಕ್ರಮಗಳು ನಡೆದಾಗ, ತುಂಬ ದಿನಗಳ ಬಳಿಕ ಗೆಳೆಯ ಅಥವಾ ಗೆಳತಿ ಸಿಕ್ಕಾಗ, ಗೆಳೆಯ, ಗೆಳತಿ ಸೇರಿ ಆತ್ಮೀಯರ ಬರ್ತ್‌ಡೇ ಇದ್ದಾಗ ಅವರ ಫೋಟೊಗಳನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಅಪ್‌ಡೇಟ್‌ (WhatsApp Status) ಮಾಡುತ್ತೇವೆ. ವಿಶೇಷ ತಿನಿಸು ತಿಂದ ಖುಷಿಯನ್ನೂ ವಾಟ್ಸ್‌ಆ್ಯಪ್ ಸ್ಟೇಟಸ್‌ ಮೂಲಕ ಹಂಚಿಕೊಳ್ಳುವವರು ಇದ್ದಾರೆ. ಆದರೆ, ತಮಿಳುನಾಡಿನಲ್ಲಿ (Tamil Nadu) ವ್ಯಕ್ತಿಯೊಬ್ಬ, ತನ್ನ ಪ್ರಿಯತಮೆಯನ್ನು ಕೊಂದು, ಆಕೆಯ ಶವದ ಫೋಟೊವನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಅಪ್‌ಡೇಟ್‌ ಮಾಡುವ ಮೂಲಕ ವಿಕೃತಿ ಮೆರೆದಿದ್ದಾನೆ.

ಹೌದು, ತಮಿಳುನಾಡಿನ ಚೆನ್ನೈನಲ್ಲಿ 20 ವರ್ಷದ ಆಶಿಕ್‌ ಎಂಬ ಯುವಕನು ತನ್ನ ಪ್ರೇಯಸಿಯನ್ನು ಕೊಲೆ ಮಾಡಿದ್ದಾನೆ. ಹೋಟೆಲ್‌ನಲ್ಲಿ ಆಕೆಯನ್ನು ಕೊಂದ ಬಳಿಕ, ಶವದ ಫೋಟೊವನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ ಇಟ್ಟಿದ್ದಾನೆ. ಯುವತಿಯ ಗೆಳೆತಿಯರು ವಾಟ್ಸ್‌ಆ್ಯಪ್ ಸ್ಟೇಟಸ್‌ ನೋಡಿ, ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಹೋಟೆಲ್‌ಗೆ ತೆರಳಿ ಪರಿಶೀಲನೆ ನಡೆಸಿದಾಗ ಆಕೆಯ ಶವ ಪತ್ತೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರು ಆಶಿಕ್‌ನನ್ನು ಬಂಧಿಸಿದ್ದಾರೆ.

Accident

ಹೋಟೆಲ್‌ನಲ್ಲಿ ನಡೆದಿದ್ದೇನು?

ದ್ವಿತೀಯ ವರ್ಷದ ನರ್ಸಿಂಗ್‌ ಅಧ್ಯಯನ ಮಾಡುತ್ತಿರುವ ಯುವತಿ ಹಾಗೂ ಆಶಿಕ್‌ ಕೆಲ ತಿಂಗಳಿಂದ ಪ್ರೀತಿಸುತ್ತಿದ್ದರು. ಕಳೆದ ಮೂರು ದಿನಗಳಿಂದ ಕಾಲೇಜಿಗೆ ಹೋಗದ ಯುವತಿಯು ಆಶಿಕ್‌ ಜತೆ ಹೋಟೆಲ್‌ನಲ್ಲಿ ತಂಗಿದ್ದಳು. ಯುವತಿಯ ಗೆಳತಿಯರು ಗಾಬರಿಗೊಂಡು ಪರಿಶೀಲಿಸಿದಾಗ, ಆಕೆ ಆಶಿಕ್‌ ಜತೆ ಚೆನ್ನೈ ಹೋಟೆಲ್‌ನಲ್ಲಿರುವುದು ಗೊತ್ತಾಗಿತ್ತು. ಬಾಯ್‌ಫ್ರೆಂಡ್‌ ಜತೆ ಇದ್ದಾಳೆ ಎಂದು ಅವರೂ ಸುಮ್ಮನಾಗಿದ್ದರು. ಆದರೆ, ಆಶಿಕ್‌ ಹೋಟೆಲ್‌ನಲ್ಲಿ ಯುವತಿಯನ್ನು ಕೊಲೆ ಮಾಡಿದ್ದಾನೆ. ಯಾವಾಗ ಯುವತಿಯ ಶವದ ಫೋಟೊ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಕಾಣಿಸಿತೋ, ಯುವತಿಯರು ಗಾಬರಿಗೊಂಡಿದ್ದಾರೆ.

ಇದನ್ನೂ ಓದಿ: Murder Case : ಪ್ರೇಯಸಿಯ ಕತ್ತು ಸೀಳಿದ ಪ್ರೇಮಿ; 4 ವರ್ಷದ ಪ್ರೀತಿ ಕೊಲೆಯಲ್ಲಿ ಅಂತ್ಯ

ಆಶಿಕ್‌ ಹೇಳುವುದೇನು?

ಹೋಟೆಲ್‌ನಲ್ಲಿ ಯುವತಿ ಜತೆ ಜಗಳ ನಡೆದಿದ್ದು, ಕೋಪದಲ್ಲಿ ಕೊಲೆ ಮಾಡಿದೆ ಎಂಬುದಾಗಿ ಬಂಧಿತ ಆಶಿಕ್‌ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. “ನಾನು ಬೇರೊಂದು ಯುವತಿ ಜತೆ ಸಂಬಂಧ ಇಟ್ಟುಕೊಂಡಿದ್ದೇನೆ ಎಂದು ಆಕೆ ಆರೋಪಿಸಿದಳು. ಇದೇ ವೇಳೆ ಇಬ್ಬರ ಮಧ್ಯೆ ಜಗಳ ನಡೆಯಿತು. ಆಗ ನಾನು ಟಿ ಶರ್ಟ್‌ನಿಂದ ಆಕೆಯ ಕತ್ತು ಹಿಸುಕಿದೆ” ಎಂಬುದಾಗಿ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version