Site icon Vistara News

Live In Partner: ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಯ ಹತ್ಯೆಗೈದ ವ್ಯಕ್ತಿ

Live In Partner

#image_title

ಮುಂಬೈ: ದೆಹಲಿಯ ನಜಾಫ್‌ಗಢದಲ್ಲಿ ಯುವಕನೊಬ್ಬ ತನ್ನ ಪ್ರಿಯತಮೆಯನ್ನೇ ಕೊಂದು, ತನ್ನದೇ ಡಾಬಾದ ಫ್ರಿಡ್ಜ್‌ನಲ್ಲಿ ಇಟ್ಟ ಪ್ರಕರಣ ಸುದ್ದಿಯಾದ ಬೆನ್ನಲ್ಲೇ ಮಹಾರಾಷ್ಟ್ರದಲ್ಲೂ ವ್ಯಕ್ತಿಯೊಬ್ಬ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಯನ್ನು (Live In Partner) ಕೊಂದು ಬೆಡ್‌ ಬಾಕ್ಸ್‌ನಲ್ಲಿ ಇಟ್ಟ ಪ್ರಕರಣ ಬಹಿರಂಗವಾಗಿದೆ.

ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯ ನಳಸೋಪರದ ಅಪಾರ್ಟ್‌ಮೆಂಟ್‌ನಲ್ಲಿ ೨೭ ವರ್ಷದ ಹಾರ್ದಿಕ್‌ ಶಾ, ೩೫ ವರ್ಷದ ಮೇಘಾ ಧನ್‌ ಸಿಂಗ್‌ ಜತೆ ವಾಸಿಸುತ್ತಿದ್ದರು. ರಿಯಲ್‌ ಎಸ್ಟೇಟ್‌ ಏಜೆಂಟ್‌, ನೆರೆಹೊರೆಯವರು ಸೇರಿ ಎಲ್ಲರಿಗೂ ತಾವಿಬ್ಬರೂ ಮದುವೆಯಾಗಿದ್ದೇವೆ ಎಂದೇ ಹೇಳಿದ್ದರು. ಆದರೆ, ಇವರಿದ್ದ ಫ್ಲ್ಯಾಟ್‌ನಿಂದ ದುರ್ವಾಸನೆ ಹೊರಬಂದ ಕಾರಣ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ನೋಡಿದಾಗ ಬೆಡ್‌ ಬಾಕ್ಸ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಈ ಕುರಿತು ತುಳಿಂಜ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಾರ್ಟ್‌ಮೆಂಟ್‌ಗೆ ಬಂದು ಪರಿಶೀಲನೆ ನಡೆಸಿದಾಗ ಮಹಿಳೆ ಶವ ಪತ್ತೆಯಾಗಿದೆ. ಒಂದು ವಾರದ ಹಿಂದೆ ಕೊಲೆ ಮಾಡಿರುವ ಸಾಧ್ಯತೆ ಇದೆ. ಸದ್ಯ, ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ತಿಂಗಳ ಹಿಂದೆ ದೆಹಲಿಯಲ್ಲೂ ಅಫ್ತಾಬ್‌ ಪೂನಾವಾಲಾ ಎಂಬಾತನು ಇವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಶ್ರದ್ಧಾ ವಾಳ್ಕರ್‌ಳನ್ನು ೩೫ ತುಂಡು ಮಾಡಿ, ಫ್ರಿಡ್ಜ್‌ನಲ್ಲಿ ಇರಿಸಿದ್ದ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು.

ಇದನ್ನೂ ಓದಿ: ಡಾಬಾದ ಫ್ರಿಡ್ಜ್‌ನಲ್ಲಿ ಗೆಳತಿಯ ಶವ ಇಟ್ಟು, ಕೆಲವೇ ಗಂಟೆಯಲ್ಲಿ ಮತ್ತೊಬ್ಬಳನ್ನು ಮದುವೆಯಾದ ಸಾಹಿಲ್‌ ಗೆಹ್ಲೋಟ್

Exit mobile version