Site icon Vistara News

Masturbation Case: ಮೆಟ್ರೊ ನಿಲ್ದಾಣದಲ್ಲಿ ಮಹಿಳೆ ಎದುರು ಹಸ್ತಮೈಥುನ ಮಾಡಿಕೊಂಡವನ ಸೆರೆ ಹಿಡಿದ ಸಿಸಿಟಿವಿ!

Delhi Metro Station

Man Masturbates In Front Of Woman At Delhi Metro Station, CCTV Leads To Arrest

ನವದೆಹಲಿ: ರಾಷ್ಟ್ರ ರಾಜಧಾನಿಯ ಮೆಟ್ರೊ ನಿಲ್ದಾಣದಲ್ಲಿ (Delhi Metro Station) ವ್ಯಕ್ತಿಯೊಬ್ಬ ಮಹಿಳೆಯ ಎದುರೇ ಹಸ್ತಮೈಥುನ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಆಗಸ್ಟ್‌ 7ರಂದು ದೆಹಲಿಯ ಮಂಡಿ ಹೌಸ್‌ ಮೆಟ್ರೊ ನಿಲ್ದಾಣದಲ್ಲಿ 23 ವರ್ಷದ ಮಹಿಳೆ ಎದುರು ದುರುಳನು ಹಸ್ತಮೈಥುನ (Masturbation Case) ಮಾಡಿಕೊಂಡಿದ್ದು, ವ್ಯಕ್ತಿ ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಬಳಿಕ ಸಾರ್ವಜನಿಕ ಸ್ಥಾನದಲ್ಲಿ ಅನುಚಿತವಾಗಿ ವರ್ತಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಬಂಧಿತನನ್ನು ಶಿವಂ ಶರ್ಮಾ ಎಂದು ಗುರುತಿಸಲಾಗಿದೆ. ಔಷಧಗಳ ಕಂಪನಿಯೊಂದರ ಮಾರ್ಕೆಟಿಂಗ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿರುವ ಈತ ಮಹಿಳೆ ಎದುರು ಹಸ್ತಮೈಥುನ ಮಾಡಿಕೊಂಡಿದ್ದಾನೆ. ಕೂಡಲೇ ಮಹಿಳೆಯು ದೇಶದ ಮೆಟ್ರೊ ನಿಲ್ದಾಣಗಳ ಭದ್ರತೆಯ ಉಸ್ತುವಾರಿ ಹೊತ್ತಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF)ಗೆ ದೂರು ನೀಡಿದ್ದಾರೆ.

“ತುಘಲಕಾಬಾದ್‌ ಮೆಟ್ರೋ ಸ್ಟೇಷನ್‌ನಿಂದ ಬಂದ ನಾನು ಮಂಡಿ ಹೌಸ್‌ ಸ್ಟೇಷನ್‌ನಲ್ಲಿ ಇಳಿದು ಫ್ರೆಂಡ್‌ಗಾಗಿ ಕಾಯುತ್ತಿದ್ದೆ. ಇದೇ ವೇಳೆ ಶಿವಂ ಶರ್ಮಾ ಪ್ಲಾಟ್‌ಫಾರ್ಮ್‌ನಲ್ಲಿ ನನ್ನೆದುರು ನಿಂತು ಹಸ್ತಮೈಥುನ ಮಾಡಿಕೊಂಡಿದ್ದಾನೆ” ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅದರಂತೆ, ಮೆಟ್ರೊ ಪ್ಲಾಟ್‌ಫಾರ್ಮ್‌, ಸ್ಟೇಷನ್‌ ಪ್ರವೇಶಿಸುವಾಗ ಅಳವಡಿಸಲಾದ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿ ಶಿವಂ ಶರ್ಮಾನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Viral Video: ‘ಬಾಯಿ ಮುಚ್ಚೆ ಸಾಕು’, ಮೆಟ್ರೊದಲ್ಲಿ ಇಬ್ಬರು ನಾರಿಯರ ಜಗಳ; ವಾಗ್ವಾದದಲ್ಲಿ ಗೆದ್ದಿದ್ದು ಯಾರು?

ಇತ್ತೀಚಿನ ವೈರಲ್‌ ವಿಡಿಯೊ

ಕೆಲ ತಿಂಗಳಿಂದ ದೆಹಲಿ ಮೆಟ್ರೊಗಳಲ್ಲಿ ಹತ್ತಾರು ಚಟುವಟಿಕೆಗಳು ನಡೆಯುತ್ತಿವೆ. ಇತ್ತೀಚೆಗೆ ಹೆಣ್ಣುಮಕ್ಕಳು ಜೋರಾಗಿ ಜಗಳವಾಡಿದ, ಪುರುಷರು ಗಲಾಟೆ ಮಾಡಿದ, ಚಲಿಸುತ್ತಿದ್ದ ರೈಲಿನಲ್ಲೇ ಯುವಕನೊಬ್ಬ ಹಸ್ತಮೈಥುನ ಮಾಡಿಕೊಂಡ, ಯುವತಿಯೊಬ್ಬಳು ಹೇರ್‌ ಡ್ರೈ ಮಾಡಿಕೊಂಡ, ಮತ್ತೊಬ್ಬ ಯುವತಿಯು ಡಾನ್ಸ್‌ ಮಾಡಿದ ವಿಡಿಯೊಗಳು ವೈರಲ್‌ ಆಗಿದ್ದವು. ಕೆಲವೇ ದಿನಗಳ ಹಿಂದೆ ಯುವಕ-ಯುವತಿಯು ಲಿಪ್‌ಲಾಕ್‌ ಮಾಡಿದ್ದ ವಿಡಿಯೊ ಕೂಡ ಭಾರಿ ವೈರಲ್‌ ಆಗಿತ್ತು.

Exit mobile version