Site icon Vistara News

Body In Suitcase | ಫ್ರಿಡ್ಜ್‌ ಆಯ್ತು, ಮೆಡಿಕಲ್‌ ಶಾಪ್‌ ಆಯ್ತು, ಈಗ ಸೂಟ್‌ಕೇಸ್‌ನಲ್ಲಿ ಮಹಿಳೆ ಶವ ಪತ್ತೆ, ತಂದೆ-ತಾಯಿ ಬಂಧನ

Aayushi chaudhary murder Case

ಲಖನೌ: ದೆಹಲಿಯಲ್ಲಿ ಪ್ರೀತಿಸಿದ ಯುವತಿಯನ್ನು ಕೊಂದು, ಆಕೆಯ ದೇಹವನ್ನು ತುಂಡು ತುಂಡು ಮಾಡಿ ಫ್ರಿಡ್ಜ್‌ನಲ್ಲಿಟ್ಟಿದ್ದ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದೆ. ಛತ್ತೀಸ್‌ಗಢದಲ್ಲಿ ಯುವಕನೊಬ್ಬ ಪ್ರಿಯತಮೆಯನ್ನು ಕೊಂದು ನಾಲ್ಕು ದಿನ ಮೆಡಿಕಲ್‌ ಶಾಪ್‌ನಲ್ಲಿಟ್ಟ ಸುದ್ದಿಯೂ ಭೀತಿ ಹುಟ್ಟಿಸಿದೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ 22 ವರ್ಷದ ಮಹಿಳೆಯ (Aayushi Chaudhary Murder) ಶವವೊಂದು ಸೂಟ್‌ಕೇಸ್‌ನಲ್ಲಿ (Body In Suitcase) ಪತ್ತೆಯಾಗಿದೆ.

ಮಥುರಾ ಬಳಿಯ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಸೂಟ್‌ಕೇಸ್‌ ಒಂದು ಪತ್ತೆಯಾಗಿದ್ದು, ಅದರಲ್ಲಿ ಆಯುಷಿ ಚೌಧರಿ ಎಂಬ ಮಹಿಳೆಯ ಶವ ಪತ್ತೆಯಾಗಿದೆ. ಇದಾದ ಬಳಿಕ ಪೊಲೀಸರು ಮೊಬೈಲ್‌ ಟ್ರೇಸಿಂಗ್‌ ಸೇರಿ ಹಲವು ರೀತಿ ತನಿಖೆ ನಡೆಸಿದಾಗ ಯುವತಿಯ ತಂದೆಯೇ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈಗ ಆಕೆಯ ತಂದೆ ಹಾಗೂ ತಾಯಿಯನ್ನು ಬಂಧಿಸಲಾಗಿದೆ.

ಬೇರೆ ಜಾತಿಯ ಯುವಕನನ್ನು ಆಯುಷಿ ಮದುವೆಯಾದಳು ಹಾಗೂ ತಡರಾತ್ರಿವರೆಗೆ ಹೊರಗಡೆಯೇ ಸುತ್ತುತ್ತಿದ್ದಳು ಎಂಬ ಕಾರಣಕ್ಕಾಗಿ ಆಕೆಯ ತಂದೆ ನಿತೇಶ್‌ ಯಾದವ್‌ ಗುಂಡು ಹಾರಿಸಿಕೊಂಡಿದ್ದಾರೆ. ಇದು ಆಯುಷಿಯ ತಾಯಿ ಹಾಗೂ ಸಹೋದರನಿಗೆ ಗೊತ್ತಿತ್ತು ಮತ್ತು ಮಗಳ ಶವವನ್ನೇ ಸಾಗಿಸಲು ತಾಯಿ ಸಹಾಯ ಮಾಡಿದ್ದಾಳೆ” ಎಂದು ಎಸ್‌ಪಿ ಮಾರ್ತಾಂಡ ಪ್ರಕಾಶ್‌ ಸಿಂಗ್‌ ತಿಳಿಸಿದ್ದಾರೆ.

ಇದನ್ನೂ ಓದಿ | Ex Girlfriend Murder | ಉತ್ತರ ಪ್ರದೇಶದಲ್ಲಿ ಮಾಜಿ ಪ್ರೇಯಸಿಯ ದೇಹ ತುಂಡರಿಸಿ ಹತ್ಯೆಗೈದವನಿಗೆ ಗುಂಡು

Exit mobile version