Site icon Vistara News

Harangi Backwater: ಹಾರಂಗಿ ಹಿನ್ನೀರಲ್ಲಿ ಈಜಲು ಹೋದವನು ಮೀನಿನ ಬಲೆಗೆ ಸಿಲುಕಿ ಸಾವು!

Harangi Backwater Man who went swimming in Harangi backwater and dies

ಕೊಡಗು: ಹೆರೂರು ಬಳಿ‌ಯ ಹಾರಂಗಿ ಹಿನ್ನೀರಿನಲ್ಲಿ (Harangi Backwater) ಈಜಲು ತೆರಳಿದ ವ್ಯಕ್ತಿ ನೀರು (Drowned in water) ಪಾಲಾಗಿದ್ದಾರೆ. ಬಾಳುಗೋಡು ನಿವಾಸಿ ಬಾಲು (40) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಬಾಲು ಸಂಬಂಧಿಕರ ಮನೆಗೆ ಬಂದಿದ್ದರು ಎನ್ನಲಾಗಿದೆ. ಜಾನುವಾರುಗಳಿಗೆ ನೀರು ಕೊಟ್ಟು ನದಿಯತ್ತ ತೆರಳಿದ ಇವರು, ಬಿಸಿಲ‌ ಬೇಗೆಗೆ ಬೇಸತ್ತು ನೀರಿಗಿಳಿದು ಈಜಲು ಮುಂದಾಗಿದ್ದರು ಎನ್ನಲಾಗಿದೆ. ಆದರೆ, ಈ ವೇಳೆ ಕಾಲಿಗೆ ಮೀನಿನ ಬಲೆ ಸಿಲುಕಿ ನಿರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಹಾರಂಗಿ ಹಿನ್ನೀರಿನಲ್ಲಿ ಕೆಲವರು ಮೀನು ಹಿಡಿಯಲು ಬಲೆಗಳನ್ನು ಹಾಕಿಡುತ್ತಿದ್ದಾರೆ. ಆದರೆ, ಈ ಬಗ್ಗೆ ಅರಿವು ಇಲ್ಲದ ಬಾಲು ನೀರಿಗೆ ಈಜಲು ಇಳಿದಿದ್ದರಿಂದ ಕಾಲಿಗೆ ಬಲೆ ಸಿಲುಕಿದೆ. ಹೀಗಾಗಿ ಅವರಿಗೆ ಕಾಲನ್ನು ಬಡಿಯಲಾಗದೆ ನೀರಿನೊಳಗೆ ಮುಳುಗಿದ್ದಾರೆ. ಮೃತದೇಹವನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಪ್ರಕರಣ ನಡೆದಿದೆ.

ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಕಾರವಾರ: ಸಾಲಬಾಧೆ ತಾಳಲಾರದೇ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದ ಆನಂದ ನಗರದಲ್ಲಿ ನಡೆದಿದೆ. ಬಸವರಾಜ ಮಲ್ಲೂರ(42) ಎಂಬವರು ಆತ್ಮಹತ್ಯೆಗೆ ಶರಣಾದ ರೈತ.

ಅಡಿಕೆ, ಜೋಳದ ಬೆಳೆ ಬೆಳೆಯಲು ಸಾಲ ಮಾಡಿದ್ದ ರೈತ ಬಸವರಾಜ, ಬೆಳೆ ಹಾನಿಯಿಂದ ಸಾಲ ಮರುಪಾವತಿ ಮಾಡಿರಲಿಲ್ಲ. ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್‌ನಿಂದ ನಿರಂತರ ಕಿರುಕುಳ ಬಂದಿದ್ದು, ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Drunken Driving: ಎರ‍್ರಾಬಿರ‍್ರಿ ಟಿಪ್ಪರ್ ಚಲಾಯಿಸಿ ಪಾದಚಾರಿಯನ್ನು ಕೊಂದ ಪಾನಮತ್ತ

ಯಾದಗಿರಿ: ಪಾನಮತ್ತನಾಗಿ ಎರ‍್ರಾಬಿರ‍್ರಿ ಟಿಪ್ಪರ್ ಚಾಲನೆ ಮಾಡಿ (Drunken Driving) ಅಪಘಾತ ಎಸಗಿ (Road Accident) ಪಾದಚಾರಿಯೊಬ್ಬರನ್ನು ಕೊಂದುಹಾಕಿದ, ರಸ್ತೆ ಪಕ್ಕದ ಮರ, ಟ್ರಾಕ್ಟರ್‌ ಇತ್ಯಾದಿ ಘಾಸಿಗೊಳಿಸಿದ ಟಿಪ್ಪರ್‌ ಚಾಲಕನನ್ನು (Tipper Driver) ವಶಕ್ಕೆ ಪಡೆಯಲಾಗಿದೆ.

ಯಾದಗಿರಿ (Yadagiri news) ಜಿಲ್ಲೆಯ ಶಹಾಪುರ ನಗರದಲ್ಲಿ ನಸುಕಿನ ಜಾವ ಘಟನೆ ನಡೆದಿದೆ. ಸಾಹಿಲ್ ಪಟೇಲ್ (18) ಮೃತ ದುರ್ದೈವಿ. ಕುಡಿದ ಮತ್ತಿನಲ್ಲಿದ್ದ ಟಿಪ್ಪರ್‌ ಚಾಲಕ ಯದ್ವಾತದ್ವಾ ಟಿಪ್ಪರ್‌ ಚಲಾಯಿಸಿ ರಸ್ತೆ ಪಕ್ಕ ನಿಂತಿದ್ದ ಯುವಕನಿಗೆ ಗುದ್ದಿದ್ದಾನೆ. ಸಾಹಿಲ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Rameshwaram Cafe Blast: ರಾಮೇಶ್ವರಂ ಕೆಫೆ ಸ್ಫೋಟ ಕೇಸ್; ಜೈಲಲ್ಲೇ ಕುಳಿತು ಸ್ಕೆಚ್‌ ಹಾಕಿದ್ದ ಮೊದಲ ಆರೋಪಿ!

ನಂತರ ರಸ್ತೆ ಪಕ್ಕದಲ್ಲಿ ಇದ್ದ ಮರ, ಟ್ರಾಕ್ಟರ್‌ ಹಾಗೂ ವಿದ್ಯುತ್‌ ಕಂಬಕ್ಕೂ ಡಿಕ್ಕಿ ಹೊಡೆದಿದ್ದು, ಸ್ಥಳದಿಂದ ವೇಗವಾಗಿ ಚಲಾಯಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ಟಿಪ್ಪರ್ ಮೇಲೆ ಕಲ್ಲು ತೂರಾಟ ನಡೆಸಿ, ನಂತರ ಟಿಪ್ಪರ್ ಸಹಿತ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಟಿಪ್ಪರ್ ಚಾಲಕ ಜೀವನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version