Site icon Vistara News

ಮಂಗಳೂರು ಸ್ಫೋಟ| ತಮಿಳುನಾಡಿನ ವ್ಯಕ್ತಿ ಪೊಲೀಸ್‌ ವಶಕ್ಕೆ, ಬೆಂಗಳೂರಿನಲ್ಲಿ ವಿಚಾರಣೆ

Shariq story: soppina gudda to ISIS

ಬೆಂಗಳೂರು: ಮಂಗಳೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಇದೀಗ ತಮಿಳುನಾಡು ಪೊಲೀಸರು ಕೈ ಜೋಡಿಸಿದ್ದಾರೆ. ಪ್ರಮುಖ ಆರೋಪಿ ಮೊಹಮ್ಮದ್‌ ಶಾರಿಖ್‌, ತಮಿಳುನಾಡಿನಲ್ಲಿ ಸಹಚರರನ್ನು ಹೊಂದಿದ್ದನೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ಶಾರಿಖ್‌ ಊಟಿಯ ನಿವಾಸಿ ಸುರೇಂದ್ರನ್‌ ಎಂಬುವರ ಆಧಾರ್‌ ಕಾರ್ಡ್‌ ಬಳಸಿ ಮೊಬೈಲ್‌ ಫೋನ್‌ಗೆ ಸಿಮ್‌ ಕಾರ್ಡ್‌ ಖರೀದಿಸಿದ್ದ. ತಮಿಳುನಾಡಿನಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಸಂಭವಿಸಿದ ಸ್ಫೋಟಕ್ಕೂ, ಶಾರಿಖ್‌ಗೂ ನಂಟು ಇದೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಒಂದು ವೇಳೆ ಶಾರಿಖ್‌ಗೂ ಕೊಯಮತ್ತೂರಿನಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದ ಸ್ಫೋಟಕ್ಕೂ ನಂಟು ಇದ್ದರೆ, ಭಯೋತ್ಪಾದಕರ ಭಾರಿ ಜಾಲದ ಜತೆ ಸಂಪರ್ಕ ಹೊಂದಿರುವ ಬಗ್ಗೆ ಮತ್ತಷ್ಟು ಸಾಕ್ಷ್ಯಗಳು ಲಭಿಸುವ ನಿರೀಕ್ಷೆ ಇದೆ.

Exit mobile version