ಮಂಗಳೂರು: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಕ್ಕೆ ಕಾರಣನಾದ ಶಾರೀಕ್, ಈ ಬಾಂಬ್ ತಯಾರಿಸಲೆಂದೇ ಕೇರಳ ಕೊಚ್ಚಿಯಲ್ಲಿ ಲಾಡ್ಜ್ ರೂಮು ಬುಕ್ ಮಾಡಿ ಅಲ್ಲಿಗೆ ಬಾಂಬ್ ತಯಾರಿ ಐಟಂಗಳನ್ನು ತರಿಸಿದ್ದ ಎಂಬುದು ಪತ್ತೆಯಾಗಿದೆ.
ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಂಡ ಈ ಬಗ್ಗೆ ತನಿಖೆ ನಡೆಸಿದ್ದು, ಶಾರೀಕ್ ಚಲನವಲನದ ಸಿಸಿಟಿವಿ ದೃಶ್ಯಗಳು ತಂಡಕ್ಕೆ ಲಭ್ಯವಾಗಿದೆ. ಬಾಂಬ್ ತಯಾರಿ ಐಟಂ ತರಿಸಿಕೊಳ್ಳಲೆಂದೇ ಈತ ಲಾಡ್ಜ್‌ನಲ್ಲಿ ರೂಂ ಮಾಡಿದ್ದ. ಲಾಡ್ಜ್ ರೆಕಾರ್ಡ್, ಸಿಸಿಟಿವಿ ಫೂಟೇಜ್ ವಶಕ್ಕೆ ಪಡೆದಿರುವ ಎನ್‌ಐಎ ಟೀಂ
ಶಾರೀಕ್ ಬಾಯ್ಬಿಟ್ಟ ಮಾಹಿತಿಯನ್ವಯ ಕೊಚ್ಚಿಯ ಆಲುವಾ ರೈಲು ನಿಲ್ದಾಣ, ಎರ್ನಾಕುಲಂ ಮತ್ತು ಉತ್ತರ ರೈಲ್ವೆ ನಿಲ್ದಾಣದ ಸಮೀಪದ ಲಾಡ್ಜ್‌ಗಳಲ್ಲಿ ಎನ್ಐಎ ತಲಾಷೆ ನಡೆಸಿದೆ. ನಾಲ್ಕೈದು ದಿನ ಈತ ಲಾಡ್ಜ್ ಬದಲಿಸಿ ತಂಗಿದ್ದ. ಆಲುವಾದ ಲಾಡ್ಜ್‌ನಿಂದ ಕೊಠಡಿ ಖಾಲಿ ಮಾಡಿದ ನಂತರವೂ ಈತನಿಗೆ ಪಾರ್ಸೆಲ್ ಬಂದಿತ್ತು. ಬಳಿಕ ಲಾಡ್ಜ್ ಸಿಬ್ಬಂದಿ ಶಾರೀಕ್‌ಗೆ ದೂರವಾಣಿ ಕರೆ ಮಾಡಿ ಪಾರ್ಸೆಲ್ ಕೊಟ್ಟಿದ್ದರು. ಈ ಬಗೆಗಿನ ಸಿಸಿಟಿವಿ ಫೂಟೇಜ್, ಲಾಡ್ಜ್ ದಾಖಲೆಗಳನ್ನು ಎನ್‌ಐಎ ಕಲೆಹಾಕಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಇನ್ನೂ ಸರಿಯಾಗದ ಕುಕ್ಕರ್ ಬಾಂಬರ್ ಶಾರೀಕ್ ಆರೋಗ್ಯ, ತನಿಖೆ ಬಾಕಿ