Site icon Vistara News

Medical Negligence: ಆಸ್ಪತ್ರೆ ನಿರ್ಲಕ್ಷ್ಯದಿಂದ ಬಾಲಕ ಸಾವು: 10 ಲಕ್ಷ ರೂ. ಪರಿಹಾರ ಘೋಷಿಸಿದ ಕೋರ್ಟ್​​

Medical Negligence

ನವದೆಹಲಿ: ಹಾವು ಕಡಿತದಿಂದ (snake bite) 12 ವರ್ಷದ ಬಾಲಕ (boy) ಮೃತಪಟ್ಟ 16 ವರ್ಷಗಳ ಬಳಿಕ ಬಾಲಕನ ತಂದೆಗೆ ದೆಹಲಿಯ (delhi) ರಾಷ್ಟ್ರೀಯ ಗ್ರಾಹಕ ನ್ಯಾಯಾಲಯವು ವೈದ್ಯಕೀಯ ನಿರ್ಲಕ್ಷ್ಯಕ್ಕಾಗಿ (Medical Negligence) 10 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಮಹಾರಾಷ್ಟ್ರದ (maharstra) ಮಹಾತ್ಮ ಗಾಂಧಿ ಮಿಷನ್ ಆಸ್ಪತ್ರೆಗೆ (Mahatma Gandhi Mission Hospital) ಆದೇಶ ನೀಡಿದೆ.

ಹಾವು ಕಡಿತದಿಂದ ಅಸ್ವಸ್ಥನಾಗಿದ್ದ ಮಹಾರಾಷ್ಟ್ರದ ಪರಶುರಾಮ್ ಲ್ಯಾಂಡ್ಗೆ ಅವರ ಮಗ ದೇವಾನಂದ್ 2007ರ ಅಕ್ಟೋಬರ್ ನಲ್ಲಿ ಮಹಾತ್ಮ ಗಾಂಧಿ ಮಿಷನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.

ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣದ ವಿಚಾರಣೆ ನಡೆಸಿದ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು (NCDRC) ಆಸ್ಪತ್ರೆಯ ನಿರ್ಲಕ್ಷ್ಯವನ್ನು ಪರಿಗಣಿಸಿ ಲ್ಯಾಂಡ್ಗೆ ಅವರಿಗೆ ಪರಿಹಾರವನ್ನು ಏಪ್ರಿಲ್ 24 ರಂದು ಘೋಷಿಸಿದೆ.

ಇದನ್ನೂ ಓದಿ: Assault Case : ಕುಡಿದ ನಶೆಯಲ್ಲಿ ಸ್ನೇಹಿತನಿಗೆ ಬೆಂಕಿ ಹಚ್ಚಿದ ಮಿತ್ರ ದ್ರೋಹಿಗಳು ಅರೆಸ್ಟ್‌

ಬಾಲಕನ ತಂದೆ ನೀಡಿರುವ ದೂರಿನ ಪ್ರಕಾರ ಆಸ್ಪತ್ರೆಯ ಡಾಕ್ಟರ್ ಶೀನು ಗುಪ್ತಾ ಅವರು ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದು, ದೇವಾನಂದ್ ನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದರು ಎಂದು ಹೇಳಲಾಗಿದೆ.

ಮಗನ ಸ್ಥಿತಿ ಗಂಭೀರವಾದ ಕಾರಣ ಚಿಕಿತ್ಸೆ ಮುಂದುವರೆಸುವಂತೆ ಲ್ಯಾಂಡ್​ಗೆ ಅವರು ವೈದ್ಯರಲ್ಲಿ ಮನವಿ ಮಾಡಿದ ಬಳಿಕ ವೈದ್ಯರು 500 ರೂ. ಮೌಲ್ಯದ ಚುಚ್ಚುಮದ್ದನ್ನು ಸೂಚಿಸಿದ್ದರು. ಅವರು ಪತ್ನಿಯ ಚಿನ್ನಾಭರಣಗಳನ್ನು ಗಿರವಿ ಇಟ್ಟು ಚುಚ್ಚುಮದ್ದು ಸೇರಿದಂತೆ ವೈದ್ಯರು ಸೂಚಿಸಿರುವ ಹಲವಾರು ದುಬಾರಿ ಔಷಧಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಆಸ್ಪತ್ರೆಗೆ ಹಿಂದಿರುಗಿ ಕೂಡಲೇ ಮಗನಿಗೆ ಚಿಕಿತ್ಸೆ ನೀಡುವಂತೆ ವಿನಂತಿಸಿದರು. ಆದರೂ ವೈದ್ಯರು ಹೆಚ್ಚಿನ ಹಣವನ್ನು ಠೇವಣಿ ಮಾಡುವವರೆಗೂ ಚಿಕಿತ್ಸೆ ಪ್ರಾರಂಭಿಸಲು ನಿರಾಕರಿಸಿದರು. ಇದರಿಂದ ದೇವಾನಂದ್ ರಾತ್ರಿ 8.30ರ ವೇಳೆಗೆ ನಿಧನನಾಗಿದ್ದಾನೆ.

ದೂರು ದಾಖಲು

ಈ ಕುರಿತು 2017ರಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಲ್ಯಾಂಡ್ಗೆ ದೂರು ದಾಖಲಿಸಿದ್ದರು. ಆದರೆ, ಮೂರು ವರ್ಷಗಳ ಅನಂತರ ಮಹಾರಾಷ್ಟ್ರ ರಾಜ್ಯ ಗ್ರಾಹಕ ನ್ಯಾಯಾಲಯವು ವೈದ್ಯ ಗುಪ್ತಾ ಮತ್ತು ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ 10 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತ್ತು. ಇದರಿಂದ ಅಸಮಾಧಾನಗೊಂಡ ಆಸ್ಪತ್ರೆಯು ಎನ್‌ಸಿಡಿಆರ್‌ಸಿಗೆ ತೆರಳಿ ರಾಜ್ಯ ಗ್ರಾಹಕ ನ್ಯಾಯಾಲಯದ ಆದೇಶವು “ಕಾನೂನು ಅರ್ಹತೆಗಿಂತ ಹೆಚ್ಚಾಗಿ ಸಹಾನುಭೂತಿಯ ಆಧಾರದ ಮೇಲಿದೆ ಎಂದು ಆರೋಪಿಸಿ ದೂರು ನೀಡಿತ್ತು.

ಮಗನನ್ನು ಆಸ್ಪತ್ರೆಗೆ ಕರೆತರುವಲ್ಲಿ ದೂರುದಾರರು ಸರಿಸುಮಾರು ಅರ್ಧ ಗಂಟೆ ವಿಳಂಬ ಮಾಡಿರುವುದನ್ನು ರಾಜ್ಯ ಆಯೋಗವು ನಿರ್ಲಕ್ಷಿಸಿದೆ ಎಂದು ಆಸ್ಪತ್ರೆಯು ವಾದಿಸಿತು.

ಮಧ್ಯಾಹ್ನ 1.40 ರ ಸುಮಾರಿಗೆ ಬಾಲಕ ಆಸ್ಪತ್ರೆಯಲ್ಲಿದ್ದರೂ ಮಗನಿಗೆ ಚಿಕಿತ್ಸೆ ನೀಡಲಿಲ್ಲ ಎಂಬುದು ಲ್ಯಾಂಡ್ಗೆ ವಾದಿಸಿದ್ದರು. ಇದಕ್ಕೆ ಪ್ರತಿಯಾಗಿ ಆಸ್ಪತ್ರೆಯು ರೋಗಿಯ ಸ್ಥಿತಿ ಗಂಭೀರವಾಗಿತ್ತು ಎಂದು ಹೇಳಿದೆ.

ಇದಕ್ಕೆ ಸಂಬಂಧಿಸಿದ ಸಾಕ್ಷಿಗಳನ್ನು ಪರಿಶೀಲಿಸಿದ ಬಳಿಕ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಬಲವಾದ ಪುರಾವೆಗಳು ದೊರೆತಿದೆ. ವೈದ್ಯಕೀಯ ಪೇಪರ್‌ಗಳನ್ನು ಪರೀಕ್ಷಿಸಿದಾಗ ವೈದ್ಯರು “ಸಕಾಲಿಕ ಚಿಕಿತ್ಸೆ” ನೀಡಲು ವಿಫಲವಾಗಿರುವುದು ತಿಳಿದು ಬಂದಿದೆ. ಇಷ್ಟು ಮಾತ್ರವಲ್ಲದೆ ಸಂಬಂಧವಿಲ್ಲದ ವ್ಯಕ್ತಿಯನ್ನು ಬಾಲಕನ ಅಜ್ಜ ಎಂದು ಹೇಳಿ ಹೆಚ್ಚಿನ ಅಪಾಯದ ಒಪ್ಪಿಗೆ ನಮೂನೆಗೆ ಸಹಿ ಹಾಕಿಸಲಾಗಿದೆ.

ಅಲ್ಲದೇ ಈ ಘಟನೆಯ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಲು ಆಸ್ಪತ್ರೆ ವಿಫಲವಾಗಿರುವುದು ಮತ್ತೊಂದು ಲೋಪವಾಗಿದೆ ಎಂದು ನ್ಯಾಯಾಲಯ ತಿಳಿಸಿದ್ದು, ಆಸ್ಪತ್ರೆಗೆ ದಂಡ ವಿಧಿಸಿದೆ.

Exit mobile version