Site icon Vistara News

ಬಾಲಕಿಯನ್ನು ದೇವರೂ ಕಾಪಾಡಲಿಲ್ಲ; ದೇಗುಲ ಬಳಿ, ದೇಗುಲದ ಟ್ರಸ್ಟಿಗಳಿಂದಲೇ ಬಾಲಕಿ ಮೇಲೆ ಗ್ಯಾಂಗ್‌ ರೇಪ್‌

Dalit Woman Raped In Uttar Pradesh

Dalit Woman Raped, Body Chopped In Pieces In Uttar Pradesh

ಲಖನೌ: ಬಿಹಾರದ ಸತ್ನಾ ಜಿಲ್ಲೆಯಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ (Physical Abuse) ನಡೆಸಲಾಗಿದೆ. ಸತ್ನಾ ಜಿಲ್ಲೆ ಮೈಹರ್‌ ಪಟ್ಟಣದಲ್ಲಿರುವ ಖ್ಯಾತ ಶಾರದಾ ದೇವಿ ದೇವಾಲಯದ ಬಳಿ ದೇಗುಲದ ಇಬ್ಬರು ಟ್ರಸ್ಟಿಗಳೇ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಾಲಕಿಯನ್ನು ಕಚ್ಚಿ, ಆಕೆಯ ಗುಪ್ತಾಂಗಕ್ಕೆ ಹಾನಿಕಾರಕ ವಸ್ತುವನ್ನು ತುರುಕಿ ದುಷ್ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಜುಲೈ 25ರಂದು 12 ವರ್ಷದ ಬಾಲಕಿ ಮೇಲೆ ದೇವಾಲಯದ ಬಳಿಯ ಅರಣ್ಯದಲ್ಲಿ ಇಬ್ಬರು ದುರುಳರು ಅತ್ಯಾಚಾರ ಎಸಗಿದ್ದಾರೆ. ಬಾಲಕಿಯನ್ನು ರೇವಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಪ್ರಕರಣದ ಆರೋಪಿಗಳಾದ ರವೀಂದ್ರ ಕುಮಾರ್‌ ರವಿ ಹಾಗೂ ಅತುಲ್‌ ಭದೋಲಿಯಾ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

“ಬಾಲಕಿಯ ಗುಪ್ತಾಂಗಕ್ಕೆ ಕಟ್ಟಿಗೆ ಅಥವಾ ಯಾವುದೇ ಹಾನಿಕಾರಕ ವಸ್ತುವನ್ನು ತುರುಕಿದ್ದಾರೆ ಎಂಬುದನ್ನು ನಾನು ನಿರಾಕರಿಸುವುದಿಲ್ಲ. ಆದರೆ, ವೈದ್ಯಕೀಯ ವರದಿ ಬಂದ ಬಳಿಕವೇ ನಿಖರ ಮಾಹಿತಿ ದೊರೆಯಲಿದೆ. ನಾವು ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದೇವೆ. ಬಾಲಕಿಯು ರಕ್ತಸ್ರಾವದಿಂದ ಬಳಲುತ್ತಿದ್ದಳು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ” ಎಂದು ಸತ್ನಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆಶುತೋಷ್‌ ಗುಪ್ತಾ ಮಾಹಿತಿ ನೀಡಿದರು.

ಇದನ್ನೂ ಓದಿ: Physical Abuse: ಚಲಿಸುತ್ತಿರುವ ಆಟೋದಲ್ಲಿ ಯುವತಿ ಮೇಲೆ ಅತ್ಯಾಚಾರ, ಉತ್ತರ ಪ್ರದೇಶದಲ್ಲಿ ಆರೋಪಿ ಸೆರೆ!

ಇಬ್ಬರೂ ಆರೋಪಿಗಳು 30 ವರ್ಷದವರಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ವಹಿಸಿದೆ. ಐಪಿಸಿ ಹಾಗೂ ಪೋಕ್ಸೊ ಕಾಯ್ದೆ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನು ಪ್ರಕರಣ ಸುದ್ದಿಯಾಗುತ್ತಲೇ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ತನಿಖೆಗೆ ಆದೇಶಿಸಿದ್ದಾರೆ. ಇನ್ನು ಇಬ್ಬರೂ ಆರೋಪಿಗಳು ದೇವಾಲಯದ ಟ್ರಸ್ಟಿಗಳು ಎಂದು ಕೂಡ ತಿಳಿದುಬಂದಿದೆ.

Exit mobile version