ಮುಂಬೈ: ಕೇರಳದಲ್ಲಿ ಹಿಂದು ಯುವತಿಯರನ್ನು ಇಸ್ಲಾಂಗೆ ಮತಾಂತರಗೊಳಿಸಿ, ಐಸಿಸ್ ಉಗ್ರ ಸಂಘಟನೆಗೆ ಸೇರಿಸುವ ಕಥಾ ಹಂದರ ಇರುವ ದಿ ಕೇರಳ ಫೈಲ್ಸ್ ಸಿನಿಮಾ 250 ಕೋಟಿ ರೂಪಾಯಿಗಿಂತ ಅಧಿಕ ಹಣ ಗಳಿಸಿದ್ದು, ಈಗಲೂ ಪ್ರದರ್ಶನ ಕಾಣುತ್ತಿದೆ. ಇನ್ನು, ಮುಂಬೈನಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ನೋಡಿ ಎಚ್ಚೆತ್ತುಕೊಂಡ ರಾಂಚಿ ಮೂಲದ ಮಾನ್ವಿ ಎಂಬ ಬಿಹಾರ ಮೂಲದ ರೂಪದರ್ಶಿಯೊಬ್ಬರು, ತಮ್ಮ ಮೇಲೆ ಅತ್ಯಾಚಾರ ಎಸಗಿ, ಮತಾಂತರಕ್ಕೆ ಬಲವಂತ ಮಾಡಿದವನ ವಿರುದ್ಧ ದೂರು ದಾಖಲಿಸಿದ್ದಾರೆ.
“ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿ, ಬಳಿಕ ಬಲವಂತವಾಗಿ ಮತಾಂತರಕ್ಕೆ ಯತ್ನಿಸಿದ್ದಾನೆ ಎಂಬುದಾಗಿ 23 ವರ್ಷದ ಮಾನ್ವಿ ದೂರು ದಾಖಲಿಸಿದ್ದಾರೆ. ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಿಸಿದ ಬಳಿಕ ಎಚ್ಚೆತ್ತುಕೊಂಡ ಅವರು ದೂರು ದಾಖಲಿಸಿದ್ದಾರೆ. ಆರೋಪಿಯನ್ನು ತನ್ವೀರ್ ಅಖ್ತರ್ ಲೇಕ್ ಖಾನ್ (40) ಎಂಬುದಾಗಿ ಗುರುತಿಸಲಾಗಿದೆ” ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಹಾಗೆಯೇ, ಆರೋಪಿ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ತಿಳಿದುಬಂದಿದೆ.
ರೂಪದರ್ಶಿಯು 2020ರಲ್ಲಿ ತನ್ವೀರ್ ಖಾನ್‌ನ ಮಾಡೆಲಿಂಗ್ ಏಜೆನ್ಸಿ ಸೇರಿದ್ದಾರೆ. ಆರಂಭದಲ್ಲಿ ತನ್ವೀರ್ ಖಾನ್, ತಾನು ಹಿಂದು ಎಂದೂ, ತನ್ನ ಹೆಸರು ಯಶ್ ಎಂದೂ ಹೇಳಿದ್ದಾನೆ. ಇದೇ ವೇಳೆ ಇಬ್ಬರ ಮಧ್ಯೆ ಪ್ರೀತಿಯಾಗಿದೆ. ಆದರೆ, ನಾಲ್ಕು ತಿಂಗಳ ಬಳಿಕ ಯಶ್‌ನ ನಿಜವಾದ ಹೆಸರು ತನ್ವೀರ್ ಎಂಬುದಾಗಿ ರೂಪದರ್ಶಿಗೆ ಗೊತ್ತಾಗಿದೆ. ಇನ್ನು ರೂಪದರ್ಶಿಯನ್ನು ಮದುವೆಯಾಗಿ ನಂಬಿಸಿದ ತನ್ವೀರ್, ಜಾರ್ಖಂಡ್‌ನ ರಾಂಚಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಹಾಗೆಯೇ, “ಇಸ್ಲಾಂಗೆ ಮತಾಂತರಗೊಳ್ಳುವಂತೆ ಬಲವಂತ ಮಾಡಿದ್ದಾನೆ. ನನ್ನನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾನೆ” ಎಂದು ರೂಪದರ್ಶಿಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Delhi Murder: ಹಿಂದುಗಳು ಕಟ್ಟುವ ದಾರ ಕಟ್ಟಿದ್ದ ಸಾಹಿಲ್; ಬಾಲಕಿಯ ಹತ್ಯೆ ಕೇಸ್‌ಗೆ ಲವ್ ಜಿಹಾದ್ ಟ್ವಿಸ್ಟ್
ರೂಪದರ್ಶಿಯು ದೂರು ನೀಡಿದ ಬಳಿಕ ಪೊಲೀಸರು ಐಪಿಸಿಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಹಾಗೆಯೇ, ರಾಂಚಿಯಲ್ಲಿ ಅತ್ಯಾಚಾರ ನಡೆದಿದೆ ಎಂದು ಮಾಡೆಲ್ ಹೇಳಿದ ಕಾರಣ ಪ್ರಕರಣವನ್ನು ರಾಂಚಿ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಇನ್ನು ರೂಪದರ್ಶಿ ದೂರಿಗೆ ಪ್ರತಿಯಾಗಿ ತನ್ವೀರ್ ಅಖ್ತರ್ ಲೇಕ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಬಿಡುಗಡೆ ಮಾಡಿದ್ದಾನೆ. ತನ್ನ ವಿರುದ್ಧ ರೂಪದರ್ಶಿ ಮಾಡಿದ ಎಲ್ಲ ಆರೋಪಗಳೂ ಸುಳ್ಳು ಎಂದು ಹೇಳಿದ್ದಾನೆ.
ದೇಶದ ಮತ್ತಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ