Site icon Vistara News

Bomb Threat : ಬೆಂಗಳೂರಿನ 30ಕ್ಕೂ ಅಧಿಕ ಶಾಲೆಗಳಿಗೆ ಬಾಂಬ್‌ ಬೆದರಿಕೆ, ಎಲ್ಲೆಡೆ ಆತಂಕ

Bomb threat in Bangalore schools

ಬೆಂಗಳೂರು: ರಾಜಧಾನಿ ಮುಂಜಾನೆಯೇ ಬೆಚ್ಚಿ ಬಿದ್ದಿದೆ. ಇದಕ್ಕೆ ಕಾರಣ, ಬೆಂಗಳೂರಿನ (Bangalore News) 30ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್‌ ಬೆದರಿಕೆ (Bomb Threat to Schools) ಹಾಕಲಾಗಿದ್ದು, ಮಕ್ಕಳು, ಆಡಳಿತ ಮಂಡಳಿ ಮತ್ತು ಪೋಷಕರು ಆತಂಕಕ್ಕೀಡಾಗಿದ್ದಾರೆ. ಪೊಲೀಸರು ಶಾಲೆಗಳಿಗೆ ದೌಡಾಯಿಸಿದ್ದು, ಬಾಂಬ್‌ ತಪಾಸಣೆ (Bomb threat) ದಳಗಳೂ ಆಗಮಿಸಿವೆ. ಎಲ್ಲಾ ಶಾಲೆಗಳಿಂದ ಮಕ್ಕಳನ್ನು ಹೊರಗೆ ಕಳುಹಿಸಲಾಗಿದ್ದು, ಬಿಗಿ ಭದ್ರತಾ ವ್ಯವಸ್ಥೆ (Security to Bangalore Schools) ಮಾಡಲಾಗಿದೆ.

Bomb threat Anekal School

ಈ ಮೇಲ್‌ ಮೂಲಕ ಈ ಬಾಂಬ್‌ ಬೆದರಿಕೆ ಬಂದಿದೆ ಎಂದು ಹೇಳಲಾಗಿದ್ದು, ಬೆಳಗ್ಗೆ ಮೇಲ್‌ ಚೆಕ್‌ ಮಾಡುವಾಗ ಈ ವಿಷಯ ಗೊತ್ತಾಗಿದೆ. ಇದು ತಿಳಿಯುತ್ತಿದ್ದಂತೆಯೇ ಕೂಡಲೇ ಮಕ್ಕಳನ್ನು ಹೊರಗೆ ಕಳುಹಿಸಲಾಯಿತು ಮತ್ತು ಆಗಷ್ಟೇ ಒಳಗೆ ಬರುತ್ತಿದ್ದ ಮಕ್ಕಳನ್ನು ಒಳಗೆ ಬರದಂತೆ ಸೂಚಿಸಲಾಯಿತು. ಈ ವೇಳೆ ಹೆತ್ತವರು ಕೂಡಾ ಮಕ್ಕಳನ್ನು ಬಿಡಲು ಆಗಮಿಸಿದವರು ಅಲ್ಲೇ ಇದ್ದಿದ್ದರಿಂದ ಆತಂಕದ ವಾತಾವರಣ ಹೆಚ್ಚಾಯಿತು. ಕೆಲವರು ವಿಷಯ ತಿಳಿಯುತ್ತಿದ್ದಂತೆಯೇ ಓಡಿ ಬಂದಿದ್ದಾರೆ.

ಯಾವ್ಯಾವ ಶಾಲೆಗಳಿಗೆ ಬೆದರಿಕೆ?

ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ನ್ಯಾಷನಲ್‌ ಅಕಾಡೆಮಿ ಸ್ಕೂಲ್, ವಿದ್ಯಾಶಿಲ್ಪ ಮತ್ತು ಆ ಪರಿಸರದ ಏಳಕ್ಕೂ ಅಧಿಕ ಶಾಲೆಗಳಿಗೆ ಬೆದರಿಕೆ ಹಾಕಲಾಗಿದೆ. ಯಲಹಂಕದಲ್ಲೂ ಒಂದು ಶಾಲೆಗೆ ಬೆದರಿಕೆ ಈ ಮೇಲ್‌ ಬಂದಿದೆ. ಭಾರತಿ ನಗರ ಪೊಲೀಸ್ ಠಾಣೆಯ ಎದುರು ಇರುವ ಸೆಂಟ್ ಜಾನ್ಸ್ ಸ್ಕೂಲ್ ಗೂ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಎಲ್ಲ ಶಾಲೆಗಳಿಗೆ ಪೊಲೀಸರು ದೌಡಾಯಿಸಿದ್ದಾರೆ.

ಶಾಲೆಗಳಿಂದ ಪತ್ರ

ಭಯಪಡಬೇಡಿ ಎಂದು ಸೂಚಿಸಿದ ಶಾಲೆಗಳು

ಈ ನಡುವೆ, ಶಾಲೆಗಳು ತಮ್ಮ ಮಕ್ಕಳ ಹೆತ್ತವರಿಗೆ ವಾಟ್ಸ್‌ ಆಪ್‌ ಮೂಲಕ ಬಾಂಬ್‌ ಬೆದರಿಕೆಯ ಮಾಹಿತಿಯನ್ನು ನೀಡಿದ್ದು, ಮಕ್ಕಳು ಸುರಕ್ಷಿತವಾಗಿದ್ದು, ಅವರನ್ನು ಮನೆಗೆ ಕಳುಹಿಸಲಾಗುತ್ತಿದೆ ಎಂದು ಹೇಳಿವೆ.

ಆನೇಕಲ್‌ ಭಾಗದ ಶಾಲೆಗಳಿಗೂ ಬೆದರಿಕೆ

Bomb threat Anekal School

ಬೆಂಗಳೂರು ಹೊರವಲಯದ ಶಾಲೆಗಳಿಗೂ ಈಮೇಲ್‌ ಮೂಲಕ ಬೆದರಿಕೆ ಹಾಕಲಾಗಿದೆ. ಬನ್ನೇರುಘಟ್ಟ ಸಮೀಪದ ಗ್ಲೋಬಲ್ ಇಂಟರ್‌ ನ್ಯಾಷನಲ್‌ ಸ್ಕೂಲ್, ಗ್ರೀನ್ ಹುಡ್ ಹೈ ಸ್ಕೂಲ್, ಸಿಂಗೇನಾ ಅಗ್ರಹಾರ ಸಮೀಪದ ಎಬಿನೇಜರ್, ದೊಮ್ಮಸಂದ್ರ ಬಳಿಯ ಇನ್ವೆಂಚರ್ ಇಂಟರ್ನ್ಯಾಷನಲ್ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ.

Bomb threat Anekal School

ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಶ್ವಾನದಳ, ಬಾಂಬ್ ಸ್ಕ್ವಾಡ್ ಸಹಿತ ದೌಡಾಯಿಸಿದ್ದಾರೆ.

ಇದನ್ನೂ ಓದಿ : Bomb threat: ಬೆಂಗಳೂರಿನ ಎಬಿನೈಜರ್‌ ಶಾಲೆಗೆ ಮತ್ತೊಮ್ಮೆ ಬಾಂಬ್‌ ಬೆದರಿಕೆ ಇಮೇಲ್‌; ಪೊಲೀಸರು ದೌಡು

Exit mobile version