Site icon Vistara News

Drowned: ನೀರಿನ ಸಂಪ್‌ನಲ್ಲಿ ಮುಳುಗಿ ತಾಯಿ- ಮಗು ಸಾವು, ಮುಚ್ಚಳ ಹಾಕದೆ ಬಿಟ್ಟಿದ್ದ ಮಾಲಿಕ

open sump drowned

ಬೆಂಗಳೂರು: ಶ್ರೀಮಂತರ ಮನೆಯವರ ನಿರ್ಲಕ್ಷ್ಯಕ್ಕೆ ತಾಯಿ- ಮಗು (mother- child death) ಬಲಿಯಾಗಿದ್ದಾರೆ. ತೆರೆದೇ ಇದ್ದ ನೀರಿನ ಸಂಪ್‌ನಲ್ಲಿ ಬಿದ್ದು ಮುಳುಗಿ (Drowned) ತಾಯಿ ಮಗು ಸಾವಿಗೀಡಾಗಿದ್ದಾರೆ. ಯಲಹಂಕ ನ್ಯೂಟೌನ್ ಬಳಿಯ ಈಸ್ಟ್ ಕಾಲೋನಿಯಲ್ಲಿ ಘಟನೆ ನಡೆದಿದೆ.

ಕವಿತಾ (40) ಹಾಗೂ ಪವನ್ (8) ಮೃತರು. ಸ್ಥಳಕ್ಕೆ ಯಲಹಂಕ ನ್ಯೂ ಟೌನ್ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಭೇಟಿ ಕೊಟ್ಟು ಶವಗಳನ್ನು ಹೊರಗೆ ತೆಗೆದಿದ್ದಾರೆ.

ಮೃತ ಕವಿತಾ ಅದೇ ಏರಿಯಾದ ಉದ್ಯಮಿಯೊಬ್ಬರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದರು. ನಿನ್ನೆ‌ ಸಹ ಅದೇ ಮನೆಯವರ ‌ಮನೆಯ ಕೆಲಸಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಈಕೆ ಕಾಂಪೌಂಡ್ ಒಂದಕ್ಕೆ ನೀರು ಹಾಕಲು ಹೋಗಿದ್ದರು. ಮನೆಯ ಮಾಲಿಕ, ಉದ್ಯಮಿ ಸ್ಥಳದಲ್ಲಿ ನೀರಿನ ಸಂಪ್ ತೆಗೆಸಿ ಅದನ್ನು ಮುಚ್ಚದೆ ಹಾಗೆಯೇ ಬಿಟ್ಟಿದ್ದರು. ಸಂಪ್‌ನ ತುಂಬಾ ನೀರು ಇದೆ ಎಂದು ಗೊತ್ತಿದ್ದರೂ ಅದನ್ನು ಮುಚ್ಚುವ ಕೆಲಸ ಮಾಡಿರಲಿಲ್ಲ.

ತಾಯಿ ಕಾಂಪೌಂಡ್‌ಗೆ ನೀರು ಹಾಕುತ್ತಿದ್ದಾಗ ಮಗು ಆಟವಾಡುತ್ತ ಹೋಗಿ ಸಂಪ್‌ಗೆ ಬಿದ್ದಿದೆ. ಮಗುವನ್ನು ಕಾಪಾಡಲು ಮುಂದಾದ ತಾಯಿ ತಾನೂ ಸಂಪ್‌ಗೆ ಇಳಿದಿದ್ದಾಳೆ. ನಂತರ ಮೇಲೆ ಬರುವುದಕ್ಕೆ ಆಗದೆ ತಾಯಿ ಮಗು ಸಂಪ್‌ನಲ್ಲಿಯೇ ಜೀವ ಬಿಟ್ಟಿದ್ದಾರೆ. ಸಂಪ್‌ಗೆ ಮುಚ್ಚಳವಾಗಲೀ ಯಾವುದೇ ಲಾಕ್ ಆಗಲೀ ಹಾಕದೆ ಬಿಟ್ಟಿದ್ದ ಸೈಟ್ ಮಾಲೀಕನ ನಿರ್ಲಕ್ಷ್ಯ ಈ ಪ್ರಕರಣದಲ್ಲಿ ಎದ್ದು ಕಂಡಿದೆ.

ನಗರಸಭೆ ಉಪಾಧ್ಯಕ್ಷೆಯ ಮಗ ಸೇರಿ 4 ಮಂದಿ ಮಲಗಿದಲ್ಲೇ ಕೊಚ್ಚಿ ಕೊಲೆ

ಗದಗ: ಒಂದೇ ಕುಟುಂಬದ ನಾಲ್ಕು ಮಂದಿಯನ್ನು ಮನೆಯಲ್ಲಿ ಮಲಗಿದಲ್ಲೇ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ಬರ್ಬರ ಘಟನೆ ಗದಗ ನಗರದ ದಾಸರ ಓಣಿಯಲ್ಲಿ ನಡೆದಿದ್ದು, ಕೃತ್ಯದ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಕೊಲೆಯಾದವರಲ್ಲಿ ನಗರಸಭೆ ಉಪಾಧ್ಯಕ್ಷೆಯ ಪುತ್ರನೊಬ್ಬ ಸೇರಿದ್ದಾನೆ. ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ (55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಕೊಲೆಯಾದವರು. ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

murder case gadag

ಮೊದಲನೇ ಮಹಡಿಯ ಕೋಣೆಯಲ್ಲಿ ಮಲಗಿದ್ದ ಪತಿ, ಪತ್ನಿ, ಮಗಳನ್ನು ಕೊಲೆ ಮಾಡಲಾಗಿದೆ. ಈ ಮೂವರೂ ಕೊಪ್ಪಳ ಮೂಲದವರಾಗಿದ್ದು, ಏಪ್ರಿಲ್‌ 17ರಂದು ನಡೆದ ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್‌ನ ಮದುವೆ ಫಿಕ್ಸ್ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಸಂಬಂಧಿಗಳಾಗಿದ್ದಾರೆ.

ಮೇಲಿನ ಮಹಡಿಯ ಬಾಗಿಲು ಸದ್ದು ಕೇಳಿ ಅನುಮಾನಗೊಂಡು ಕುಟುಂಬಸ್ಥರು ಪೊಲೀಸರಿಗೆ ಫೋನ್ ಮಾಡಿದ್ದರು. ಪೊಲೀಸರಿಗೆ ಫೋನ್ ಮಾಡುತ್ತಿದ್ದಂತೆ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಬಾಗಿಲು ತೆಗೆದಿದ್ದರೆ ನಮ್ಮನ್ನೂ ಕೊಲೆ ಮಾಡುವ ಸಾಧ್ಯತೆಯಿತ್ತು ಎಂದು ಮನೆ ಮಾಲೀಕ‌ ಪ್ರಕಾಶ್ ಬಾಕಳೆ ಹೇಳಿಕೆ ನೀಡಿದ್ದಾರೆ.

ಶ್ವಾನದಳ, ಫಾರೆನ್ಸಿಕ್‌ ತಂಡಗಳು ಆಗಮಿಸಿದ್ದು, ಮನೆಯ ಇಂಚಿಂಚೂ ಪರಿಶೀಲನೆ ಮಾಡಲಾಗಿದೆ. ಸ್ಥಳಕ್ಕೆ ಎಸ್ಪಿ ಬಿ.ಎಸ್ ನೇಮಗೌಡ, ಹೆಚ್ಚುವರಿ ಎಸ್ಪಿ ಎಂ.ಬಿ ಸಂಕದ, ಡಿವೈಎಸ್ಪಿ, ಸಿಪಿಐ ಸೇರಿ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೇಲ್ನೋಟಕ್ಕೆ ದರೋಡೆಗೆ ಬಂದ ತಂಡ ನಡೆಸಿರುವ ಕೃತ್ಯದಂತೆ ಕಂಡುಬಂದಿದ್ದರೂ, ಪ್ರಕರಣದ ಹಲವು ಮಗ್ಗಲುಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Student Death: ರೈಲಿಗೆ ತಲೆ ಕೊಟ್ಟು ಮಣಿಪಾಲ್‌ ಆಸ್ಪತ್ರೆಯ ಸ್ಟಾಫ್ ನರ್ಸ್ ಸೂಸೈಡ್‌

ಬೆಂಗಳೂರು: ರೈಲಿಗೆ ಸಿಲುಕಿ ಯುವಕನೊಬ್ಬ ಆತ್ಮಹತ್ಯೆಗೆ (Student death) ಶರಣಾಗಿದ್ದಾರೆ. ಬೆಂಗಳೂರಿನ ದೀಪಾಂಜಲಿನಗರ ರೈಲ್ವೆ ಟ್ರಾಕ್ ಬಳಿ ಘಟನೆ ನಡೆದಿದೆ. ವಿಜಯಪುರ ಮೂಲದ ಚನ್ನಬಸು ಅಶೋಕ್ (22) ಮೃತ ದುರ್ದೈವಿ.

ಚನ್ನಬಸು ಅಶೋಕ್‌ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನ ತನ್ನ ಚಿಕ್ಕಮ್ಮನೊಟ್ಟಿಗೆ ವಾಸವಾಗಿದ್ದ. ಇಂದು ಗುರುವಾರ ಮನೆಯಿಂದ ಹೊರಟವನು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಿಟಿ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.‌

ಇದನ್ನೂ ಓದಿ: Physical Abuse : ಸ್ಪೇನ್​ನ ಮಹಿಳೆ ಮೇಲೆ ಜಾರ್ಖಂಡ್​ನಲ್ಲಿ ಗ್ಯಾಂಗ್​ ರೇಪ್​; ತಿಂಗಳ ಬಳಿಕ ಪ್ರಕರಣ ಬಯಲು

Exit mobile version