Site icon Vistara News

Newborn Baby: ನವಜಾತ ಶಿಶುವನ್ನು ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಚರಂಡಿಗೆ ಎಸೆದು ಓಡಿದ ಮಹಾತಾಯಿ!

newborn baby fond in a box

ರಾಯಚೂರು: ಮಹಾತಾಯಿಯೊಬ್ಬಳು ತನ್ನ ನವಜಾತ ಶಿಶುವೊಂದನ್ನು (Newborn Baby) ಬಾಕ್ಸ್‌ನಲ್ಲಿ ಪ್ಯಾಕ್‌ ಮಾಡಿ ದೇವದುರ್ಗ ಪಟ್ಟಣದ ಬಸ್‌ಸ್ಟ್ಯಾಂಡ್ (Devadurga Bus Stand) ಬಳಿ ಇರುವ ಚರಂಡಿಗೆ ಎಸೆದು (Throw down to drain) ಜಾಗ ಖಾಲಿ ಮಾಡಿರುವ ಘಟನೆ ನಡೆದಿದೆ. ಈ ಅಮಾನವೀಯ ಕೃತ್ಯಕ್ಕೆ ಎಲ್ಲೆಡೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಮಾಂಸದ ಮುದ್ದೆ ಸಮೇತ ನವಜಾತ ಶಿಶುವನ್ನು ತಾಯಿಯೊಬ್ಬಳು ಎಸೆದು ಓಡಿದ್ದಾಳೆ. ಬಸ್ ಸ್ಟ್ಯಾಂಡ್‌ನ ಚರಂಡಿಯಲ್ಲಿ ಬಾಕ್ಸ್‌ ಪತ್ತೆಯಾಗಿದ್ದು, ಮೃತ ಸ್ಥಿತಿಯಲ್ಲಿ ಶಿಶು ಪತ್ತೆಯಾಗಿದೆ.

ಮಗು ಎಸೆದ ಬಳಿಕ ಪಾಪಿ ತಾಯಿ ಅಲ್ಲಿಂದ ಓಡಿಹೋಗಿದ್ದಾಳೆ. ಹೀಗಾಗಿ ಚರಂಡಿಯಲ್ಲಿ ಸತ್ತು ಬಿದ್ದಿದ್ದ ಶಿಶುವಿನ ಕಳೇಬರವನ್ನು ಸಾರ್ವಜನಿಕರೇ ಹೊರಗೆ ತೆಗೆದಿದ್ದಾರೆ. ಇಂಥ ಒಂದು ಅಮಾನವೀಯ ಘಟನೆಗೆ ಹಿಡಿಶಾಪ ಹಾಕಿದ್ದಾರೆ. ಬಳಿಕ ಅವರೇ ಎಲ್ಲರೂ ಸೇರಿ ಆ ಶಿಶುವಿನ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರನ್ನು ಅಟ್ಟಾಡಿಸಿ ಹೊಡೆದ ಟೂರಿಸ್ಟ್ ಬೋಟ್ ಸಿಬ್ಬಂದಿ

ಉಡುಪಿ:‌ ಮಲ್ಪೆ ಬೀಚ್‌ನಲ್ಲಿ (Malpe Beach) ನೈತಿಕ ಪೊಲೀಸ್‌ಗಿರಿ (Moral policing) ನಡೆದ ಘಟನೆಯೊಂದು ವರದಿಯಾಗಿದೆ. ಟೂರಿಸ್ಟ್ ಬೋಟ್ ಸಿಬ್ಬಂದಿಯಿಂದಲೇ (Tourist boat crew) ಪ್ರವಾಸಿಗರ ಮೇಲೆ ಹಲ್ಲೆ (Attack on tourists) ನಡೆದಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಲ್ಲದೆ, ಹಲ್ಲೆ ವಿಡಿಯೊ ವೈರಲ್‌ (Video Viral) ಆಗಿದೆ.

ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆದರೆ, ಯಾವ ವಿಷಯಕ್ಕೆ ಹಲ್ಲೆ ಮಾಡಲಾಗಿದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೆ, ಪ್ರವಾಸಿಗರನ್ನು ಅಟ್ಟಾಡಿಸಿಕೊಂಡು ಹೋಗಿ ಹೊಡೆದಿರುವ ದೃಶ್ಯ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೀಚ್‌ನಲ್ಲಿ ಪ್ರವಾಸಿಗರು ಹೋಗುವಾಗ ಅವರ ಮೇಲೆ ದಾಳಿ ನಡೆಸಿದ ಟೂರಿಸ್ಟ್ ಬೋಟ್ ಸಿಬ್ಬಂದಿ ಏಕಾಏಕಿ ಹೊಡೆಯಲು ಶುರು ಮಾಡಿದ್ದಾರೆ. ಹಲ್ಲೆಕೋರರಿಂದ ತಪ್ಪಿಸಿಕೊಳ್ಳಲು ಈ ಪ್ರವಾಸಿಗರು ಹರಸಾಹಸಪಟ್ಟಿದ್ದಾರೆ. ಬುಧವಾರ (ನ.14) ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಾವಿರಾರು‌ ಪ್ರವಾಸಿಗರಿದ್ದ ವೇಳೆಯೇ ನೈತಿಕ ಪೊಲೀಸ್‌ಗಿರಿ ನಡೆಸಿರುವುದರ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಅಲ್ಲದೆ, ಈ ಬಗ್ಗೆ ಪೊಲೀಸ್‌ ಕೇಸ್‌ ದಾಖಲಾದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಹಲ್ಲೆ ಮಾಡಿದವರು ಟೂರಿಸ್ಟ್ ಬೋಟ್ ಸಿಬ್ಬಂದಿಯಾಗಿದ್ದರಿಂದ ಬೋಟ್‌ ವಿಚಾರವಾಗಿ ಇವರುಗಳ ಮಧ್ಯೆ ಯಾವುದಾದರೂ ತಕರಾರುಗಳು ನಡೆದಿದ್ದವೇ? ಇಲ್ಲವೇ ಗಲಾಟೆ ಮಾಡಿಕೊಂಡು ಬರಲಾಗಿದೆಯೇ? ಈ ಕಾರಣಕ್ಕಾಗಿ ಅವರು ಎಲ್ಲರೂ ಒಟ್ಟಾಗಿ ಬಂದು ಹೊಡೆದಿದ್ದಾರೆಯೇ? ಎಂಬುದು ಗೊತ್ತಾಗಿಲ್ಲ.

Murder Case : ಜೋಡಿ ಕೊಲೆಗೆ ಟ್ವಿಸ್ಟ್‌; ಗಂಡನ ಸಾಲ ತೀರಿಸಲು ಅತ್ತೆ-ಮಾವನನ್ನೇ ಕೊಂದಳು!

ಬೆಂಗಳೂರು ಗ್ರಾಮಾಂತರ: ಮೊನ್ನೆ ಸೂಲಿಬೆಲೆಯಲ್ಲಿ ಹೆತ್ತ ಮಗನಿಂದಲೇ ನಡೆದ ತಂದೆ- ತಾಯಿಯ ಜೋಡಿ ಕೊಲೆಯ (Murder Case) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ವಿಚಾರಣೆ ವೇಳೆ ರೋಚಕ ತಿರುವೊಂದು ಸಿಕ್ಕಿದೆ.

ಸೂಲಿಬೆಲೆ ಗ್ರಾಮದಲ್ಲಿ ಕಳೆದ 10ರಂದು ರಾಮಕೃಷ್ಣಪ್ಪ ಮತ್ತು ಮುನಿರಾಮಕ್ಕ ಎಂಬ ವೃದ್ಧ ದಂಪತಿ ಬರ್ಬರವಾಗಿ ಕೊಲೆಯಾಗಿದ್ದರು. ಜತೆಗೆ ಕೊಲೆ ವಿಚಾರ ತಿಳಿದು ಬಂದಿದ್ದ ವೃದ್ಧರ ಹೆಣ್ಮಕ್ಕಳು ಆಸ್ತಿಗಾಗಿ ಅಣ್ಣನೇ ಕೊಲೆ ಮಾಡಿದ್ದಾನೆ ಎಂದು ನರಸಿಂಹಮೂರ್ತಿ ಮನೆ ಮೇಲೆ ದಾಳಿ ನಡೆಸಿ ಆಕ್ರೋಶವನ್ನು ಹೊರ ಹಾಕಿದ್ದರು. ಹೀಗಾಗಿ ಕೊಲೆಯಾದ ವೃದ್ಧ ದಂಪತಿಯ ಮಗ ನರಸಿಂಹಮೂರ್ತಿಯನ್ನು ವಶಕ್ಕೆ ಪಡೆದಿದ್ದರು.

ವಿಚಾರಣೆ ನಡೆಸಿದ ಪೊಲೀಸರಿಗೆ ಕೊಲೆ ಕೇಸ್‌ನಲ್ಲಿ ತಿರುವು ಸಿಕ್ಕಿದೆ. ಆ ವೃದ್ಧ ದಂಪತಿಯನ್ನು ಕೊಲೆ ಮಾಡಿದ್ದು ನರಸಿಂಹಮೂರ್ತಿ ಅಲ್ಲ ಬದಲಾಗಿ ಆತನ ಪತ್ನಿ ಭಾಗ್ಯಮ್ಮ, ಮಗಳು ವರ್ಷಾ ಹಾಗೂ ಅಪ್ರಾಪ್ತ ಮಗ.

ಸಾಲದ ಸುಳಿಗೆ ಸಿಲುಕಿದ್ದ ನರಸಿಂಹಮೂರ್ತಿ

ನರಸಿಂಹಮೂರ್ತಿ ಟೂರ್ಸ್ ಆ್ಯಂಡ್‌ ಟ್ರಾವೆಲ್ಸ್, ಫೈನಾನ್ಸ್ ಎಂದು ಸಿಕ್ಕ ಸಿಕ್ಕ ಕೆಲಸ ಮಾಡಲು ಹೋಗಿ ಕೋಟ್ಯಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಇತ್ತ ನಿತ್ಯ ಮನೆ ಬಳಿ ಸಾಲಗಾರರು ಬಂದು ಹಣ ‌ನೀಡುವಂತೆ ಕಿರುಕುಳ‌ ನೀಡುತ್ತಿದ್ದರು. ಹೀಗಾಗಿ ಹಲವು ಸಲ ನರಸಿಂಹಮೂರ್ತಿ ನಾನು ಎಲ್ಲಾದರೂ ದೂರ ಹೋಗಿ ಸತ್ತು ಹೋಗುತ್ತೇನಿ ಎಂದು ಪತ್ನಿ ಬಳಿ ಹೇಳಿಕೊಂಡಿದ್ದ.

ಪತ್ನಿ ಭಾಗ್ಯಮ್ಮಳಿದು ಇದು ಚಿಂತೆಗೆ ದೂಡುವಂತೆ ಮಾಡಿತ್ತು. ಪತಿ ಏನಾದರೂ ಹೆಚ್ಚು ಕಡಿಮೆ ಮಾಡಿಕೊಂಡರೆ ಏನು ಗತಿ ಎಂದುಕೊಂಡಳು. ಹೀಗಾಗಿ ಜಮೀನು ಮಾರಾಟ ಮಾಡಿ ಸಾಲ ತೀರಿಸುವಂತೆ ಸಲಹೆ ನೀಡಿದ್ದಳು. ಅದೇ ರೀತಿ ನರಸಿಂಹಮೂರ್ತಿ ತಂದೆ-ತಾಯಿ ಬಳಿ ತನ್ನ ಭಾಗದ ಜಮೀನು ನೀಡುವಂತೆ ಕೇಳಿದ್ದಾನೆ. ಅದಕ್ಕೆ ವೃದ್ಧ ದಂಪತಿ ಜಮೀನನ್ನು ಆರು ಭಾಗ ಮಾಡಿ ಹೆಣ್ಣು ಮಕ್ಕಳು ಮತ್ತು ಮಗನಿಗೆ ಸಮನಾಗಿ ನೀಡುವುದಾಗಿ ಹೇಳಿದ್ದಾರೆ. ಹೀಗೆ ಮಾಡಿದರೆ ಬರುವ ಹಣದಿಂದ ಸಾಲ ತೀರಿಸಲು ಆಗಲ್ಲ ಎಂದು ನರಸಿಂಹಮೂರ್ತಿ ಸಿಟ್ಟಾಗಿ ವಾಪಸ್ ಮನೆಗೆ ಬಂದಿದ್ದ.

ಅತ್ತೆ-ಮಾವನ ಕೊಲೆಗೆ ಸ್ಕೆಚ್‌ ಹಾಕಿದ್ದಳು ಸೊಸೆ

ಇನ್ನೂ ಗಂಡನ ಸಾಲ ತೀರಿಸಲು ಏನಾದರೂ ಮಾಡಲೆಬೇಕು ಎಂದು ಪಣ ತೊಟ್ಟ ಪತ್ನಿ ಭಾಗ್ಯಮ್ಮ, ಮಗಳ ಜತೆ ಗೂಡಿ ಅತ್ತೆ- ಮಾವನನ್ನು ಕೊಲೆ ಮಾಡುವ ಸ್ಕೆಚ್‌ ಹಾಕಿದ್ದಾಳೆ. ಅದರಂತೆ ಕಳೆದ 09ರ ಸಂಜೆ ವೃದ್ಧ ದಂಪತಿ ಮನೆಯಲ್ಲಿರುವಾಗಲೇ ಎಂಟ್ರಿ ಕೊಟ್ಟ ಸೊಸೆ-ಮೊಮ್ಮಕ್ಕಳಿಗೆ ಅತ್ತೆ ಎದುರಾಗಿದ್ದಾರೆ. ಕೂಡಲೇ ಅತ್ತೆ ಮುನಿರಾಮಕ್ಕರ ತಲೆಗೆ ಬಲವಾಗಿ ಹೊಡೆದು ಸಾಯಿಸಿದ್ದಾರೆ. ಬಳಿಕ ಮಾವ ರಾಮಕೃಷ್ಣಪ್ಪ ಬರುವವರೆಗೂ ಕಾದು, ಬರುತ್ತಿದ್ದಂತೆ ಆತನ ತಲೆಗೂ ಬಲವಾಗಿ ರಾಡ್‌ನಿಂದ ಹೊಡೆದು ರಕ್ತವನ್ನೇ ಹರಿಸಿದ್ದಾರೆ.

ಹತ್ಯೆ ಮಾಡಿ ಮನೆಗೆ ವಾಪಸ್‌ ಆಗಿದ್ದ ಅಮ್ಮ-ಮಕ್ಕಳು

ವೃದ್ಧ ಅತ್ತೆ-ಮಾವರನ್ನು ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಅಮ್ಮ-ಮಗಳು ಹಾಗೂ ಮಗ ಮನೆಗೆ ಬೀಗ ಜಡಿದು ವಾಪಸ್‌ ಆಗಿದ್ದಾರೆ. ಇತ್ತ ರಾತ್ರಿ ಪತಿ ನರಸಿಂಹಮೂರ್ತಿ ಮ‌ನೆಗೆ ಬಂದು ಊಟ ಮಾಡಿ ಮಲಗುವಾಗ ವೇಳೆ ನಿಮ್ಮ ಅಪ್ಪ-ಅಮ್ಮನ್ನ ಕೊಲೆ ಮಾಡಿದ್ದಾಗಿ ಪತ್ನಿ ಹಾಗೂ ಮಗಳು ಹೇಳಿದ್ದಾರೆ.

ಇದನ್ನೂ ಓದಿ: Murder Case: ಸೂಲಿಬೆಲೆಯಲ್ಲಿ ರಾಡ್‌ನಿಂದ ಹೊಡೆದು ವೃದ್ಧ ದಂಪತಿಯ ಕೊಲೆ

ಈ ವಿಷಯ ಕೇಳಿ ಶಾಕ್ ಆದ ‌ನರಸಿಂಹಮೂರ್ತಿ, ಘಟನೆ ಬೆಳಕಿಗೆ ಬಂದಾಗ ಅವರೆ ಹೊಡೆದಾಡಿಕೊಂಡು ಸತ್ತಿದ್ದಾರೆ ಎಂದು ಹೇಳುವಂತೆ ಹೇಳಿದ್ದಾನೆ. ಹೆಂಡ್ತಿ-ಮಕ್ಕಳನ್ನು ಕಾಪಾಡಿಕೊಳ್ಳಲು ನಾಟಕವನ್ನೇ ಮಾಡಿದ್ದಾನೆ. ಆದರೆ ಪೊಲೀಸರು ತಮ್ಮದೆ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ತಾಯಿ- ಮಕ್ಕಳ ಕೊಲೆ ರಹಸ್ಯವನ್ನು ರಿವಿಲ್ ಮಾಡಿದ್ದಾರೆ. ಸತ್ಯ ಒಪ್ಪಿಕೊಳ್ಳುತ್ತಿದ್ದಂತೆ ಪತ್ನಿ ಭಾಗ್ಯಮ್ಮ, ಮಗಳು ವರ್ಷ, ಅಪ್ರಾಪ್ತ ಮಗ ಹಾಗೂ ಸತ್ಯವನ್ನು ಮುಚ್ಚಿಟ್ಟು ಕೊಲೆಗಾರರ ರಕ್ಷಣೆಗೆ ಮುಂದಾಗಿದ್ದ ನರಸಿಂಹಮೂರ್ತಿಯನ್ನು ಜೈಲಿಗಟ್ಟಿದ್ದಾರೆ. ಪತಿಯನ್ನು ಸಾಲದ ಸುಳಿಯಿಂದ ಬಿಡಿಸಬೇಕೆಂದರು ಸಾಕಿ ಸಲುಹಿದ್ದ ಅತ್ತೆ-ಮಾವನನ್ನೇ ಸೊಸೆಯೇ ಕೊಲೆ ಮಾಡಿದ್ದು ನಿಜಕ್ಕೂ ದುರಂತ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version